Movie Director Arrested: ಖ್ಯಾತ ನಿರ್ದೇಶಕ ಡ್ರಗ್ ಕೇಸ್‌ನಲ್ಲಿ ಅರೆಸ್ಟ್
Sameer Thahir arrested: ಮಲಯಾಳಂ ಸಿನಿಮಾ ನಿರ್ದೇಶಕ ಸಮೀರ್ ತಾಹಿರ್ ಡ್ರಗ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಹೈಬ್ರಿಡ್ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಸಿನಿಮಾ ಛಾಯಾಗ್ರಾಹಕ-ನಿರ್ದೇಶಕ ಸಮೀರ್ ತಾಹಿರ್ ಅವರನ್ನು ಸೋಮವಾರ ಅಬಕಾರಿ ಇಲಾಖೆ ಬಂಧಿಸಿದೆ.


ತಿರುವನಂತಪುರಂ: ಹೈಬ್ರಿಡ್ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಸಿನಿಮಾ ನಿರ್ದೇಶಕ(Movie Director Arrested) ಸಮೀರ್ ತಾಹಿರ್ ಅವರನ್ನು ಸೋಮವಾರ ಅಬಕಾರಿ ಇಲಾಖೆ ಬಂಧಿಸಿದೆ. ಈ ಪ್ರಕರಣದಲ್ಲಿ ಚಲನಚಿತ್ರ ನಿರ್ಮಾಪಕರಾದ ಖಾಲಿದ್ ರೆಹಮಾನ್ ಮತ್ತು ಅಶ್ರಫ್ ಹಮ್ಜಾ ಹೆಸರು ಕೂಡ ಕೇಳಿಬಂದಿವೆ. ಸಿನಿಮಾ ಬಗ್ಗೆ ಚರ್ಚೆ ನೆಪದಲ್ಲಿ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ಸೇರುತ್ತಿದ್ದ ಈ ಇಬ್ಬರನ್ನು ಪೊಲೀಸರು ಮೊದಲೇ ಅರೆಸ್ಟ್ ಮಾಡಿದ್ದರು. ಇದೀಗ ಈ ಪ್ರಕರಣದಲ್ಲಿ ಸಮೀರ್ ತಾಹಿರ್ ಕೈವಾಡ ಇರುವುದು ಬಯಲಾಗಿದ್ದು, ಆತನ ವಿರುದ್ಧವೂ ಅಬಕಾರಿ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ವಿಚಾರಣೆಗೆ ಹಾಜರಾಗಲೆಂದು ಬಂದಿದ್ದ ತಾಹಿರ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಳಿಕ ಅವರು ಜಾಮೀನು ಪಡೆದು ಹೊರಬಂದಿದ್ದಾರೆ.
ಅಬಕಾರಿ ಅಧಿಕಾರಿಗಳ ಪ್ರಕಾರ, ಆವರಣದಲ್ಲಿ ಯಾವುದೇ ಮಾದಕವಸ್ತು ಬಳಕೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ತಾಹಿರ್ ಹೇಳಿಕೊಂಡರೂ, ಅಪಾರ್ಟ್‌ಮೆಂಟ್ ಅವರ ಹೆಸರಿನಲ್ಲಿರುವುದರಿಂದ ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ಈ ಬಗ್ಗೆ ತಿಳಿದಿತ್ತು. ಇದೀಗ ಏನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆಯಲ್ಲಿ ಅವರಿಗೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿದ್ದ ಬಗ್ಗೆ ತಿಳಿದಿತ್ತು ಎಂಬುದು ಬಯಲಾಗಿದೆ.
ಈ ಸುದ್ದಿಯನ್ನೂ ಓದಿ: Kerala film directors arrested: ಡ್ರಗ್ಸ್ ಕೇಸ್; ಇಬ್ಬರು ಮಲಯಾಳಂ ಸಿನಿಮಾ ನಿರ್ದೇಶಕರು ಸೇರಿ ಮೂವರು ಅರೆಸ್ಟ್
ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಯಾರೇ ಆದರೂ ಅವರು ತಮ್ಮ ಆವರಣದಲ್ಲಿ ಅಪರಾಧ ನಡೆಯಲು ಬಿಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಹಿರ್ ಬೆಳಿಗ್ಗೆ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಸಂಜೆಯ ಹೊತ್ತಿಗೆ ಹೊರಟುಹೋದರು ಮತ್ತು ಆ ದಿನದ ನಂತರ ಯಾರು ಹಾಜರಿದ್ದರು ಎಂಬುದು ಅವರಿಗೆ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಲನಚಿತ್ರ ಯೋಜನೆಯೊಂದರ ಸಂಬಂಧ ಅಶ್ರಫ್ ಹಮ್ಜಾ ಕಳೆದ ಎರಡು ದಿನಗಳಿಂದ ಅಲ್ಲಿಯೇ ತಂಗಿದ್ದರು ಎಂದು ವರದಿಯಾಗಿದೆ. ವಿಚಾರಣೆಗೆ ಹಾಜರಾಗುವಂತೆ ನಾವು ಅವರಿಗೆ ಮೊದಲೇ ನೋಟಿಸ್ ನೀಡಿದ್ದೇವೆ. ವಿಚಾರಣೆಯ ನಂತರ, ಅವರನ್ನು NDPS ಕಾಯ್ದೆಯಡಿ ಬಂಧಿಸಲಾಯಿತು. ಬಳಿಕ ಅವರನ್ನು ಜಾಮೀನಿನ ಮೂಲಕ ರಿಲೀಸ್ ಮಾಡಲಾಯಿತು.