ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder case: ಪತಿಯ ಸಹೋದರರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಅತ್ತೆಯ ಕೊಲೆ

ಉತ್ತರ ಪ್ರದೇಶದ ಝಾನ್ಸಿಯ ಕುಮ್ಹರಿಯಾ ಗ್ರಾಮದಲ್ಲಿ ಜೂನ್ 24ರಂದು ಬೆಳಗ್ಗೆ ಸುಶೀಲಾ ದೇವಿ (54) ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಸಾವಿನ ಕುರಿತು ತನಿಖೆ ಪ್ರಾರಂಭಿಸಿದ ಪೊಲೀಸರು 48 ಗಂಟೆಗಳಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸುಶೀಲಾ ದೇವಿಯ ಕಿರಿಯ ಸೊಸೆ ಪೂಜಾ, ಆಕೆಯ ಸಹೋದರಿ ಕಮಲಾ ಮತ್ತು ಕಮಲಾಳ ಪ್ರಿಯಕರ ಅನಿಲ್ ವರ್ಮಾ ಸೇರಿದ್ದಾರೆ.

ಆಸ್ತಿಗಾಗಿ ಅತ್ತೆಯನ್ನೇ ಕೊಲೆಗೈದ ಸೊಸೆ

ಉತ್ತರ ಪ್ರದೇಶ: ಒಂದೇ ಮನೆಯೊಳಗಿದ್ದ ಅಕ್ರಮ ಸಂಬಂಧ (Illicit relationship) ಒಬ್ಬರ ಜೀವ ತೆಗೆದ ಘಟನೆ ಉತ್ತರ ಪ್ರದೇಶದ (Uttar pradesh) ಝಾನ್ಸಿಯಲ್ಲಿ (Jhansi) ನಡೆದಿದೆ. ವಿಧವೆ ಮಹಿಳೆಯೊಬ್ಬಳು ಪತಿಯ ಇಬ್ಬರು ಸಹೋದರರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಬಳಿಕ ಮನೆಯಲ್ಲಿ ಉಂಟಾದ ಆಸ್ತಿ ವಿವಾದದಿಂದಾಗಿ ಮಹಿಳೆ ತನ್ನ ಅತ್ತೆಯನ್ನೇ ಕೊಲೆ (Murder case) ಮಾಡಿದ್ದಾಳೆ. ಈ ಘಟನೆ ಜೂನ್ 24ರಂದು ಬೆಳಗ್ಗೆ ಝಾನ್ಸಿಯ ಕುಮ್ಹರಿಯಾ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ, ಆಕೆಯ ಸಹೋದರಿ ಮತ್ತು ಸಹೋದರಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉತ್ತರ ಪ್ರದೇಶದ ಝಾನ್ಸಿಯ ಕುಮ್ಹರಿಯಾ ಗ್ರಾಮದಲ್ಲಿ ಜೂನ್ 24ರಂದು ಬೆಳಗ್ಗೆ ಸುಶೀಲಾ ದೇವಿ (54) ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ತನಿಖೆ ಪ್ರಾರಂಭಿಸಿದ ಪೊಲೀಸರು 48 ಗಂಟೆಗಳಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸುಶೀಲಾ ದೇವಿಯ ಕಿರಿಯ ಸೊಸೆ ಪೂಜಾ, ಆಕೆಯ ಸಹೋದರಿ ಕಮಲಾ ಮತ್ತು ಕಮಲಾಳ ಪ್ರಿಯಕರ ಅನಿಲ್ ವರ್ಮಾ ಸೇರಿದ್ದಾರೆ. ಚಿನ್ನ ಮತ್ತು ಆಸ್ತಿಗಾಗಿ ಸುಶೀಲಾ ದೇವಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕೊಲೆಯ ಬಳಿಕ ನಾಪತ್ತೆಯಾಗಿದ್ದ ಅನಿಲ್‌ನ ಕಾಲಿಗೆ ಗುಂಡು ಹಾರಿಸಿ ಮಂಗಳವಾರ ಸಂಜೆ ಪೊಲೀಸರು ಬಂಧಿಸಿದ್ದರು.

ಸುಶೀಲಾ ದೇವಿಯ ಹತ್ಯೆಯ ಬಳಿಕ ತನಿಖೆ ಆರಂಭಿಸಿದ ಪೊಲೀಸರು ವಿಧಿವಿಜ್ಞಾನ ಸಾಕ್ಷಿಗಳು ಮತ್ತು ಕುಟುಂಬ ಸದಸ್ಯರ ವಿಚಾರಣೆಯನ್ನು ಆಧರಿಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು.

