Shubman Gill: ವಿರಾಟ್ ಕೊಹ್ಲಿಯ ಐತಿಹಾಸಿಕ ದಾಖಲೆ ಮುರಿದ ಗಿಲ್
IND Vs ENG 2nd Test: ಇಂಗ್ಲೆಂಡ್‌ನಲ್ಲಿ ಬಹು ಶತಕಗಳನ್ನು ಗಳಿಸಿದ ಇತಿಹಾಸದಲ್ಲಿ ಶುಭಮನ್ ಗಿಲ್ ಅತ್ಯಂತ ಕಿರಿಯ ಏಷ್ಯಾದ ನಾಯಕ (25 ವರ್ಷ, 297 ದಿನಗಳು) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 26 ವರ್ಷ ತುಂಬುವ ಮೊದಲು ಈ ಅಪರೂಪದ ಸಾಧನೆ ಮಾಡಿದ ಏಷ್ಯಾ ಮತ್ತು ಭಾರತದ ಮೊದಲ ಆಟಗಾರ ಎನಿಸಿದರು.


ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್(IND vs ENG 2nd Test) ಪಂದ್ಯದ ದ್ವಿತೀಯ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್(Shubman Gill) ಅವರು ವಿರಾಟ್ ಕೊಹ್ಲಿಯ(Virat Kohli) ಐತಿಹಾಸಿಕ ದಾಖಲೆಯೊಂದನ್ನು ಮುರಿದಿದ್ದಾರೆ. ಎಡ್ಜ್‌ಬಾಸ್ಟನ್ ಮೈದಾನದಲ್ಲಿ 150 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದುವರೆಗೂ ಈ ದಾಖಲೆ ಕಿಂಗ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. 2018 ರಲ್ಲಿ ಕೊಹ್ಲಿ 149 ರನ್ ಗಳಿಸಿದ್ದರು. ಇದೀಗ ಗಿಲ್ ಅವರು ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
114 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಗಿಲ್ ಉತ್ತಮ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ 89 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಕೇವಲ 11 ರನ್ ಅಂತರದಿಂದ ಶತಕ ವಂಚಿತರಾದರು. 2022ರಲ್ಲಿ ಜಡೇಜಾ ಇದೇ ಮೈದಾನದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಗಿಲ್ ಮತ್ತು ಜಡೇಜಾ ಜೋಡಿ 5ನೇ ವಿಕೆಟ್‌ಗೆ 203 ರನ್‌ಗಳ ಅಮೂಲ್ಯ ಜತೆಯಾಟ ನಡೆಸಿತು. ಗಿಲ್ ಬ್ಯಾಟಿಂಗ್ ನಡೆಸುತ್ತಿದ್ದು ದ್ವಿಶತಕ ಬಾರಿಸುವತ್ತ ಮುನ್ನುಗುತ್ತಿದ್ದಾರೆ.
ಇಂಗ್ಲೆಂಡ್‌ನಲ್ಲಿ ಬಹು ಶತಕಗಳನ್ನು ಗಳಿಸಿದ ಇತಿಹಾಸದಲ್ಲಿ ಶುಭಮನ್ ಗಿಲ್ ಅತ್ಯಂತ ಕಿರಿಯ ಏಷ್ಯಾದ ನಾಯಕ (25 ವರ್ಷ, 297 ದಿನಗಳು) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 26 ವರ್ಷ ತುಂಬುವ ಮೊದಲು ಈ ಅಪರೂಪದ ಸಾಧನೆ ಮಾಡಿದ ಏಷ್ಯಾ ಮತ್ತು ಭಾರತದ ಮೊದಲ ಆಟಗಾರ ಎನಿಸಿದರು. 25 ನೇ ವಯಸ್ಸಿನಲ್ಲಿ ಪ್ರವಾಸಿ ತಂಡದ ನಾಯಕನಾಗಿ ಇಂಗ್ಲಿಷ್ ನೆಲದಲ್ಲಿ ಬಹು ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಗ್ರೇಮ್ ಸ್ಮಿತ್. ದಕ್ಷಿಣ ಆಫ್ರಿಕಾದ ತಾರೆ 22 ವರ್ಷ 180 ದಿನಗಳಲ್ಲಿ ಈ ಸಾಧನೆಯನ್ನು ಮಾಡಿದ್ದರು. 25 ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ ಏಷ್ಯಾದ ನಾಯಕ ಎಂಬ ದಾಖಲೆ ಪಾಕಿಸ್ತಾನದ ಜಾವೇದ್ ಬುರ್ಕಿ ಹೆಸರಿನಲ್ಲಿದೆ.
ಎಡ್ಜ್‌ಬಾಸ್ಟನ್‌ನಲ್ಲಿ ಅತ್ಯಧಿಕ ಟೆಸ್ಟ್ ರನ್(ಭಾರತೀಯರು)
ಶುಭಮನ್ ಗಿಲ್-150*
ವಿರಾಟ್ ಕೊಹ್ಲಿ-149
ರಿಷಭ್ ಪಂತ್- 146
ಸಚಿನ್ ತೆಂಡೂಲ್ಕರ್- 122
ರವೀಂದ್ರ ಜಡೇಜಾ- 104
ಇದನ್ನೂ ಓದಿ IND vs ENG: ಕುಲ್ದೀಪ್ ಯಾದವ್‌ಗೆ ಸ್ಥಾನ ನೀಡದ ಬಗ್ಗೆ ಸೌರವ್ ಗಂಗೂಲಿ ಪ್ರಶ್ನೆ!