ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ದಾಖಲೆಯ ಶತಕ ಸಿಡಿಸಿ ಅಮ್ಮನ ತ್ಯಾಗವನ್ನು ಸ್ಮರಿಸಿದ ವೈಭವ್‌ ಸೂರ್ಯವಂಶಿ!

Vaibhav Suryavanshi statement: ಗುಜರಾತ್‌ ಟೈಟನ್ಸ್‌ ವಿರುದ್ದ ದಾಖಲೆಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಶತಕ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಹೊಸ ಸೆನ್ಸೇಷನ್‌ ವೈಭವ್‌ ಸೂರ್ಯವಂಶಿ ತಮ್ಮ ಯಶಸ್ವಿಗೆ ತನ್ನ ಪೋಷಕರೇ ಕಾರಣ ಎಂದು ಬಹಿರಂಗಪಡಿಸಿದ್ದಾರೆ.

ದಾಖಲೆಯ ಸೆಂಚುರಿ ಬಾರಿಸಿ ಅಮ್ಮನ ತ್ಯಾಗವನ್ನು ನೆನೆದ ವೈಭವ್!

ವೈಭವ್‌ ಸೂರ್ಯವಂಶಿ

Profile Ramesh Kote Apr 29, 2025 3:39 PM

ಜೈಪುರ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ದಾಖಲೆಯ ಶತಕ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ (Rajathan Royals) ತಂಡದ ಯಂಗ್‌ ಸೆನ್ಸೇಷನ್‌ ವೈಭವ್‌ ಸೂರ್ಯವಂಶಿ (Vaibhav Suryavanshi), ಭಾರತ ತಂಡವನ್ನು ಪ್ರತಿನಿಸಿಧಿಸಿ, ರಾಷ್ಟ್ರೀಯ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಬೇಕೆಂಬ ಕನಸನ್ನು ರಿವೀಲ್‌ ಮಾಡಿದ್ದಾರೆ. ಅಲ್ಲದೆ ತಮ್ಮ ಕ್ರಿಕೆಟ್‌ ಯಶಸ್ಸಿನ ಶ್ರೇಯ ನನ್ನ ಪೋಷಕರಿಗೆ ಸಲ್ಲಬೇಕೆಂದು ತಿಳಿಸಿದ್ದಾರೆ. ಇದರ ಜೊತೆಗೆ ವಿಶೇಷವಾಗಿ ತಮ್ಮ ಅಮ್ಮನ ತ್ಯಾಗ ಹಾಗೂ ಪಾತ್ರವನ್ನು ರಿವೀಲ್‌ ಮಾಡಿದ್ದಾರೆ. ಗುಜರಾತ್‌ ಟೈಟನ್ಸ್‌ ವಿರುದ್ದ ಸೋಮವಾರದ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ವೆಸ್ಟ್‌ ಇಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌ ಬಳಿಕ ಐಪಿಎಲ್‌ನಲ್ಲಿ ಎರಡನೇ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಐಪಿಎಲ್‌ನ ಈ ಸೀಸನ್‌ನಲ್ಲಿ ವೈಭವ್‌ ಸೂರ್ಯವಂಶಿ ಪ್ರಮುಖ ಆಕರ್ಷಣೆಯಾಗಿದೆ. ಐಪಿಎಲ್‌ನ ಎರಡನೇ ವೇಗದ ಶತಕ ಸಿಡಿಸುವ ಮೂಲಕ ವೈಭವ್‌ ಸೂರ್ಯವಂಶಿ ಹಲವು ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್‌ ವೆಬ್‌ಸೈಟ್‌ ಅಪ್‌ಲೋಡ್‌ ಮಾಡಿರುವ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ವೈಭವ್‌ ಸೂರ್ಯವಂಶಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

