ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bharti Singh: ಭಾರ್ತಿ ಸಿಂಗ್ ಥಾಯ್ಲೆಂಡ್‌ ಪ್ರವಾಸ: ಕುಟುಂಬ-ದೇಶದ ಬಗ್ಗೆ ಕಾಳಜಿಯಿಲ್ಲ ಎಂದ ನೆಟ್ಟಿಗರು

ಬಾಲಿವುಡ್ ಖ್ಯಾತ ಕಾಮಿಡಿ ಕ್ವೀನ್ ಭಾರ್ತಿ ಸಿಂಗ್ ವಿದೇಶಕ್ಕೆ ತೆರಳಿ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ. ಯುದ್ಧದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತಾದ ವಿವರ ಇಲ್ಲಿದೆ.

ಕಾಮಿಡಿ ಕ್ವಿನ್ ಭಾರ್ತಿ ಸಿಂಗ್ ಥಾಯ್ಲೆಂಡ್‌ ಪ್ರವಾಸ; ನೆಟ್ಟಿಗರಿಂದ ಆಕ್ರೋಶ

Bharti Singh

Profile Pushpa Kumari May 12, 2025 8:40 PM

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಕೆಲ ದಿನಗಳಿಂದ ಅಘೋಷಿತ ಯುದ್ಧ ನಡೆಯುತ್ತಲೇ ಇದ್ದು ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಭಾರತದಲ್ಲಿ ಈ ಸಂಬಂಧಿತ ಅನೇಕ ನಿಯಮ ಪಾಲಿಸಲಾಗುತ್ತಿದೆ. ಇಂತಹ ಉದ್ವಿಗ್ನತೆ ಪರಿಸ್ಥಿತಿಯಲ್ಲಿ ಅನೇಕ ಸೆಲೆಬ್ರಿಟಿಗಳು ದೇಶದ ನಿರ್ಣಯಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿಕೆ ನೀಡಿ ಬೆಂಬಲ ಸೂಚಿಸಿದ್ದಾರೆ. ಇನ್ನು ಕೆಲವರು ಯುದ್ಧಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಇಂತಹ ವಿಚಾರದಿಂದ ದೂರ ಉಳಿದದ್ದೂ ಇದೆ. ಇದೀಗ ಬಾಲಿವುಡ್ ಖ್ಯಾತ ಕಾಮಿಡಿ ಕ್ವೀನ್ ಭಾರ್ತಿ ಸಿಂಗ್ (Bharti Singh) ಕೂಡ ವಿದೇಶಕ್ಕೆ ತೆರಳಿ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ. ಯುದ್ಧದಂತಹ ಸಂದಿಗ್ಧ ಪರಿಸ್ಥಿತಿ ಯಲ್ಲಿಯೂ ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಭಾರತ-ಪಾಕಿಸ್ತಾನದ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಹಾಸ್ಯನಟಿ ಭಾರ್ತಿ ಸಿಂಗ್ ಥಾಯ್ಲೆಂಡ್‌ನಲ್ಲಿರುವುದಕ್ಕೆ ಟೀಕೆಗಳನ್ನು ಎದುರಿಸುವಂತಾಗಿದೆ. ದೇಶವು ಇಂತಹ ಸಮಸ್ಯೆ ಎದುರಿಸುತ್ತಿರುವಾಗ ಅವರು ಪ್ರವಾಸದಂತಹ ಮೋಜಿನಲ್ಲಿ ತೊಡಗಿರುವುದಕ್ಕೆ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಪ್ರವಾಸದ ವಿಡಿಯೊ ಶೇರ್ ಮಾಡಿಕೊಂಡಿದ್ದು ಟೀಕೆಗೆ ಗುರಿಯಾಗುವ ಪರಿಸ್ಥಿತಿ ಎದುರಾಗುವಂತೆ ಮಾಡಿದೆ.

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಭಾರ್ತಿ ಸಿಂಗ್ ನಿಮ್ಮ ಕುಟುಂಬ ಅಮೃತಸರದಲ್ಲಿ ಉದ್ವಿಗ್ನತೆ ಮತ್ತು ಅನಿಶ್ಚಿತತೆ ಪರಿಸ್ಥಿತಿ ಎದುರಿಸುತ್ತಿರುವಾಗ ಥಾಯ್ಲೆಂಡ್‌ ಪ್ರವಾಸಕ್ಕೆ ಹೋಗಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ತಿಳಿಸಿದ್ದಾರೆ. ದೇಶದಲ್ಲಿ ಗಡಿವಿವಾದ, ಯುದ್ಧಗಳ ಪರಿಸ್ಥಿತಿ ನಡುವೆಯೂ ನಿರೂಪಕಿ ಭಾರ್ತಿ ಸಿಂಗ್ ಅವರಿಗೆ ಥಾಯ್ಲೆಂಡ್‌ ಪ್ರವಾಸವೇ ದೊಡ್ಡದಾಯ್ತೆ? ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ನಿರೂಪಕಿ ಭಾರ್ತಿ ಸಿಂಗ್ ಅವರು ದೇಶದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ನೆಗೆಟಿವ್ ಕಾಮೆಂಟ್‌ಗೆ ಭಾವುಕರಾಗಿದ್ದು ಈ ಕುರಿತು ಇದೀಗ ಸ್ಪಷ್ಟನೆ ನೀಡಿದ್ದಾರೆ.