ಪೂಜಾ ಕೊಲೆಗೆ ಸಂಚು ರೂಪಿಸಿದ್ದು, ಇತರ ಇಬ್ಬರು ಆಕೆಗೆ ಸಹಾಯ ಮಾಡಿದ್ದಾರೆ. ಪೂಜಾ ಗಂಡನ ಮನೆಯಿಂದ ಸುಮಾರು 8 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದು ಸಂಬಂಧಿಕರೊಬ್ಬರಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾಳೆ. ಇದೇ ವೇಳೆ ಪೊಲೀಸರು ಅನಿಲ್ ವರ್ಮಾನನ್ನು ಬಂಧಿಸಿದರು.

ಅನಿಲ್‌ ವರ್ಮಾ ಬಂಧನದ ವೇಳೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಹೀಗಾಗಿ ಪೊಲೀಸರು ಪ್ರತಿದಾಲಿ ನಡೆಸಿ ಅನಿಲ್ ವರ್ಮಾನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದರು. ಅನಿಲ್ ವರ್ಮಾನನ್ನು ಚಿಕಿತ್ಸೆಗಾಗಿ ಝಾನ್ಸಿಯ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ (ನಗರ) ಜ್ಞಾನೇಂದ್ರ ಕುಮಾರ್, ವಿಚಾರಣೆಯ ಸಮಯದಲ್ಲಿ ಪೂಜಾ ತನ್ನ ಸಹೋದರಿ ಮತ್ತು ಸಹೋದರಿಯ ಪ್ರಿಯಕರ ಅನಿಲ್ ವರ್ಮಾ ಸಹಾಯದಿಂದ ಕೊಲೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ದೀರ್ಘಕಾಲದ ಕೌಟುಂಬಿಕ ವಿವಾದವೇ ಈ ಕೊಲೆಗೆ ಕಾರಣ ಎಂದು ಅವರು ತಿಳಿಸಿದ್ದಾರೆ.

ಗಂಡ ಸತ್ತ ಮೇಲೆ ಪೂಜಾ ಪತಿಯ ಸೋದರ ಕಲ್ಯಾಣ್ ಸಿಂಗ್‌ನೊಂದಿಗೆ ಅಕ್ರಮ ಸಂಬಂಧದಲ್ಲಿದ್ದಳು. ಕಲ್ಯಾಣ್ ಸಿಂಗ್ ಸಾವನ್ನಪ್ಪಿದ ಮೇಲೆ ಪೂಜಾ ತನ್ನ ಪತಿಯ ತಂದೆ ಅಜಯ್ ಸಿಂಗ್ ಹಾಗೂ ಪತಿಯ ಮತ್ತೊಬ್ಬ ಸೋದರ ಸಂತೋಷ್ ಜೊತೆ ಕುಮ್ಹರಿಯಾದಲ್ಲಿರುವ ಪೂರ್ವಜರ ಮನೆಗೆ ತೆರಳಿ ಅಲ್ಲೇ ವಾಸವಾಗಿದ್ದಳು.

ಸಂತೋಷ್ ಜತೆ ಸಂಬಂಧದಲ್ಲಿದ್ದ ಪೂಜಾಗೆ ಒಂದು ಹೆಣ್ಣು ಮಗು ಹುಟ್ಟಿತ್ತು. ಇದನ್ನು ವಿರೋಧಿಸಿ ಸಂತೋಷ್ ಪತ್ನಿ ರಾಗಿಣಿ ತನ್ನ ತವರು ಮನೆಗೆ ಹೋಗಿದ್ದಾಳೆ. ಅತ್ತೆಯ ಕೊಲೆಯ ಬಳಿಕ ಇಬ್ಬರು ಸೋದರರ ಸಾವಿನ ಬಗ್ಗಯೂ ತನಿಖೆಯನ್ನು ಕೈಗೆತ್ತಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Physical Assault: ಕೋಲ್ಕತ್ತಾ ಅತ್ಯಾಚಾರ ಆರೋಪಿ ಮನೋಜಿತ್ ಮಿಶ್ರಾ ವಕೀಲ ಸದಸ್ಯತ್ವ ರದ್ದು

ಪೂಜಾ ತಮ್ಮ ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಲು ಬಯಸಿದ್ದು, ಇದಕ್ಕೆ ಮಾವ ಅಜಯ ಸಿಂಗ್, ಪತಿಯ ಸೋದರ ಸಂತೋಷ್ ಒಪ್ಪಿಕೊಂಡಿದ್ದರು. ಆದರೆ ಅತ್ತೆ ಸುಶೀಲಾ ದೇವಿ ಒಪ್ಪಿರಲಿಲ್ಲ. ಹೀಗಾಗಿ ಅತ್ತೆಯನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.