Vaibhav Suryavanshi: ವೈಭವದ ಬ್ಯಾಟಿಂಗ್‌ ಮೂಲಕ ಹಲವು ದಾಖಲೆ ಬರೆದ ವೈಭವ್ ಸೂರ್ಯವಂಶಿ

ಭಾರತ ತಂಡವನ್ನು ಪ್ರತಿನಿಧಿಸುವುದು ನನ್ನ ಗುರಿ

"ಭಾರತ ತಂಡವನ್ನು ಪ್ರತಿನಿಧಿಸುವ ಹಂತಕ್ಕೆ ತಲುಪಲು ಇಂದಿನಿಂದ ಇನ್ನಷ್ಟು ಕಠಿಣ ಪರಿಶ್ರಮ ಹಾಗೂ ಇನ್ನೂ ಹೆಚ್ಚಿನ ಉತ್ತಮ ಪ್ರದರ್ಶನಗಳನ್ನು ತೋರಬೇಕೆಂಬುದು ಸತ್ಯ. ಭಾರತ ತಂಡವನ್ನು ಪ್ರತಿನಿಧಿಸಿ, ರಾಷ್ಟ್ರೀಯ ತಂಡಕ್ಕಾಗಿ ಒಳ್ಳೆಯ ಕೊಡುಗೆ ನೀಡುವವರೆಗೂ ನಾನು ಕಠಿಣ ಪರಿಶ್ರಮವನ್ನು ಪಡುತ್ತೇನೆ," ಎಂದು ವೈಭವ್‌ ಸೂರ್ಯವಂಶಿ ಹೇಳಿದ್ದಾರೆ.

ಅಮ್ಮನ ತ್ಯಾಗವನ್ನು ನೆನೆದ ವೈಭವ್‌

ಗುಜರಾತ್‌ ಟೈಟನ್ಸ್‌ ಎದುರು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ ಬಳಿಕ ಮಾತನಾಡಿದ ವೈಭವ್‌ ಸೂರ್ಯವಂಶಿ, ತಮ್ಮ ಪೋಷಕರಿಗೆ ಗೌರವವನ್ನು ಸಲ್ಲಿಸಿದರು. ತನ್ನ ಯಶಸ್ಸಿಗೆ ನ್ನ ಪೋಷಕರೇ ಕಾರಣ ಎಂದ ವೈಭವ್‌, ಅಪ್ಪ ನನಗಾಗಿ ಎಲೆ ಕಾರಿ ಮರಿಯಂತೆ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.‌



"ನಾನು ಇಂದು ಏನೇ ಆಗಿದ್ದರೂ ಅದರ ಶ್ರೇಯ ನನ್ನ ಪೋಷಕರಿಗೆ ಸಲ್ಲಬೇಕಾಗಿದೆ. ನನ್ನ ಅಮ್ಮ ಮಧ್ಯ ರಾತ್ರಿ 2 ಗಂಟೆಗೆ ನಿದ್ದೆಯಿಂದ ಎದ್ದೇಳುತ್ತಿದ್ದರು ಹಾಗೂ ನನ್ನನ್ನು ಅಭ್ಯಾಸಕ್ಕೆ ಕಳುಹಿಸುತ್ತಿದ್ದರು. ಅಮ್ಮ ರಾತ್ರಿ 11ಕ್ಕೆ ಮಲಗುತ್ತಿದ್ದರು ಹಾಗೂ ಅವರು ಕೇವಲ ಮೂರು ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಿದ್ದರು. ನನಗಾಗಿ ಅವರು ಅಡುಗೆ ಮಾಡುತ್ತಿದ್ದರು. ನನ್ನ ತಂದೆ ಕೂಡ ಬೇಗ ಎದ್ದೇಳುತ್ತಿದ್ದರು," ಎಂದು ಐಪಿಎಲ್‌ನಲ್ಲಿ ಅತ್ಯಂತ ವೇಗದ ಶತಕ ಶತಕ ಸಿಡಿಸಿ ಭಾರತೀಯ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

"ನನ್ನ ಕ್ರಿಕೆಟ್‌ ಬದುಕಿಗಾಗಿ, ಅಪ್ಪ ಕೆಲವನ್ನು ಬಿಟ್ಟರು. ನನ್ನ ಅಣ್ಣ ಅಪ್ಪನ ಕೆಲಸವನ್ನು ವಹಿಸಿಕೊಂಡರು ಹಾಗೂ ಮನೆಯನ್ನು ನಿರ್ವಹಿಸಿದರು. ಅಪ್ಪ ನನ್ನ ಕ್ರಿಕೆಟ್‌ ಕೆರಿಯರ್‌ಗಾಗಿ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿಟ್ಟರು. ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದನ್ನು ಅವರು ನಂಬಿದ್ದರು. ಇವತ್ತು ನನ್ನಿಂದ ಯಾವುದೇ ಫಲಿತಾಂಶ ಮೂಡಿಬಂದಿದ್ದರೂ ಇದರ ಶ್ರೇಯ ನನ್ನ ತಂದೆಗೆ ಸಲ್ಲಬೇಕು," ಎಂದು ವೈಭವ್‌ ಸೂರ್ಯವಂಶಿ ಹೇಳಿದ್ದಾರೆ.