Basanagouda Patil Yatnal: ಈ ಬಾರಿ ಪಾಕಿಸ್ತಾನ ಸರ್ವನಾಶ ಆಗ್ಬೇಕು: ಯತ್ನಾಳ್ ಕಿಡಿ
Basanagouda Patil Yatnal: ಕಾಂಗ್ರೆಸ್ ಹಿಂದೂಗಳ ಪಾರ್ಟಿಯಲ್ಲಾ, ಅದು ಹುಟ್ಟಿದ್ದೇ ಮುಸ್ಲಿಮರಿಗಾಗಿ. ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ ಇದ್ದ ಹಾಗೆ. ಅವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿಯಾಗಲಿ. ಅವರು ಟೋಪಿಯನ್ನು ಖುಷಿಯಿಂದ ಹಾಕಿಕೊಳ್ಳುತ್ತಾರೆ. ಆದರೆ, ಕುಂಕುಮ-ಭಂಡಾರ ಹಚ್ಚಿಕೊಳ್ಳಲ್ಲ ಎಂದು ಶಾಸಕ ಬಸನಗೌಡ ಯತ್ನಾಳ್ ಟೀಕಿಸಿದ್ದಾರೆ.


ಹುಬ್ಬಳ್ಳಿ: ಕರ್ನಾಟಕದಲ್ಲಿ ನಾವು ಹಿಂದೂಗಳ ಪರ ಮಾತನಾಡಿದ್ದು ಕೆಲವರಿಗೆ ಹಿಡಿಸುತ್ತಿಲ್ಲ. ಹಿಂದೂಗಳಲ್ಲಿ ಕೂಡ ಕೆಲ ದ್ರೋಹಿಗಳು ಇಲ್ಲಿದ್ದಾರೆ. ಕಾಂಗ್ರೆಸ್ ಹಿಂದೂಗಳ ಪಾರ್ಟಿಯಲ್ಲಾ, ಅದು ಹುಟ್ಟಿದ್ದೇ ಮುಸ್ಲಿಮರಿಗಾಗಿ. ಎಲ್ಲಿವರೆಗೆ ಮುಸ್ಲಿಮರು ದೇಶದಲ್ಲಿ ಇರುತ್ತಾರೋ ಅಲ್ಲಿವರೆಗೆ ಕಲ್ಲು ಹೊಡೆಯುತ್ತಿರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಯತ್ನಾಳ್ ಅವರು, ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ ಇದ್ದ ಹಾಗೆ. ಅವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿಯಾಗಲಿ. ಅಲ್ಲಿನ ಮಾಧ್ಯಮಗಳು ಸಿದ್ದರಾಮಯ್ಯರನ್ನು ತೋರಿಸುತ್ತಿವೆ. ಅವರು ಟೋಪಿಯನ್ನು ಖುಷಿಯಿಂದ ಹಾಕಿಕೊಳ್ಳುತ್ತಾರೆ. ಆದರೆ, ಕುಂಕುಮ-ಭಂಡಾರ ಹಚ್ಚಿಕೊಳ್ಳಲ್ಲ. ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಸಂತೋಷ್ ಲಾಡ್ ಮೋದಿ ಮುಂದೆ ಬಚ್ಚಾ. ಹೀಗೆ ಮಾತಾನಾಡಿದರೆ ರಾಹುಲ್ ಗಾಂಧಿ ಖುಷಿಯಾಗ್ತಾರೆ. ತನ್ನ ಮಂತ್ರಿ ಸ್ಥಾನ ಉಳಿಯುತ್ತೆ ಅಂತ ಆ ರೀತಿ ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಹೇಳಿದ್ದು ನೋಡಿದ್ರೆ ಒಬ್ಬ ದಲಿತ ಕೂಡ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ಕಿಡಿಕಾರಿದ್ದಾರೆ.
