ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Alia Bhatt: ಮತ್ತೊಮ್ಮೆ ತಾಯಿಯಾಗುತ್ತಿದ್ದಾರಾ ಅಲಿಯಾ ಭಟ್‌? ಈ ಫೋಟೋ ನೋಡಿ

2022ರ ಏಪ್ರಿಲ್ ನಲ್ಲಿ ವಿವಾಹವಾಗಿದ್ದ ಅಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್‌ ದಂಪತಿಗೆ ಅದೇ ವರ್ಷದ ನವೆಂಬರ್ ತಿಂಗಳಲ್ಲಿ ಮಗಳು ರಹಾ ಕಪೂರ್ ಜನಿಸಿದ್ದಳು. ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಕಾಣಿಸಿಕೊಂಡ ಅಲಿಯಾ ಭಟ್ ಇದೀಗ ಮತ್ತೆ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಮತ್ತೊಮ್ಮೆ ತಾಯಿಯಾಗುತ್ತಿದ್ದಾರಾ ಅಲಿಯಾ ಭಟ್‌ ?

ಮುಂಬೈ: ಬಾಲಿವುಡ್ ನಟಿ (Bollywood actress) ಆಲಿಯಾ ಭಟ್ (Alia Bhatt) ಮತ್ತೆ ಗರ್ಭಿಣಿ ಎನ್ನುವ ಕುರಿತು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾನ್ಸ್ ಚಲನಚಿತ್ರೋತ್ಸವದಲ್ಲಿ (Cannes Film Festival) ಶುಕ್ರವಾರ ಕಾಣಿಸಿಕೊಂಡ ಅಲಿಯಾ ಭಟ್ ಅವರು ಶಿಯಾಪರೆಲ್ಲಿ ವಿನ್ಯಾಸದ ಬಿಳಿ ಬಣ್ಣದ ಗೌನ್‌ ಧರಿಸಿ ಎಲ್ಲರ ಕಣ್ಮನ ಸೆಳೆದಿದ್ದಾರೆ. ಇದಲ್ಲದೆ ಲೋರಿಯಲ್ ಪ್ಯಾರಿಸ್‌ನ ಲೈಟ್ಸ್ ಆನ್ ವುಮೆನ್ಸ್ ವರ್ತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಅರ್ಮಾನಿ ಪ್ರೈವ್ ಗೌನ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಅಲಿಯಾ ಭಟ್ ಅವರ ಲುಕ್ ನೋಡಿರುವ ಅಭಿಮಾನಿಗಳು ಅವರು ಮತ್ತೆ ತಾಯಿಯಾಗುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

2022ರ ಏಪ್ರಿಲ್ ನಲ್ಲಿ ವಿವಾಹವಾಗಿದ್ದ ಅಲಿಯಾ ಭಟ್ ಮತ್ತು ರಣಬೀರ್ ದಂಪತಿಗೆ ಅದೇ ವರ್ಷದ ನವೆಂಬರ್ ತಿಂಗಳಲ್ಲಿ ಮಗಳು ರಹಾ ಕಪೂರ್ ಜನಿಸಿದ್ದಳು. ಆದರೆ ಇದೀಗ ಅಲಿಯಾ ಮತ್ತೆ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

