ISL 2025: ಫೈನಲ್ ಪಂದ್ಯದ ವೇಳೆ ಬೆಂಗಳೂರು ಎಫ್‌ಸಿ ಮಾಲೀಕ ಪಾರ್ಥ್ ಜಿಂದಾಲ್ ಮೇಲೆ ದಾಳಿ!
ಕಳೆದ ವಾರ ಕೋಲ್ಕತಾದ ಸಾಲ್ಟ್ ಲೇಕ್‌ನಲ್ಲಿ ನಡೆದಿದ್ದ ಬೆಂಗಳೂರು ಎಫ್‌ಸಿ ಹಾಗೂ ಮೊಹುನ್ ಬಗಾನ್ ನಡುವಣ 2025ರ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದ ವೇಳೆ ಬಿಎಫ್‌ಸಿ ಮಾಲೀಕ ಪಾರ್ಥ್ ಜಿಂದಾಲ್ ಅವರ ಮೇಲೆ ಪಟಾಕಿ ದಾಳಿ ನಡೆದಿದೆ. ಈ ಬಗ್ಗೆ ಬಿಎಫ್‌ಸಿ ಮಾಲೀಕ ಪಾರ್ಥ್ ಜಿಂದಾಲ್ ಅವರೇ ಟ್ವೀಟ್ ಮಾಡಿ ಕೋಲ್ಕತಾದ ಭದ್ರತೆ ಬಗ್ಗೆ ಆರೋಪ ಮಾಡಿದ್ದಾರೆ.

ಪಾರ್ಥ್ ಜಿಂದಾಲ್ ಮೇಲೆ ಪಟಾಕಿ ದಾಳಿ.

ಕೋಲ್ಕತಾ: ಮೊಹುನ್ ಬಗಾನ್ ಸೂಪರ್ ಜಯಂಟ್ಸ್ (MBJ) ಹಾಗೂ ಬೆಂಗಳೂರು ಎಫ್‌ಸಿ (BFC) ತಂಡಗಳ ನಡುವೆ ನಡೆದಿದ್ದ 2025ರ ಇಂಡಿಯನ್ ಸೂಪರ್ ಲೀಗ್ (ISL 2025) ಟೂರ್ನಿಯ ಫೈನಲ್ ಪಂದ್ಯದ ವೇಳೆ ಬಿಎಫ್‌ಸಿ ಮಾಲೀಕ ಪಾರ್ಥ್ ಜಿಂದಾಲ್ (Parth Jindal) ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಬೆಂಗಳೂರು ಎಫ್‌ಸಿ ತಂಡದ ಮಾಲೀಕ ಪಾರ್ಥ್ ಜಿಂದಾಲ್ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೋಲ್ಕತ್ತಾದಲ್ಲಿ ನಡೆದ ಪಂದ್ಯದ ವೇಳೆ ಗ್ಯಾಲರಿಗೆ ಉರಿಯುತ್ತಿರುವ ಪಟಾಕಿಯನ್ನು ಎಸೆಯಲಾಗಿದ್ದು, ಅದರ ಬೆಂಬಲಿಗರೊಬ್ಬರ ಕಣ್ಣಿಗೆ ಗಾಯವಾಗಿದೆ ಎಂದು ಬಿಎಫ್‌ಸಿ ತನ್ನ ಆರೋಪ ಮಾಡಿದೆ.
ಕಳೆದ ಹಲವು ವರ್ಷಗಳಿಂದ ಬೆಂಗಳೂರು ಎಫ್‌ಸಿ ಪಂದ್ಯಗಳನ್ನು ವೀಕ್ಷಿಸಲು ಮಾಲೀಕ ಪಾರ್ಥ್ ಜಿಂದಾಲ್ ಕ್ರೀಡಾಂಗಣಕ್ಕೆ ಹೋಗುವುದು ವಾಡಿಕೆ. ಅದರಂತೆ ಕೋಲ್ಕತಾದ ಸಾಲ್ಟ್ ಲೇಕ್‌ನಲ್ಲಿ ನಡೆದಿದ್ದ ಬೆಂಗಳೂರು ಎಫ್‌ಸಿ ಹಾಗೂ ಮೊಹುನ್ ಬಗಾನ್ ನಡುವಣ ಫೈನಲ್ ಪಂದ್ಯವನ್ನು ವೀಕ್ಷಿಸಲು ಅವರು ಮೈದಾನಕ್ಕೆ ತೆರಳಿದ್ದರು. ಈ ಪಂದ್ಯದ ಎರಡನೇ ಅವಧಿಯಲ್ಲಿ ಮುನ್ನಡೆ ಸಾಧಿಸಿದ್ದರ ಹೊರತಾಗಿಯೂ ಮೊಹುನ್ ಬಗಾನ್ ತಂಡ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಬಿಎಫ್‌ಸಿ ತಂಡವನ್ನು 2-1 ಅಂತರದಲ್ಲಿ ಮಣಿಸಿತ್ತು.
Sunil Chhetri: ನಿವೃತ್ತಿ ನಿರ್ಧಾರ ಹಿಂಪಡೆದ ಫುಟ್ಬಾಲ್ ದಿಗ್ಗಜ ಸುನಿಲ್ ಚೆಟ್ರಿ!
