Bhagya Lakshmi Serial: ಕಿಶನ್ ತುಲಾಭಾರಕ್ಕೆ ಎಲ್ಲ ರೆಡಿ: ಇದು ಫೇಲ್ ಆಗುತ್ತೆ ಎಂದು ಕಾದು ಕುಳಿದ ಮೀನಾಕ್ಷಿ
ಕಿಶನ್ನ ತುಲಾಭಾರದ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಭಾಗ್ಯ ಯಾವುದೇ ಮೋಸವಿಲ್ಲದೆ ಈ ತುಲಾಭಾರ ನಡೆಸಲು ಮುಂದಾಗಿದ್ದಾಳೆ. ಆದರೆ, ಸುಂದರಿ ಡಿಪ್ಲಿಕೇಟ್ ಐಟಮ್ ತಂದಿದ್ದಾಳೆ. ಇದು ಭಾಗ್ಯಾಗೆ ಗೊತ್ತಾಗುತ್ತ? ಅಥವಾ ಕಿಶನ್ನ ತುಲಾಭಾರ ನಡೆಯುತ್ತ ಎಂಬುದು ನೋಡಬೇಕಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಇಂಟ್ರೆಸ್ಟಿಂಗ್ ಎಪಿಸೋಡ್ಗಳು ಪ್ರಸಾರವಾಗುತ್ತಿವೆ. ಏನೇ ಕಷ್ಟ ಬಂದರೂ, ಎಷ್ಟೇ ಹಣ ಖರ್ಚಾದರೂ ಪೂಜಾಳ ಮದುವೆ ಕಿಶನ್ ಜೊತೆ ಮಾಡಿಯೇ ತೀರುತ್ತೇನೆ ಎಂಬ ಛಲದಲ್ಲಿ ಭಾಗ್ಯ ಇದ್ದಾಳೆ. ಮತ್ತೊಂದೆಡೆ ಈ ಮದುವೆ ನಿಲ್ಲಿಸಲು ಮೀನಾಕ್ಷಿ ಹಾಗು ಕನ್ನಿಕಾ ಒಂದರ ಹಿಂದೆ ಒಂದರಂತೆ ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯ ಭಾಗ್ಯ ಮನೆಯವರಿಗೆ ಮೀನಾಕ್ಷಿ ತುಲಾಭಾರದ ಶಾಕ್ ಕೊಟ್ಟಿದ್ದು, ಇದನ್ನು ಭಾಗ್ಯ ನೆರವೇರಿಸುವ ಎಲ್ಲ ಲಕ್ಷಣ ಕಾಣುತ್ತಿದೆ. ಭಾಗ್ಯ ಮನೆಯವರಿಗೆ ಸಹಾಯ ಆಗಲಿ ಎಂದು ಕಿಶನ್ ಕೂಡ ಊಟ-ತಿಂಡಿ ಬಿಟ್ಟು ಕೂತಿದ್ದಾನೆ.
ಮೀನಾಕ್ಷಿ ಹಾಗೂ ಕನ್ನಿಕಾ ಭಾಗ್ಯ ಮನೆಗೆ ಹೋಗಿ, ನಮ್ಮದೊಂದು ಹರಕೆ ಇದೆ.. ಕಿಶನ್ನ ತುಲಾಭಾರ ಆಗಬೇಕು.. ಇದನ್ನ ಹುಡುಗಿ ಮನೆಯವರೇ ಮಾಡಬೇಕು.. ಅಷ್ಟೇ ಅಲ್ಲ ಇದು ಪಂಚಲೋಹದಲ್ಲಿ ಆಗಬೇಕು ಎಂದು ಹೇಳಿದ್ದಾರೆ. ಇದನ್ನು ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಅಷ್ಟೊಂದು ಚಿನ್ನ, ಬೆಳ್ಳಿ ಎಲ್ಲ ಎಲ್ಲಿಂದ ತರೋದು.. ಹೇಗೆ ಹಣ ಗೂಡಿಸುವುದು ಎಂದು ಭಾಗ್ಯ ಮನೆಯವರಿಗೆ ಟೆನ್ಶನ್ ಶುರುವಾಗಿದೆ. ಈ ವಿಚಾರ ತಿಳಿದು ಕಿಶನ್ಗೆ ಕೂಡ ಶಾಕ್ ಆಗಿದೆ. ಯಾಕೆಂದರೆ ಮದುವೆ ನಿಲ್ಲಿಸಲು ಮೀನಾಕ್ಷಿ ಮಾಡಿರುವ ಪ್ಲ್ಯಾನ್ ಇದಾಗಿದೆ.
