ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spy For Pak: ಬಿಎಸ್‌ಎಫ್, ವಾಯುಪಡೆಯ ಮಾಹಿತಿ ಪಾಕ್ ಗೂಢಚಾರರಿಗೆ ಹಂಚಿಕೆ; ಆರೋಗ್ಯ ಕಾರ್ಯಕರ್ತನ ಬಂಧನ

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಕಚ್ ಗಡಿ ಪ್ರದೇಶದಿಂದ ಮತ್ತೊಬ್ಬ ಶಂಕಿತ ಗೂಢಚಾರನನ್ನು ಬಂಧಿಸಿದೆ. ಆರೋಪಿಯನ್ನು ಸಹದೇವ್ ಸಿಂಗ್ ಗೋಹಿಲ್ ಎಂದು ಗುರುತಿಸಲಾಗಿದ್ದು, ಗುಜರಾತ್ ನಿವಾಸಿಯಾಗಿದ್ದಾನೆ. ಬಂಧಿತ ಆರೋಪಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನೊಂದಿಗೆ ಸಂಪರ್ಕದಲ್ಲಿದ್ದ.

ಸೇನಾ ಮಾಹಿತಿ ಪಾಕ್‌ಗೆ ಹಂಚಿಕೆ;  ಆರೋಗ್ಯ ಕಾರ್ಯಕರ್ತನ ಬಂಧನ

Profile Vishakha Bhat May 24, 2025 3:54 PM

ಗಾಂಧೀನಗರ: ಗುಜರಾತ್ (Gujarat) ಭಯೋತ್ಪಾದನಾ ನಿಗ್ರಹ ದಳ (ATS) ಕಚ್ ಗಡಿ ಪ್ರದೇಶದಿಂದ ಮತ್ತೊಬ್ಬ ಶಂಕಿತ ಗೂಢಚಾರನನ್ನು (Spy For Pak) ಬಂಧಿಸಿದೆ. ಆರೋಪಿಯನ್ನು ಸಹದೇವ್ ಸಿಂಗ್ ಗೋಹಿಲ್ ಎಂದು ಗುರುತಿಸಲಾಗಿದ್ದು, ಗುಜರಾತ್ ನಿವಾಸಿಯಾಗಿದ್ದಾನೆ. ಬಂಧಿತ ಆರೋಪಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನೊಂದಿಗೆ ಸಂಪರ್ಕದಲ್ಲಿದ್ದ ಹಾಗೂ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪೂರೈಸುತ್ತಿದ್ದ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಆ ವ್ಯಕ್ತಿ ಗುಜರಾತ್‌ನ ಕೆಲವು ಸೂಕ್ಷ್ಮ ಸ್ಥಳಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದ. ಹೆಚ್ಚಿನ ವಿಚಾರಣೆಗಾಗಿ ಎಟಿಎಸ್ ಶಂಕಿತನನ್ನು ಅಹಮದಾಬಾದ್‌ಗೆ ಕರೆತಂದಿದೆ.

ಗುಜರಾತ್ ಎಟಿಎಸ್ ಎಸ್ಪಿ ಕೆ. ಸಿದ್ಧಾರ್ಥ್ ಮಾತನಾಡಿ, ಕಚ್‌ನ ಆರೋಗ್ಯ ಕಾರ್ಯಕರ್ತ ಗೋಹಿಲ್‌ನನ್ನು ಪಾಕಿಸ್ತಾನಿ ಏಜೆಂಟ್ ಜೊತೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ. ಎಟಿಎಸ್ ಪ್ರಕಾರ, ಗೋಹಿಲ್ ಬಿಎಸ್‌ಎಫ್ ಮತ್ತು ಐಎಎಫ್‌ಗೆ ಸಂಬಂಧಿಸಿದ ವಿವರಗಳನ್ನು ರವಾನಿಸುತ್ತಿದ್ದ ಎಂಬ ಮಾಹಿತಿಯ ಆಧಾರದ ಮೇಲೆ ಬಂಧಿಸಲಾಗಿದೆ. ಮೇ 1 ರಂದು ಪ್ರಾಥಮಿಕ ವಿಚಾರಣೆಗಾಗಿ ಆತನನ್ನು ಕರೆಸಲಾಗಿತ್ತು.

ತನಿಖೆಯ ಸಮಯದಲ್ಲಿ, ಗೋಹಿಲ್ ಜೂನ್-ಜುಲೈ 2023 ರಲ್ಲಿ ವಾಟ್ಸಾಪ್‌ನಲ್ಲಿ ಅದಿತಿ ಭಾರದ್ವಾಜ್ ಎಂಬ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾಗಿ ಬಹಿರಂಗಪಡಿಸಿದರು. ನಂತರ ಆಕೆ ಪಾಕಿಸ್ತಾನಿ ಏಜೆಂಟ್‌ ಎಂದು ತಿಳಿದು ಬಂದಿದೆ. ಬಿಎಸ್‌ಎಫ್ ಮತ್ತು ಐಎಎಫ್ ತಾಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಆಕೆ ಕೇಳಿದ್ದಾಳೆ. ಆರೋಪಿ ಆಕೆಗೆ ಫೋಟೋಗಳನ್ನು ಕಳುಹಿಸಿದ್ದಾನೆ. 2025 ರ ಆರಂಭದಲ್ಲಿ, ಗೋಹಿಲ್ ತನ್ನ ಆಧಾರ್ ವಿವರಗಳನ್ನು ಬಳಸಿಕೊಂಡು ಸಿಮ್ ಕಾರ್ಡ್ ಖರೀದಿಸಿದ್ದ ಮತ್ತು ಭಾರದ್ವಾಜ್‌ಗಾಗಿ OTP ಬಳಸಿ ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿದ್ದ ಎಂದು ವರದಿಯಾಗಿದೆ. ನಂತರದ ಎಲ್ಲಾ ಸಂವಹನ ಮತ್ತು ಫೈಲ್ ಹಂಚಿಕೆ ಆ ಸಂಖ್ಯೆಯ ಮೂಲಕವೇ ನಡೆಯಿತು. ಅಪರಿಚಿತ ವ್ಯಕ್ತಿಯೊಬ್ಬರು ಗೋಹಿಲ್‌ಗೆ 40 ಸಾವಿರ ರೂ ಕಳುಸಿದ್ದಾನೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Operation Sindoor: ನಾಗರಿಕರ ರಕ್ಷಣೆ ಕುರಿತು ಮಾತನಾಡುವ ಯೋಗ್ಯತೆ ಪಾಕಿಸ್ತಾನಕ್ಕಿಲ್ಲ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

ಭಾರದ್ವಾಜ್‌ಗೆ ಸಂಬಂಧಿಸಿದ ವಾಟ್ಸಾಪ್ ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಎಸ್‌ಪಿ ಸಿದ್ಧಾರ್ಥ್ ಹೇಳಿದರು. ಗೋಹಿಲ್ ಫೋನ್ ಅನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಗೋಹಿಲ್ ಮತ್ತು ಪಾಕಿಸ್ತಾನಿ ಏಜೆಂಟ್ ಇಬ್ಬರ ವಿರುದ್ಧವೂ ಬಿಎನ್‌ಎಸ್‌ನ ಸೆಕ್ಷನ್ 61 ಮತ್ತು 148 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.