Karna Serial: ಕರ್ಣ ಧಾರಾವಾಹಿ ಬಗ್ಗೆ ಮೊದಲ ಬಾರಿ ಮಾತನಾಡಿದ ಭವ್ಯಾ ಗೌಡ: ಏನಂದ್ರು ನೋಡಿ
ಕರ್ಣ ಧಾರಾವಾಹಿಯ ಎರಡನೇ ಪ್ರೊಮೋ ಕೂಡ ಬಿಡುಗಡೆ ಆಗಿದೆ. ಇದು ಭವ್ಯಾ ಗೌಡ ಅವರ ಇಂಟ್ರೊ ಪ್ರೊಮೋ ಆಗಿದ್ದು, ಇವರನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದರ ಜೊತೆಗೆ ಭವ್ಯಾ ಹಾಗೂ ನಾಯಕ ಕಿರಣ್ ರಾಜ್ ಧಾರಾವಾಹಿ ಕುರಿತು ಮಾತನಾಡಿದ್ದಾರೆ.

Bhavya Gowda

ಝೀ ಕನ್ನಡ ವಾಹಿನಿಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಕರ್ಣ ಧಾರಾವಾಹಿ (Karna Serial) ದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ. ಡಾಕ್ಟರ್ ಕರ್ಣ ಆಗಿ ಕಿರಣ್ ರಾಜ್ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರುತ್ತಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿಯ ಎರಡನೇ ಪ್ರೊಮೋ ಕೂಡ ಬಿಡುಗಡೆ ಆಗಿದೆ. ಇದು ಭವ್ಯಾ ಗೌಡ ಅವರ ಇಂಟ್ರೊ ಪ್ರೊಮೋ ಆಗಿದ್ದು, ಇವರನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದರ ಜೊತೆಗೆ ಭವ್ಯಾ ಧಾರಾವಾಹಿ ಕುರಿತು ಮಾತನಾಡಿದ್ದಾರೆ.
‘‘ನಾನು ಝೀ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ನಟಿಸುತ್ತಾ ಇದ್ದೇನೆ. ಕರ್ಣ ಮೊದಲ ಪ್ರೋಮೋ ಬಿಟ್ಟಾಗ, ನನ್ನ ಇನ್ಸ್ಟಾಗ್ರಾಮ್ ಫ್ಯಾಮಿಲಿ ಈ ಧಾರಾವಾಹಿಗೆ ನಾನೇ ನಾಯಕಿಯಾಗಬೇಕು ಅಂದುಕೊಂಡಿದ್ದರು. ಥ್ಯಾಂಕ್ಯೂ ಸೋ ಮಚ್ ಎಲ್ಲರಿಗೂ. ಇದೇ ರೀತಿ ನಿಮ್ಮ ಪ್ರೀತಿ ಮತ್ತು ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಹೀಗೆ ಇರಲಿ’’ ಎಂದು ಭವ್ಯಾ ಹೇಳಿದ್ದಾರೆ.
ಹಾಗೆಯೆ ಧಾರಾವಾಹಿಯ ನಟ ಕಿರಣ್ ರಾಜ್ ಮಾತನಾಡಿ, ‘‘ಕರ್ಣನಾಗಿ ನಿಮ್ಮೆಲ್ಲರ ಮುಂದೆ ಬರುತ್ತಿದ್ದೇನೆ. ನಟನಾಗಿ ಈ ಪಾತ್ರವನ್ನು ನೋಡುವುದಾದರೆ, ನಟಿಸಲು ಹಲವಾರು ಎಮೋಷನ್ಸ್ ಈ ಪಾತ್ರದಲ್ಲಿದೆ. ಕರ್ಣ ಧಾರಾವಾಹಿಯ ಪ್ರೋಮೋ ರಿಲೀಸ್ ಆದ ತಕ್ಷಣ ಅದಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ತುಂಬಾ ಖುಷಿ ಆಯ್ತು’’ ಎಂದು ಹೇಳಿದ್ದಾರೆ.
ಭವ್ಯಾ ಗೌಡ ಅವರು ಈ ಧಾರಾವಾಹಿಯಲ್ಲಿ ನಿಧಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅವರು ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ಣನ ನೋಡಿ ನಿಧಿಗೆ ಲವ್ ಎಟ್ ಫಸ್ಟ್ ಸೈಟ್ ಆಗುತ್ತದೆ. ಆ ರೀತಿಯಲ್ಲಿ ಎರಡನೇ ಪ್ರೋಮೋ ಮೂಡಿ ಬಂದಿದೆ. ಕರ್ಣ ಮತ್ತು ನಿಧಿ ನಡುವಿನ ಅಪರೂಪದ ಪ್ರೇಮಕಥೆಯ ಸೊಗಸಾದ ಹಾಡಿನ ಮೂಲಕ ಝೀ ವಾಹಿನಿ ಪರಿಚಯಿಸಿದೆ.
ಈ ಹಾಡಿಗೆ ‘‘ಅವನು ತ್ಯಾಗಕ್ಕೆ ಇನ್ನೊಂದು ಹೆಸರು. ಕರ್ಣನ ಹೆಸರೇ ನಿಧಿಯ ಉಸಿರು. ಶುರುವಾಗುತ್ತಿದೆ ಒಂದು ಅಪರೂಪದ ಪ್ರೇಮಕತೆ ಕರ್ಣ ಅತೀ ಶೀಘ್ರದಲ್ಲಿ’’ ಎಂದು ಝೀ ವಾಹಿನಿಯ ಅಫೀಶಿಯಲ್ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಕ್ಯಾಪ್ಶನ್ ಬರೆದುಕೊಳ್ಳಲಾಗಿದೆ.
Karna Serial: ಕರ್ಣ ಧಾರಾವಾಹಿಯ ಎರಡನೇ ಪ್ರೊಮೋ ರಿಲೀಸ್: ಭವ್ಯಾ ಗೌಡ ಕಂಡು ಥ್ರಿಲ್ ಆದ ಫ್ಯಾನ್ಸ್