ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅತ್ಯಾಚಾರದ ಬೆದರಿಕೆಯೊಡ್ಡಿದವನಿಗೆ ಪೊಲೀಸರ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೊ ವೈರಲ್!

ರಾಜಸ್ಥಾನದ ಜೈಪುರ ರೈಲ್ವೆ ನಿಲ್ದಾಣದಲ್ಲಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ ಕಾಮುಕನಿಗೆ ಯುವತಿಯೊಬ್ಬಳು ಟ್ರಾಫಿಕ್ ಪೊಲೀಸರ ಮುಂದೆಯೇ ಹಿಗ್ಗಾಮಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾಳೆ. ಯುವತಿ ಈ ಘಟನೆಯನ್ನು ರೆಕಾರ್ಡ್‌ ಮಾಡಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ, ಇದು ಈಗ ವೈರಲ್(Viral Video) ಆಗಿದೆ.

ಅತ್ಯಾಚಾರದ ಬೆದರಿಕೆ ಹಾಕಿದವನಿಗೆ ಯುವತಿ ಮಾಡಿದ್ದೇನು? ವಿಡಿಯೊ ನೋಡಿ!

Profile pavithra May 6, 2025 12:34 PM

ಜೈಪುರ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳದ ಪ್ರಕರಣ ಹೆಚ್ಚು ದಾಖಲಾಗುತ್ತಿವೆ. ಆಗಾಗ ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ರಾಜಸ್ಥಾನದ ಜೈಪುರ ರೈಲ್ವೆ ನಿಲ್ದಾಣದಲ್ಲಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ ಕಾಮುಕನಿಗೆ ಯುವತಿಯೊಬ್ಬಳು ಟ್ರಾಫಿಕ್ ಪೊಲೀಸರ ಮುಂದೆಯೇ ಹಿಗ್ಗಾಮಗ್ಗಾ ಥಳಿಸಿದ ಘಟನೆ ನಡೆದಿದೆ. ಯುವತಿ ಈ ಘಟನೆಯನ್ನು ರೆಕಾರ್ಡ್‌ ಮಾಡಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇದು ಈಗ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಫೋನ್‌ನಲ್ಲಿ ಮಾತನಾಡುವ ನೆಪದಲ್ಲಿ ತನಗೆ ಅತ್ಯಾಚಾರ ಬೆದರಿಕೆಗಳನ್ನು ಹಾಕಿದ್ದಾನೆ ಎಂದು ಯುವತಿ ವಿಡಿಯೊದಲ್ಲಿ ಆರೋಪಿಸಿದ್ದಾಳೆ. ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ ವಿಕೃತ ವ್ಯಕ್ತಿಯನ್ನು ಆಕೆ ಪೊಲೀಸರಿಗೆ ಒಪ್ಪಿಸಿದ್ದಾಳೆ.

ವಿಡಿಯೊ ನೋಡಿ...



ನಡೆದಿದ್ದೇನು?

ವರದಿ ಪ್ರಕಾರ, ರಾಜಸ್ಥಾನದ ಜೈಪುರ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳನ್ನು ಪ್ರಯಾಣಿಕನೊಬ್ಬ ನಿಂದಿಸಿ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ವ್ಯಕ್ತಿ ಫೋನ್‍ನಲ್ಲಿ ಮಾತನಾಡುತ್ತಿರುವಂತೆ ನಟಿಸಿ ಅತ್ಯಾಚಾರ ಮಾಡುವಂತೆ ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದ್ದಾನೆ. ಆಗ ಅನುಮಾನಗೊಂಡ ಯುವತಿ ಆ ವ್ಯಕ್ತಿಯ ಬಳಿ ಮೊಬೈಲ್ ಫೋನ್ ತೋರಿಸುವಂತೆ ಕೇಳಿದ್ದಾಳೆ. ಅವನು ಸುಳ್ಳು ಕರೆ ಮೂಲಕ ನಾಟಕ ಮಾಡುತ್ತಿರುವುದು ಯುವತಿಗೆ ಗೊತ್ತಾಗಿ ಆಕೆ ಆತನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾಳೆ. ಆಗ ಪೊಲೀಸ್ ಅಧಿಕಾರಿಯೊಬ್ಬರು ಹತ್ತಿರದಲ್ಲಿ ನಿಂತಿದ್ದನು ಕಂಡು ಯುವತಿ ಪೊಲೀಸ್ ಅಧಿಕಾರಿಗೆ ಆ ವ್ಯಕ್ತಿಯನ್ನು ಒಪ್ಪಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ:‌Viral Video: ಮದ್ವೆಯ ಜೋಶ್‌ನಲ್ಲಿ ಈ ವ್ಯಕ್ತಿ ಮಾಡಿದ ಕೆಲ್ಸವನ್ನೊಮ್ಮೆ ನೋಡಿ; ವಿಡಿಯೊ ವೈರಲ್

ಪೊಲೀಸರು ಬಿಎನ್ಎಸ್ಎಸ್ ಕಾಯ್ದೆಯ ಸೆಕ್ಷನ್ 126/170 ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.ತನಗೆ ಸಹಾಯ ಮಾಡಿದ್ದಕ್ಕಾಗಿ ಮಹಿಳೆ ಜೈಪುರ ಸಂಚಾರ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾಳೆ. ಮತ್ತು ಮಹಿಳೆಯರಿಗೆ ಸುರಕ್ಷಿತವಾಗಿರುವಂತೆ ಎಚ್ಚರಿಕೆ ನೀಡಿದ್ದಾಳೆ. ಈ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಜೈಪುರ ಆರ್‌ಪಿಎಫ್, ಸಿಬ್ಬಂದಿಗೆ ರೈಲ್ವೆ ಆವರಣ / ರೈಲುಗಳಲ್ಲಿ ಇಂತಹ ಕೃತ್ಯಗಳನ್ನು ಮಾಡುವ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕಣ್ಣಿಡಲು ನಿರ್ದೇಶಿಸಲಾಗಿದೆ ಎಂದು ಹೇಳಿದೆ.