aliya7

ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಕಾಣಿಸಿಕೊಂಡ ಅಲಿಯಾ ಅವರ ಚಿತ್ರಗಳು ಅವರು ಈಗ ಎರಡನೇ ಮಗುವಿನ ತಾಯಿಯಾಗಿರಬಹುದು ಎನ್ನುವ ಊಹಾಪೋಹಗಳನ್ನು ಹುಟ್ಟುಹಾಕಿವೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪೋಸ್ಟ್ ಗಳಲ್ಲಿ ನಟಿ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆಯೇ ಎಂದು ಆಶ್ಚರ್ಯಚಕಿತರಾಗಿ ಕೇಳಿದ್ದಾರೆ. ಈ ಕುರಿತು ರೆಡ್ಡಿಟ್‌ನಲ್ಲಿ ಒಬ್ಬರು ಅಲಿಯಾ ಅವರು ಗರ್ಭಿಣಿಯಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದು, ಮತ್ತೊಬ್ಬರು, ಅವರು ಗರ್ಭಿಣಿ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನೊಬ್ಬರು ಅಲಿಯಾ ಅವರ ಚಿತ್ರವನ್ನು ಮೊದಲು ನೋಡಿದಾಗ ನನಗೂ ಅದೇ ಆಲೋಚನೆ ಬಂದಿತು. ಯಾಕೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಅವರಲ್ಲಿ ತಾಯ್ತನದ ಹೊಳಪು ಕಾಣುತ್ತಿದೆ ಎಂದು ಬರೆದಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರು ಕೂಡ ಅಲಿಯಾ ಅವರು ಮತ್ತೆ ಗರ್ಭಿಣಿಯಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದು, ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಬ್ಬರೂ ಎರಡನೇ ಮಗುವನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದರು. 2024 ರಲ್ಲಿ ಐಎಮ್‌ಡಿಬಿಯ ಐಕಾನ್ಸ್ ಓನ್ಲಿ ವಿಭಾಗದಲ್ಲಿ ಮಾತನಾಡಿದ್ದ ಆಲಿಯಾ, ನಟಿಯಾಗಿ ಮಾತ್ರವಲ್ಲ ನಿರ್ಮಾಪಕಿಯಾಗಿಯೂ ಇನ್ನೂ ಅನೇಕ ಚಲನಚಿತ್ರಗಳನ್ನು ಮಾಡಬೇಕು ಎಂದು ಆಶಿಸುತ್ತೇನೆ. ಜೊತೆಗೆ ಹೆಚ್ಚು ಮಕ್ಕಳು, ಸಾಕಷ್ಟು ಪ್ರಯಾಣ, ಆರೋಗ್ಯಕರ, ಸಂತೋಷ, ಸರಳ, ಶಾಂತಿಯುತ ಜೀವನವನ್ನು ಬಯಸುವುದಾಗಿ ತಿಳಿಸಿದ್ದರು.



ಇತ್ತೀಚೆಗಷ್ಟೇ ಪಾಡ್ ಕಾಸ್ಟ್ ನಲ್ಲಿ ಆಲಿಯಾ ಭಟ್, ರಾಹಾ ಹೆಸರಿನ ಆಯ್ಕೆಯ ಹಿಂದಿನ ಕಥೆಯನ್ನು ತಿಳಿಸಿದ್ದು, ಎರಡನೇ ಮಗು ಗಂಡು ಆಗಿದ್ದರೆ ಅದಕ್ಕೆ ಹೆಸರನ್ನು ಆಯ್ಕೆ ಮಾಡಿ ಇಟ್ಟಿರುವುದಾಗಿಯೂ ಅವರು ಹೇಳಿದ್ದರು. ರಣಬೀರ್ ಕಪೂರ್ ಕೂಡ ಮಾಷಬಲ್ ಜೊತೆಗಿನ ಚಾಟ್‌ನಲ್ಲಿ ಶೀಘ್ರದಲ್ಲೇ ಹೊಸ ಹಚ್ಚೆ ಹಾಕಿಸಿಕೊಳ್ಳುವುದಾಗಿ ಹೇಳಿದ್ದರು. ಜೊತೆಗೆ ಇನ್ನೊಂದು ಮಗು ಹೊಂದುವ ಬಗ್ಗೆಯೂ ಸುಳಿವು ನೀಡಿದ್ದರು,

ಆಲಿಯಾ ಗರ್ಭಿಣಿ ಎನ್ನುವ ವಿಚಾರ ಕೇನ್ಸ್ ಪ್ರದರ್ಶನದಲ್ಲಿ ನಟಿಯ ಹಾವಭಾವ ನೋಡಿ ಹೇಳಿರುವ ಊಹಾಪೋಹಗಳಷ್ಟೇ. ಯಾಕೆಂದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಅವರ ಕುಟುಂಬದಿಂದ ಹೊರಬಿದ್ದಿಲ್ಲ.