ಆದರೆ, ಭಾಗ್ಯ ಇದಕ್ಕೆ ಒಪ್ಪಿಗೆ ಸೂಚಿಸುತ್ತಾಳೆ. ಪೂಜಾ-ಕಿಶನ್ಗೆ ಒಳ್ಳೆಯದು ಆಗಬೇಕು ಎಂದು ಇದನ್ನ ಎಷ್ಟೇ ಖರ್ಚಾದರೂ ಮಾಡೋಣ ಎಂದು ಹೇಳಿದ್ದಾಳೆ. ಇದಕ್ಕಾಗಿ ಇದ್ದಬದ್ದ ಹಣವನ್ನೆಲ್ಲ ತಯಾರು ಮಾಡುತ್ತಾಳೆ. ಮತ್ತೊಂದೆಡೆ ಇದಕ್ಕೆ ಸುಂದರಿ ಪೂಜಾ ಜೊತೆ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಚಿನ್ನದಂತೆ ಕಾಣುವ ಪಾತ್ರೆಯನ್ನು ತಯಾರು ಮಾಡುವ ಅಂಗಡಿಗೆ ಅದೇ ತೂಕವಿರುವ ಡುಪ್ಲಿಕೇಟ್ ವಸ್ತುಗಳನ್ನು ತೆಗೆದುಕೊಂಡು ಬಂದಿದ್ದಾಳೆ.
ತುಲಭಾರಕ್ಕೆ ಎರಡೂ ಮನೆಯವರು ದೇವಸ್ಥಾನಕ್ಕೆ ಬಂದಿದ್ದಾರೆ. ಕಿಶನ್ ಬಂದೊಡನೆ ಅವನನ್ನು ನೋಡಿ ಭಾಗ್ಯ ಮನೆಯವರಿಗೆ ಶಾಕ್ ಆಗುತ್ತದೆ. ಕಿಶನ್ ಎರಡು-ಮೂರು ದಿನಗಳಿಂದ ಊಟನೇ ಮಾಡಿಲ್ಲದೆ ಇರುವ ರೀತಿ ತೂಕ ಕಳೆದುಕೊಂಡಿದ್ದಾನೆ. ಏನಾಯಿತು ಹುಷಾರಿಲ್ವ ಎಂದು ಭಾಗ್ಯ ಕೇಳುತ್ತಾಳೆ. ಆದರೆ, ನಿಮಗೆ ಬರ್ಡನ್ ಆಗಬಾರದು ಎಂದು ತಾನು ಉಪವಾಸ ಮಾಡುತ್ತಿದ್ದೇನೆ ಎಂದು ಕಿಶನ್ ಹೇಳುವುದಿಲ್ಲ.. ಎಲ್ಲ ಮುಚ್ಚಿಡುತ್ತಾನೆ.
ಭಾಗ್ಯ ಮನೆಯವರು ತುಲಭಾರಕ್ಕೆ ಒಂದೊಂದೆ ವಸ್ತುಗಳನ್ನು ತೆಗೆದುಕೊಂಡು ಬಂದಿದ್ದಾರೆ. ಇದನ್ನು ಕಂಡು ಕನ್ನಿಕಾಗೆ ಭಯ ಶುರುವಾಗಿದೆ. ಭಾಗ್ಯ ಇದನ್ನೆಲ್ಲ ಮಾಡಲ್ಲ ಅಂತ ಅಂದುಕೊಂಡಿದ್ದೆ.. ಖುಷಿ ಆಗಿತ್ತು, ಆದ್ರೆ ಈಗ ನೋಡಿದ್ರೆ ಎಲ್ಲ ತಯಾರಿ ಮಾಡ್ತಾ ಇದ್ದಾರೆ ಎಂದು ಮೀನಾಕ್ಷಿ ಬಳಿ ಹೇಳಿದ್ದಾಳೆ. ಇದಕ್ಕೆ ಮೀನಾಕ್ಷಿ.. ಅರಾಮಾಗಿರುವ ಕಿಶನ್ನ ತೂಕಕ್ಕೆ ಬರೀ ಇಷ್ಟು ಐಟಮ್ ಸಾಕಾಗುತ್ತೆ ಅಂದುಕೊಂಡಿದ್ದೀಯಾ.. ಭಾಗ್ಯ ಪಕ್ಕ ಇದರಲ್ಲಿ ಫೇಲ್ ಆಗೇ ಆಗುತ್ತಾಳೆ ಎಂದು ಹೇಳಿದ್ದಾಳೆ.
ಸದ್ಯ ಕಿಶನ್ನ ತುಲಾಭಾರದ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಭಾಗ್ಯ ಯಾವುದೇ ಮೋಸವಿಲ್ಲದೆ ಈ ತುಲಾಭಾರ ನಡೆಸಲು ಮುಂದಾಗಿದ್ದಾಳೆ. ಆದರೆ, ಸುಂದರಿ ಡಿಪ್ಲಿಕೇಟ್ ಐಟಮ್ ತಂದಿದ್ದಾಳೆ. ಇದು ಭಾಗ್ಯಾಗೆ ಗೊತ್ತಾಗುತ್ತ? ಅಥವಾ ಕಿಶನ್ನ ತುಲಾಭಾರ ನಡೆಯುತ್ತ ಎಂಬುದು ನೋಡಬೇಕಿದೆ.
Karna Serial OTT: ಕಿರುತೆರೆಯಲ್ಲೇ ಪ್ರಪ್ರಥಮ ಬಾರಿ: ಇತಿಹಾಸ ನಿರ್ಮಿಸಿದ ಕರ್ಣ ಧಾರಾವಾಹಿ