"ಬೆಂಗಳೂರು ಎಫ್‌ಸಿ ತಂಡದ ನಮ್ಮ ಹುಡುಗರಿಗೆ ಬೆಂಬಲ ನೀಡುತ್ತಿದ್ದ ಸಂದರ್ಭದಲ್ಲಿ ಪಟಾಕಿ ತನಗೆ ತಗುಲಿತ್ತು. ನಾವು ನಿರೀಕ್ಷೆ ಮಾಡಿಸಿದಷ್ಟು ಭದ್ರತೆ ನಮಗೆ ಕೋಲ್ಕತಾದಲ್ಲಿ ನೀಡಲಾಗಿದೆಯೇ?," ಎಂದು ಪಾರ್ಥ್ ಜಿಂದಾಲ್ ಪಂದ್ಯದ ವೇಳೆ ಶನಿವಾರ ಟ್ವೀಟ್ ಮಾಡಿದ್ದರು. ಆ ಮೂಲಕ ಕೋಲ್ಕತಾದಲ್ಲಿ ಭದ್ರತೆ ಬಗ್ಗೆ ಪ್ರಶ್ನೆಯನ್ನು ಮಾಡಿದ್ದರು.
ಫೈನಲ್‌ನಲ್ಲಿ ಬಿಎಫ್‌ಸಿಗೆ ಸೋಲು
ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದಿದ್ದ ಏಪ್ರಿಲ್ 12 ರಂದು ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಮೊಹುನ್ ಬಗಾನ್ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ತೀವ್ರ ಹೋರಾಟ ನಡೆದಿತ್ತು. ಆದರೆ, ಹೆಚ್ಚುವರಿ ಅವಧಿಯಲ್ಲಿ ಗೋಲು ಗಳಿಸಿದ ಮೊಹುನ್ ಬಗಾನ್ ತಂಡ 2-1 ಅಂತರದಲ್ಲಿ ಬಿಎಫ್‌ಸಿ ತಂಡವನ್ನು ಮಣಿಸಿತು. ಆ ಮೂಲಕ ಚಾಂಪಿಯನ್ ಆಯಿತು.
Have just been hit with a firecracker at the stadium while I’m cheering for my boys @bengalurufc is this the security we can expect in an ISL final in Kolkata?
— Parth Jindal (@ParthJindal11) April 12, 2025
ಈ ಫೈನಲ್ ಪಂದ್ಯದ ಮೊದಲ ಅವಧಿಯಲ್ಲಿ ಎರಡೂ ತಂಡಗಳಿಂದ ತೀವ್ರ ಪೈಪೋಟಿ ನಡೆದಿತ್ತು. ಇದರ ಪರಿಣಾಮವಾಗಿ ಎರಡೂ ತಂಡಗಳು ಗೋಲು ರಹಿತವಾಗಿ ಮೊದಲನೇ ಅವಧಿಯನ್ನು ಮುಗಿಸಿದವು. ಅಂದ ಹಾಗೆ ಪಂದ್ಯದ ಎರಡನೇ ಅವಧಿಯಲ್ಲಿ ಬಿಎಫ್‌ಸಿ ಖಾತೆ ತೆರೆದು ಮುನ್ನಡೆ ಪಡೆದಿತ್ತು. 49ನೇ ನಿಮಿಷದಲ್ಲಿ ಮೊಹುನ್ ಬಗಾನ್ ತಂಡದ ಅಲ್ಬಟ್ರೊ ರೊಡ್ರಿಗಸ್ ಅವರು ತಮ್ಮದೇ ಗೋಲಿಗೆ ಚೆಂಡನ್ನು ಹೊಡೆಯುವ ಮೂಲಕ ಬೆಂಗಳೂರು ತಂಡಕ್ಕೆ ಒಂದು ಗೋಲನ್ನು ಉಡುಗೊರೆಯಾಗಿ ನೀಡಿದ್ದರು.
ನಂತರ ಪಂದ್ಯದ 72ನೇ ನಿಮಿಷದಲ್ಲಿ ಜೇಸನ್ ಕಮಿಂಗ್ಸಾ ಅವರು ಪೆನಾಲ್ಟ್ ಕಿಕ್‌ನಲ್ಲಿ ಮೊಹುನ್ ಬಗಾನ್‌ಗೆ ಒಂದು ಗೋಲು ತಂದುಕೊಟ್ಟರು. ಪಂದ್ಯದ ನಿಗದಿತ 90 ನಿಮಿಷಗಳ ಮುಕ್ತಾಯಕ್ಕೆ ಪಂದ್ಯ 1-1 ಅಂತರದಲ್ಲಿ ಸಮಬಲವನ್ನು ಸಾಧಿಸಿತ್ತು. ನಂತರ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ರೆಫರಿಗಳು ಹೆಚ್ಚುವರಿ ಸಮಯಕ್ಕೆ ಮೊರೆ ಹೋದರು. ಕೇವಲ 6 ನಿಮಿಷದಲ್ಲಿ ಜೇಮಿ ಮೆಕ್‌ಲಾರೆನ್ ಚೆಂಡನ್ನು ಗೋಲು ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಮೊಹುನ್ ಬಗಾನ್ ಚಾಂಪಿಯನ್ ಆಯಿತು.