Bobby Simha: 6 ವಾಹನಗಳಿಗೆ ಡಿಕ್ಕಿ ಹೊಡೆದ ʼ777 ಚಾರ್ಲಿʼ ಚಿತ್ರದ ನಟ ಬಾಬ್ಬಿ ಸಿಂಹಗೆ ಸೇರಿದ ಕಾರು; ಮೂವರಿಗೆ ಗಾಯ
ಬಹುಭಾಷಾ ಕಲಾವಿದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಬಾಬ್ಬಿ ಸಿಂಹ ಅವರಿಗೆ ಸೇರಿದ ಕಾರು ವಿವಿಧ ವಾಹನಗಳಿಗೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿರುವ ಘಟನೆ ಚೆನ್ನೈಯಲ್ಲಿ ನಡೆದಿದೆ. ಶುಕ್ರವಾರ (ಏ. 18) ಸಂಜೆ ಚೆನ್ನೈಯ ಅಲಂದೂರು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಕಾರು ಚಾಲಕ ಪುಷ್ಪರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.


ಚೆನ್ನೈ: ಬಹುಭಾಷಾ ಕಲಾವಿದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಬಾಬ್ಬಿ ಸಿಂಹ (Bobby Simha) ಅವರಿಗೆ ಸೇರಿದ ಕಾರು ವಿವಿಧ ವಾಹನಗಳಿಗೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿರುವ ಘಟನೆ ಚೆನ್ನೈಯಲ್ಲಿ ನಡೆದಿದೆ. ಶುಕ್ರವಾರ (ಏ. 18) ಸಂಜೆ ಚೆನ್ನೈಯ ಅಲಂದೂರು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಕಾರು ಚಾಲಕ ಪುಷ್ಪರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಎಕ್ಕಡುತಂಗಲ್‌ನಿಂದ ಚೆನ್ನೈ ವಿಮಾನ ನಿಲ್ದಾಣದ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಕಾರು ಅಲಂದೂರ್ ಮೆಟ್ರೋ ನಿಲ್ದಾಣದ ಬಳಿಯ ಕಾಥಿಪಾರಾ ಫ್ಲೈ ಓವರ್‌ನಿಂದ ಕೆಳಗೆ ಇಳಿಯುವಾಗ ಈ ಅಪಘಾತ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು 3 ದ್ವಿಚಕ್ರ ವಾಹನ, 2 ಆಟೋರಿಕ್ಷಾಗಳು ಹಾಗೂ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಮಯದಲ್ಲಿ ಬಾಬ್ಬಿ ಸಿಂಹ ಕಾರಿನಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ನಡೆದ ತಕ್ಷಣ ಹಲವರು ಧಾವಿಸಿ ಗಾಯಗೊಂಡ ಮೂವರು ಬೈಕ್ ಸವಾರರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ, ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
”பென்ஸ் கார் இடிச்ச வேகத்துல பைக்கோட உருண்டுட்டேன்.. டான்ஸ்மாஸ்டரா இருக்கேன் என்னோட கால் இப்போ"......
— நெல்லை செல்வின் (@nellaiselvin87) April 19, 2025
திராவிட மாடல் டாஸ்மாக் கருணா நிதியால் காரை தாறுமாறாக ஓட்டிய நடிகர் பாபி சிம்ஹாவின் ஓட்டுநர் கைது - பாதிக்கப்பட்டவர் வேதனை பேட்டி
pic.twitter.com/dEGNWzj6l6
ಈ ಸುದ್ದಿಯನ್ನೂ ಓದಿ: Aishwarya Rai Bachchan: ಐಶ್ವರ್ಯಾ ರೈ ಕಾರಿಗೆ ಬಸ್ ಡಿಕ್ಕಿ; ಅಭಿಮಾನಿಗಳಿಗೆ ಆತಂಕ
ಮದ್ಯಪಾನ ಮಾಡಿದ್ದ ಪುಷ್ಪರಾಜ್
ಕಾರು ಚಾಲನೆ ವೇಳೆ ಪುಷ್ಪರಾಜ್ ಮದ್ಯ ಸೇವಿಸಿದ್ದ ಎನ್ನಲಾಗಿದೆ. ನಿರ್ಲಕ್ಷ್ಯ ಮತ್ತು ಮದ್ಯ ಸೇವಿಸಿ ಚಾಲನೆ ಮಾಡಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ. ʼʼಪುಷ್ಪರಾಜ್ ವಿರುದ್ಧ ಅತೀ ವೇಗ, ಮದ್ಯಪಾನ ಮಾಡಿ ಚಾಲನೆ, ನಿರ್ಲಕ್ಷ್ಯದಿಂದ ಇತರರಿಗೆ ಗಾಯ ಉಂಟು ಮಾಡಿರುವ ಪ್ರಕರಣ ದಾಖಲಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಇನ್ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ. ಪುಷ್ಪರಾಜ್‌ಗೆ ಏ. 30ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಬ್ಬಿ ಸಿಂಹ ಅವರ ತಂದೆಯನ್ನು ಡ್ರಾಪ್ ಮಾಡಿ ಬರುವಾಗ ಪುಷ್ಪರಾಜ್ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಸದ್ಯ ಬಾಬ್ಬಿ ಸಿಂಹ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕನ್ನಡದಲ್ಲಿಯೂ ನಟಿಸಿದ್ದ ಬಾಬ್ಬಿ ಸಿಂಹ
ಬಹುಭಾಷಾ ನಟ ಬಾಬ್ಬಿ ಸಿಂಹ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದಾರೆ. 2022ರಲ್ಲಿ ತೆರೆಕಂಡ ಕಿರಣ್ ರಾಜ್ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ʼ777 ಚಾರ್ಲಿʼ ಸಿನಿಮಾದಲ್ಲಿ ಬಾಬ್ಬಿ ಸಿಂಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2007ರಲ್ಲಿ ತೆರೆಕಂಡ ʼಮಾಯ ಕನ್ನಾಡಿʼ ತಮಿಳು ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಅವರು ತೆಲುಗು, ಮಲಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. 2014ರಲ್ಲಿ ರಿಲೀಸ್ ಆದ ʼಜಿಗರ್‌ಥಂಡಾʼ ತಮಿಳು ಚಿತ್ರದಲ್ಲಿನ ಅಭಿನಯಕ್ಕೆ ಬಾಬ್ಬಿ ಸಿಂಹ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಟನೆಯ ಜತೆಗೆ ಚಿತ್ರ ನಿರ್ಮಾಪಕರಾಗಿಯೂ ಗಮನ ಸೆಳೆದ ಅವರು 2023ರಲ್ಲಿ ರಿಲೀಸ್ ಆದ ʼವಲ್ಲವನುಕ್ಕುಮ್ ವಲ್ಲವನ್ʼ ತಮಿಳು ಚಿತ್ರವನ್ನು ನಿರ್ಮಿಸಿದ್ದಾರೆ.