ದೇಶವು ಕದನ ಪರಿಸ್ಥಿತಿ ಎದುರಿಸುತ್ತಿದೆ ಆ ಗಂಭೀರತೆ ಬಗ್ಗೆ ನನಗೂ ಅರಿವಿದೆ. ತನ್ನ ಕುಟುಂಬವು ಅಮೃತಸರದಲ್ಲಿ ಸುರಕ್ಷಿತವಾಗಿದೆ. ನನ್ನ ದೇಶ ಮತ್ತು ಸರ್ಕಾರದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಭಾರತವು ತುಂಬಾ ಬಲಿಷ್ಠ ರಾಷ್ಟ್ರವಾಗಿದ್ದು ಎಂತಹ ಪರಿಸ್ಥಿತಿಯನ್ನು ಕೂಡ ಸಮರ್ಥವಾಗಿ ನಿಭಾಯಿಸುವ ಸೇನಾ ಬಲವಿದೆ‌. ಆದರೆ ನಾನು ಇಲ್ಲಿಗೆ ಕೆಲಸಕ್ಕಾಗಿ ಬಂದಿದ್ದೇನೆ ಹೊರತು ರಜೆಯ ಮೋಜಿಗಾಗಿ ಅಲ್ಲ ಎಂದು ಎಲ್ಲರಿಗೂ ಸ್ಪಷ್ಟ ಪಡಿಸಲು ಬಯಸುತ್ತೇನೆ. 3-4 ತಿಂಗಳ ಹಿಂದೆ ಥಾಯ್ಲೆಂಡ್‌ ಬರುವ ಯೋಜನೆ ಇತ್ತು. ಹೀಗಾಗಿ ಬೇಕಾದ ಅಷ್ಟು ಸಿದ್ಧತೆ ಮಾಡಿಕೊಂಡಿದ್ದೆವು. ಕೊನೆಯ ಕ್ಷಣದಲ್ಲಿ ಶೂಟಿಂಗ್ ಕ್ಯಾನ್ಸಲ್ ಮಾಡುವುದು ಸರಿಯಲ್ಲ. ಹೀಗಾಗಿ ಕಳೆದ 10 ದಿನಗಳ ಕಾಲ ಥಾಯ್ಲೆಂಡ್‌ನಲ್ಲಿ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: Pabbar Movie: ಸೆಟ್ಟೇರಿತು ಗೀತಾ ಪಿಕ್ಚರ್ಸ್ 4ನೇ ಸಿನಿಮಾ.. ಧೀರೆನ್-ಸಂದೀಪ್ ಸುಂಕದ್ ಚಿತ್ರಕ್ಕೆ 'ಪಬ್ಬಾರ್' ಟೈಟಲ್ ಫಿಕ್ಸ್

ನಿಮ್ಮ ಕಾಮೆಂಟ್‌ಗಳನ್ನು ಓದಿದಾಗ, ನನಗೆ ಬೇಸರವಾಗುತ್ತೆ ಆದರೆ ಕೋಪ ಬರುವುದಿಲ್ಲ. ನಕಲಿ ಸುದ್ದಿಗಳು ಸತ್ಯವನ್ನು ಮರೆಮಾಚುತ್ತದೆ. ನನ್ನ ಕುಟುಂಬ ಹಾಗೂ ದೇಶದ ಬಗ್ಗೆ ನನಗೂ ಕಾಳಜಿ ಇದೆ ಎಂದು ತಿಳಿಸಿದ್ದಾರೆ. ನಗುವಿನ ರಾಣಿ ಎಂದೇ ಖ್ಯಾತರಾದ ನಿರೂಪಕಿ ಭಾರ್ತಿ ಸಿಂಗ್ ಅವರು ʼದಿ ಕಪಿಲ್ ಶರ್ಮಾ ಶೋʼ ಮೂಲಕ ಜನಪ್ರಿಯರಾಗಿದ್ದು ಇದುವರೆಗೆ ಅನೇಕ ಶೋಗಳ ನಿರೂಪಣೆ ಸಹ ಮಾಡಿದ್ದಾರೆ. ಪಂಚಿಂಗ್ ಡೈಲಾಗ್ ನೀಡುತ್ತಲೇ ಅಪಾರ ಅಭಿಮಾನಿಗಳ ಗಮನ ಸೆಳೆದ ನಿರೂಪಕಿ ಇವರಾಗಿದ್ದಾರೆ.