Rohit Sharma: ಸಿಕ್ಸರ್ ಮೂಲಕ ದಾಖಲೆ ಬರೆಯಲು ಸಜ್ಜಾದ ಹಿಟ್‌ಮ್ಯಾನ್ ರೋಹಿತ್
IPL 2025: ಐಪಿಎಲ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಆರ್‌ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 142 ಐಪಿಎಲ್ ಪಂದ್ಯಗಳನ್ನಾಡಿ 357 ಸಿಕ್ಸರ್ ಬಾರಿಸಿದ್ದಾರೆ. ರೋಹಿರ್ 297* ಸಿಕ್ಸರ್ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ(290*) ಮೂರನೇ ಸ್ಥಾನದಲ್ಲಿದ್ದಾರೆ.


ಮುಂಬಯಿ: ಮಂಗಳವಾರ(ಮೇ 6) ನಡೆಯುವ ಐಪಿಎಲ್(IPL 2025) ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್(MI vs GT) ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಗೆ(Rohit Sharma) ಸಿಕ್ಸರ್ ಮೂಲಕ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ರೋಹಿತ್ ಪಂದ್ಯದಲ್ಲಿ ಮೂರು ಸಿಕ್ಸರ್ ಬಾರಿಸಿದರೆ ಐಪಿಎಲ್‌ನಲ್ಲಿ 300 ಸಿಕ್ಸರ್ ಪೂರೈಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಐಪಿಎಲ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಆರ್‌ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 142 ಐಪಿಎಲ್ ಪಂದ್ಯಗಳನ್ನಾಡಿ 357 ಸಿಕ್ಸರ್ ಬಾರಿಸಿದ್ದಾರೆ. ರೋಹಿರ್ 297* ಸಿಕ್ಸರ್ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ(290*) ಮೂರನೇ ಸ್ಥಾನದಲ್ಲಿದ್ದಾರೆ.
ಸತತ ಎರಡು ಅರ್ಧಶತಕ ಬಾರಿಸಿ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ರೋಹಿತ್, ತಮ್ಮ ತವರು ಮೈದಾನವಾದ ವಾಂಖೇಡೆಯಲ್ಲಿ ಇಂದಿನ ಪಂದ್ಯದಲ್ಲಿ ಮೂರು ಸಿಕ್ಸರ್ ಬಾರಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯುವುದು ಬಹುತೇಕ ಖಚಿತ ಎನ್ನಲಡ್ಡಿಯಿಲ್ಲ.
𝐑𝐎. Wankhede. Matchday. 🥶🔥#MumbaiIndians #PlayLikeMumbai #TATAIPL #MIvGT pic.twitter.com/J9qglToQXR
— Mumbai Indians (@mipaltan) May 6, 2025
ಐಪಿಎಲ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರು
ಕ್ರಿಸ್ ಗೇಲ್- 357 ಸಿಕ್ಸರ್
ರೋಹಿತ್ ಶರ್ಮ- 297 ಸಿಕ್ಸ್
ವಿರಾಟ್ ಕೊಹ್ಲಿ-290 ಸಿಕ್ಸರ್
ಎಂ.ಎಸ್ ಧೋನಿ- 262 ಸಿಕ್ಸರ್
ಎಬಿಡಿ ವಿಲಿಯರ್ಸ್-251 ಸಿಕ್ಸರ್
ಡೇವಿಡ್ ವಾರ್ನರ್- 236 ಸಿಕ್ಸರ್
ಸತತ 5 ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ಮುಂಬೈ ಗುಜರಾತ್ ವಿರುದ್ಧವೂ ಗೆದ್ದುಅಂಕಪಟ್ಟಿಯಲ್ಲಿ ಅಗ್ರಸ್ಥಾನ ವಶಪಡಿಸಿಕೊಳ್ಳುವ ತವಕದಲ್ಲಿದೆ. ಇನ್ನೊಂದೆಡೆ ಗುಜರಾತ್‌ನ ಅಗ್ರ ಮೂವರು ಬ್ಯಾಟರ್‌ಗಳಾದ ಸಾಯಿ ಸುದರ್ಶನ್ (504 ರನ್), ಶುಭಮಾನ್ ಗಿಲ್ (465) ಹಾಗೂ ಜೋಸ್ ಬಟ್ಲರ್ (470) ಅವರನ್ನು ಕಟ್ಟಿಹಾಕುವುದು ಮುಂಬೈಗೆ ಸವಾಲೆನಿಸಲಿದೆ.