Karna Serial: ಕರ್ಣ ಧಾರಾವಾಹಿಯ ಎರಡನೇ ಪ್ರೊಮೋ ರಿಲೀಸ್: ಭವ್ಯಾ ಗೌಡ ಕಂಡು ಥ್ರಿಲ್ ಆದ ಫ್ಯಾನ್ಸ್
ಕರ್ಣ ಧಾರಾವಾಹಿಯ ಎರಡನೇ ಪ್ರೊಮೋ ಈಗ ಬಿಡುಗಡೆ ಆಗಿದೆ. ಇದು ಭವ್ಯಾ ಗೌಡ ಅವರ ಇಂಟ್ರೊ ಪ್ರೊಮೋ ಆಗಿದ್ದು, ಇವರನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಪ್ರೋಮೋದಲ್ಲಿ ಭವ್ಯಾ ಅವರ ಪಾತ್ರ ಏನು ಎಂಬ ವಿಚಾರವನ್ನು ರಿವೀಲ್ ಮಾಡಲಾಗಿದೆ. ಭವ್ಯಾ ಗೌಡ ಅವರು ಈ ಧಾರಾವಾಹಿಯಲ್ಲಿ ನಿಧಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

Karna Serial Bhavya Gowda

ಝೀ ಕನ್ನಡ ವಾಹಿನಿಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಕರ್ಣ ಧಾರಾವಾಹಿ (Karna Serial) ದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ. ಡಾಕ್ಟರ್ ಕರ್ಣ ಆಗಿ ಕಿರಣ್ ರಾಜ್ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರುತ್ತಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿಯ ಎರಡನೇ ಪ್ರೊಮೋ ಈಗ ಬಿಡುಗಡೆ ಆಗಿದೆ. ಇದು ಭವ್ಯಾ ಗೌಡ ಅವರ ಇಂಟ್ರೊ ಪ್ರೊಮೋ ಆಗಿದ್ದು, ಇವರನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಈ ಪ್ರೋಮೋದಲ್ಲಿ ಭವ್ಯಾ ಅವರ ಪಾತ್ರ ಏನು ಎಂಬ ವಿಚಾರವನ್ನು ರಿವೀಲ್ ಮಾಡಲಾಗಿದೆ. ಭವ್ಯಾ ಗೌಡ ಅವರು ಈ ಧಾರಾವಾಹಿಯಲ್ಲಿ ನಿಧಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಭವ್ಯಾ ಗೌಡ ಅವರು ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ಣನ ನೋಡಿ ನಿಧಿಗೆ ಲವ್ ಎಟ್ ಫಸ್ಟ್ ಸೈಟ್ ಆಗುತ್ತದೆ. ಆ ರೀತಿಯಲ್ಲಿ ಪ್ರೋಮೋ ಮೂಡಿ ಬಂದಿದೆ. ಕರ್ಣ ಮತ್ತು ನಿಧಿ ನಡುವಿನ ಅಪರೂಪದ ಪ್ರೇಮಕಥೆಯ ಸೊಗಸಾದ ಹಾಡಿನ ಮೂಲಕ ಝೀ ವಾಹಿನಿ ಪರಿಚಯಿಸಿದೆ.
ಈ ಹಾಡಿಗೆ ‘‘ಅವನು ತ್ಯಾಗಕ್ಕೆ ಇನ್ನೊಂದು ಹೆಸರು. ಕರ್ಣನ ಹೆಸರೇ ನಿಧಿಯ ಉಸಿರು. ಶುರುವಾಗುತ್ತಿದೆ ಒಂದು ಅಪರೂಪದ ಪ್ರೇಮಕತೆ ಕರ್ಣ ಅತೀ ಶೀಘ್ರದಲ್ಲಿ’’ ಎಂದು ಝೀ ವಾಹಿನಿಯ ಅಫೀಶಿಯಲ್ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಕ್ಯಾಪ್ಶನ್ ಬರೆದುಕೊಳ್ಳಲಾಗಿದೆ.
ಚೆಂದದ ಹಾಡಿನ ಮೂಲಕ ಈ ಜೋಡಿಯ ನಡುವಿನ ಸಂಬಂಧ ಹೇಗಿರಲಿದೆ ಎಂಬುದನ್ನು ಚಿತ್ರೀಕರಿಸಿದ್ದಾರೆ ನಿರ್ದೇಶಕರು. ವೈದ್ಯರ ಮುಷ್ಕರದ ನಡುವೆ ಆಸ್ಪತ್ರೆಗೆ ಬರುವ ದಂಪತಿ, ಆ ಆಸ್ಪತ್ರೆಯಲ್ಲಿ ಮಗುವಿನ ಜನನ, ಕರ್ಣ ಧಾವಿಸಿ ಬಂದು ಆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸುವುದು... ಅಲ್ಲೇ ಇದ್ದ ಮೆಡಿಕಲ್ ವಿದ್ಯಾರ್ಥಿನಿ ನಾಯಕಿಗೆ ಅನುರಾಗ ಅರಳುವುದು... ಈ ದೃಶ್ಯಗಳಿಗೆ ಸಾಥ್ ನೀಡುವಂತೆ ಕನವರಿಸೋ ಹೆಸರೊಂದು ಬರುತಿದೆ ನನ್ನ ಜೊತೆಯಲ್ಲೇ ಅನುಸರಿಸೋ ಉಸಿರೊಂದು ನಿಂತಿದೆ ನೋಡು ಬಳಿಯಲ್ಲೇ ಎಂಬ ಹಾಡು ಮೂಡಿ ಬಂದಿದೆ.
ಕರ್ಣ ಧಾರಾವಾಹಿಯಲ್ಲಿ ಭವ್ಯಾ ಗೌಡ ಮಾತ್ರವಲ್ಲ, ನಮ್ರತಾ ಗೌಡ ಕೂಡ ಇದ್ದಾರೆ. ಇಬ್ಬರೂ ಒಂದೇ ತಾಯಿಯ ಮಕ್ಕಳು ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ಈ ವಿಚಾರ ಅಧಿಕೃತವಾಗಿ ಖಚಿತಾಗಿಲ್ಲ. ಶ್ರುತಿ ನಾಯ್ಡು ನಿರ್ಮಾಣದ ಕರ್ಣ ಸೀರಿಯಲ್‌ನಲ್ಲಿ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಶ್ಯಾಮ್ ಸಿಮ್ರನ್, ವರಲಕ್ಷ್ಮೀ ಶ್ರೀನಿವಾಸ್ ಮುಂತಾದವರು ನಟಿಸಲಿದ್ದಾರೆ.
Bhagya Lakshmi Serial: ತಾಂಡವ್ಗೆ ಗೊತ್ತಾಯಿತು ಭಾಗ್ಯ ಕೆಲಸ ತೆಗೆಸಿಕೊಟ್ಟ ವಿಚಾರ: ಹೆಚ್ಚಾಯಿತು ದ್ವೇಷ