Viral News: ಚಿನ್ನದ ಟಾಯ್ಲೆಟ್‌ಗೆ ಕನ್ನ ಹಾಕಿದ ಖದೀಮರು! 5ವರ್ಷಗಳ ನಂತರ ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ?
ಸೆಪ್ಟೆಂಬರ್ 14, 2019ರಂದು, ಆಕ್ಸ್‌ಫರ್ಡ್‌ಶೈರ್‌ನ ಬ್ಲೆನ್‌ಹೈಮ್ ಅರಮನೆಯಲ್ಲಿ ಐವರು ಕಳ್ಳರು ಭದ್ರತೆಯ ಕೊರತೆಯನ್ನು ದುರುಪಯೋಗಪಡಿಸಿಕೊಂಡು, ಕೇವಲ ಐದು ನಿಮಿಷಗಳಲ್ಲಿ 18 ಕ್ಯಾರೆಟ್ ಚಿನ್ನದ ಟಾಯ್ಲೆಟ್ ಅನ್ನು ಕದ್ದು ಪರಾರಿಯಾಗಿದ್ದರು. ಈ ಘಟನೆ ನಡೆದ ಸುಮಾರು ಐದು ವರ್ಷಗಳ ನಂತರ, ಕಳ‍್ಳರಿಗೆ ಶಿಕ್ಷೆಯಾಗಿದೆಯಂತೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಲಂಡನ್: 2019ರಲ್ಲಿ ಬ್ಲೆನ್‌ಹೈಮ್ ಅರಮನೆಯಿಂದ 18 ಕ್ಯಾರೆಟ್ ಚಿನ್ನದ ಟಾಯ್ಲೆಟ್‌ವೊಂದನ್ನು ಕಳ್ಳರು ಕಳ್ಳತನ ಮಾಡಿ ಸುಮಾರು ಐದು ವರ್ಷಗಳ ನಂತರ ಅವರ ತಪ್ಪಿಗೆ ಶಿಕ್ಷೆಯಾಗಿದೆಯಂತೆ. ಅಂತಿಮವಾಗಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಅಂದು 55 ಕೋಟಿ ಮೌಲ್ಯದ ಚಿನ್ನದ ಶೌಚಾಲಯದ(Gold Toilet) ದರೋಡೆಯಲ್ಲಿ ಭಾಗಿಯಾಗಿರುವ ನಾಲ್ವರು ವ್ಯಕ್ತಿಗಳ ವಿರುದ್ಧ ಬ್ರಿಟಿಷ್ ಕೋರ್ಟ್ ಶಿಕ್ಷೆ ವಿಧಿಸಿದೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.ಆರೋಪಿಗಳಲ್ಲಿ ಒಬ್ಬನಾದ ಫ್ರೆಡೆರಿಕ್ ಡೊ, ಕಳ್ಳತನದಲ್ಲಿ ನೇರವಾಗಿ ಭಾಗಿಯಾಗಿಲ್ಲವಂತೆ. ಆದರೆ ಕರಗಿಸಿದ ಚಿನ್ನವನ್ನು ಮಾರಾಟ ಮಾಡುವಲ್ಲಿ ಆತ ಸಹಾಯ ಮಾಡಿದ್ದಾನೆ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ಜೈಲು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಇತರ ಮೂವರು ದರೋಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ಘೋಷಿಸಲಾಯಿತು ಮತ್ತು ಶಿಕ್ಷೆ ವಿಧಿಸಲಾಯಿತು. ಐದನೇ ಶಂಕಿತನನ್ನು ಖುಲಾಸೆಗೊಳಿಸಲಾಯಿತಂತೆ.
ನಡೆದಿದ್ದೇನು?
ಸೆಪ್ಟೆಂಬರ್ 14, 2019 ರ ಮುಂಜಾನೆ ಆಕ್ಸ್‌ಫರ್ಡ್‌ಶೈರ್‌ನ ಐತಿಹಾಸಿಕ ಬ್ಲೆನ್‌ಹೈಮ್ ಅರಮನೆಯಲ್ಲಿ ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ ರಚಿಸಿದ 18 ಕ್ಯಾರೆಟ್ ಚಿನ್ನದ ಶೌಚಾಲಯದ ಕಳ್ಳತನ ಪ್ರಕರಣವೊಂದು ನಡೆದಿತ್ತು. ಇದರ ಬೆಲೆ ಸುಮಾರು 4.8 ಮಿಲಿಯನ್ ಪೌಂಡ್‌ಗಳು, ಅಂದರೆ 55 ಕೋಟಿ ರೂಪಾಯಿ. ಇದನ್ನು ಬ್ಲೆನ್‌ಹೈಮ್ ಅರಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.ದರೋಡೆ ಪ್ರಕರಣದ ಬಗ್ಗೆ ಅರಮನೆಯ ಭದ್ರತಾ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕಳ್ಳರು ಚಿನ್ನದ ಶೌಚಾಲಯದೊಂದಿಗೆ ಪರಾರಿಯಾಗಿದ್ದರಂತೆ.
ಶಾಕಿಂಗ್ ಸಂಗತಿ ಏನೆಂದರೆ, ಚಿನ್ನದ ಶೌಚಾಲಯದ ಕಲಾಕೃತಿ ಇದ್ದ ಗ್ಯಾಲರಿಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗಳಾಗಲಿ ಅಥವಾ ಸಿಸಿಟಿವಿ ಕ್ಯಾಮೆರಾಗಳಾಗಲಿ ಇರಲಿಲ್ಲವಂತೆ. ಕಳ್ಳರು ಇದರ ಲಾಭವನ್ನು ಬಳಸಿಕೊಂಡು ಪೊಲೀಸರು ಬರುವ ಮೊದಲೇ ಓಡಿಹೋಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೇ ಕಳ್ಳರು ಈ ಚಿನ್ನದ ಟಾಯ್ಲೆಟ್ ಅನ್ನು ಕಳ್ಳತನ ಮಾಡಲು ಕೇವಲ 5 ನಿಮಿಷಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ. ಈ ಪ್ರಕರಣವು 5 ವರ್ಷಗಳ ಕಾಲ ಬಗೆಹರಿಯದೆ ಉಳಿದಿತ್ತು.
ಈ ಸುದ್ದಿಯನ್ನೂ ಓದಿ:Viral Video:ಜುಟ್ಟು ಹಿಡಿದುಕೊಂಡು ಬಡಿದಾಡಿಕೊಂಡ ಹುಡುಗಿಯರು; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಐದು ವರ್ಷಗಳ ತನಿಖೆಯ ನಂತರ ಪೊಲೀಸರು ಅಂತಿಮವಾಗಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಮೂವರು ತಪ್ಪಿತಸ್ಥರೆಂದು ಸಾಬೀತಾಗಿ ಶಿಕ್ಷೆ ವಿಧಿಸಲಾಯಿತು, ಆದರೆ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಲಾಯಿತು. ಮತ್ತೊಬ್ಬನನ್ನು ಶಿಕ್ಷೆಯಿಂದ ಅಮಾನತುಗೊಳಿಸಲಾಯಿತು. ಪೊಲೀಸ್ ತನಿಖೆಯಲ್ಲಿ ಕಳ್ಳರು ಶೌಚಾಲಯವನ್ನು ಕರಗಿಸಿ ಮಾರಾಟ ಮಾಡಿದ್ದಾರೆ ಹಾಗಾಗಿ ಅದನ್ನು ವಾಪಾಸ್ ಪಡೆಯಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.