ನಮ್ಮಲ್ಲಿರುವ ಅಣು ಬಾಂಬ್‌ಗಳು ಪಟಾಕಿ ಹಚ್ಚಲು ಇಲ್ಲ. ಇರೋದ್ರಲ್ಲಿ ನಾಲ್ಕು ಹಾಕಿದ್ರೆ ಅವರು ಸರ್ವನಾಶ ಆಗ್ತಾರೆ. ಭಾರತ ಶಕ್ತಿಯನ್ನು ಯಾರು ಹಗುರವಾಗಿ ಪರಿಗಣಿಸಬಾರದು. ಈ ಸಲ ಪಾಕಿಸ್ತಾನ ಅಂತ್ಯವಾಗಬೇಕು. ಭಾರತ ಒಳಗಿನಿಂದ ಮತ್ತು ಹೊರಗಿನಿಂದ ವೈರಿಗಳನ್ನು ಎದುರಿಸಬೇಕಿದೆ. ಭಾರತದಲ್ಲಿ ಹಿಂದೂ ದ್ರೋಹಿಗಳು ಹೆಚ್ಚಾಗಿದ್ದಾರೆ. ಯುದ್ಧವಾದರೆ ಅವರ ಅಸಲಿತನ ಹೊರಗೆ ಬರುತ್ತೆ. ಪಾಕಿಸ್ತಾನ, ಬಾಂಗ್ಲಾದೇಶ ಸತ್ಯಾನಾಶವಾಗಬೇಕು. ಅವು ಎರಡು ಭಾರತ ದೇಶದಲ್ಲಿ ಸೇರಬೇಕು ಎಂದು ಯತ್ನಾಳ್ ಹೇಳಿದರು.
ರೈಲ್ವೇ ಪರೀಕ್ಷೆಯಲ್ಲಿ ಮಂಗಳಸೂತ್ರಕ್ಕೆ ನಿಷೇಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಯಾರೇ ಮಾಡಿದರೂ ಕೂಡ ಅದು ತಪ್ಪೇ. ಮಂಗಳ ಸೂತ್ರಕ್ಕೆ ಕೈ ಹಾಕಿದವರನ್ನು ವಜಾ ಮಾಡಬೇಕು ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಘೋಷಣೆ; ವೇದಿಕೆಯಲ್ಲೇ ಎಸ್‌ಪಿ ವಿರುದ್ಧ ಸಿಎಂ ಗರಂ
ಶಾಸಕರ ಅಮಾನತು ರದ್ದುಗೊಳಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಸದನದಲ್ಲಿ ಹೋಗಿ ದಾಂಧಲೆ ಮಾಡಿ ಅಂತ ಹೇಳಿದವರೇ ವಿಜಯೇಂದ್ರ. ಅವರ ಬಗ್ಗೆ ಬಿಜೆಪಿಯಲ್ಲೇ ದೊಡ್ಡ ಅಸಮಾಧಾನ ಇದೆ. ಅಪ್ರಬುದ್ಧ ವ್ಯಕ್ತಿಯನ್ನು ಅಧ್ಯಕ್ಷ ಮಾಡಿದ್ದೇ ತಪ್ಪು. ಸ್ಪೀಕರ್ ಕುರ್ಚಿ ಬಳಿ ಹೋಗಿ ಯಾರು ಹೋರಾಟ ಮಾಡಿದರೂ ತಪ್ಪೇ. ಸದನದ ಬಾವಿಯಲ್ಲಿ ಮಾತ್ರ ನಾವು ಹೋರಾಟ ನಡೆಸಬೇಕು. ಕೆಲ ಚಮಚಾಗಿರಿ ಮಾಡೋ ಶಾಸಕರು ಬಹಳ ಹೆಚ್ಚಾಗಿದ್ದಾರೆ. ನನ್ನ ಉಚ್ಚಾಟನೆ ಮಾಡಿದ್ದರಿಂದ ಅವರ ಯಾವ ಆದೇಶದಿಂದ ಏನೂ ಆಗಲ್ಲ. ಪಕ್ಷ ಕಟ್ಟೋ ಬಗ್ಗೆ ಮುಂದೆ ನೋಡೋಣ ಎಂದು ಯತ್ನಾಳ್ ಹೇಳಿದರು.