Viral Video: ಒಂದೇ ವೇದಿಕೆಯ ಮೇಲೆ ಹಿಂದೂ-ಮುಸ್ಲಿಂ ಜೋಡಿಯ ಮದುವೆ; ಧರ್ಮ ಬೇಧ ಮರೆಸಿದ ಮಳೆರಾಯ!
ಭಾರೀ ಮಳೆಯಿಂದಾಗಿ ಮದುವೆ ವಿಧಿವಿಧಾನಗಳಿಗೆ ಅಡ್ಡಿಯುಂಟಾಗಿ ಸಮಸ್ಯೆಯಲ್ಲಿ ಸಿಲುಕಿದ್ದ ಹಿಂದೂ ಕುಟುಂಬದ ನೆರವಿಗೆ ಮುಸ್ಲಿಂ ಕುಟುಂಬವೊಂದು ಬಂದಿದೆ. ಅರ್ಧಕ್ಕೆ ನಿಂತ ಹಿಂದೂ ಜೋಡಿಯ ಮದುವೆಗೆ ಮುಸ್ಲಿಂ ಕುಟುಂಬವು ಸಭಾಂಗಣವನ್ನು ಬಿಟ್ಟು ಕೊಟ್ಟಿದೆ. ಈ ಮೂಲಕ ಎರಡು ಕುಟುಂಬದವರು ಸರ್ವಧರ್ಮ ಸಮನ್ವಯವನ್ನು ಸಾರಿದ್ದಾರೆ.ಈ ಸುದ್ದಿ ಇದೀಗ ವೈರಲ್(Viral News) ಆಗಿದೆ.


ಪುಣೆ: ಇತ್ತೀಚೆಗೆ ಭಾರೀ ಮಳೆಯಿಂದಾಗಿ ಮದುವೆ ವಿಧಿವಿಧಾನಗಳಿಗೆ ಅಡ್ಡಿಯುಂಟಾಗಿ ಸಮಸ್ಯೆಯಲ್ಲಿ ಸಿಲುಕಿದ್ದ ಹಿಂದೂ ಕುಟುಂಬದ ನೆರವಿಗೆ ಮುಸ್ಲಿಂ ಕುಟುಂಬವೊಂದು ಬಂದಿದೆ. ಹೀಗಾಗಿ ಒಂದೇ ವೇದಿಕೆಯಲ್ಲಿ ಹಿಂದೂ ದಂಪತಿ ಮತ್ತು ಮುಸ್ಲಿಂ ದಂಪತಿಗಳ ಮಕ್ಕಳ ಮದುವೆ ನಡೆದಿದೆ. ಅವರ ಜೋಡಿ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ. ವನವಾಡಿಯ SRPF ಮೈದಾನದ ಬಳಿಯ ಅಲಂಕಾರನ್ ಲಾನ್ಸ್‌ನಲ್ಲಿ ಹಿಂದೂ ಕುಟುಂಬದ ಮದುವೆಯೊಂದು ನಡೆದಿತ್ತು. ಈ ವೇಳೆ ಭಾರೀ ಮಳೆ ಸುರಿದ ಕಾರಣ ಅವರ ಮದುವೆಯ ಆಚರಣೆಯನ್ನು ನಿಲ್ಲಿಸಲಾಯಿತು. ಈ ನಡುವೆ ಹತ್ತಿರದ ವಾನ್ವೋರಿ ಪ್ರದೇಶದ ಸಭಾಂಗಣದಲ್ಲಿ, ಮುಸ್ಲಿಂ ಕುಟುಂಬವೊಂದರ ಮದುವೆ ಸಮಾರಂಭ ನಡೆಯುತ್ತಿತಂತೆ. ಆ ವೇಳೆ ಹಿಂದೂ ಕುಟುಂಬದವರು ಮದುವೆಯ ಆಚರಣೆ ಮುಂದುವರಿಸಲು ಸ್ವಲ್ಪ ಸಮಯದವರೆಗೆ ಸಭಾಂಗಣವನ್ನು ಬಳಸಲು ನಮಗೆ ಅವಕಾಶ ನೀಡುವಂತೆ ಮುಸ್ಲಿಂ ಕುಟುಂಬವನ್ನು ವಿನಂತಿಸಿದ್ದಾರೆ.
ಉದಾರತೆ ಮತ್ತು ಸಹಾನುಭೂತಿಯ ತೋರಿದ ಕಾಜಿ ಕುಟುಂಬವು ಹಿಂದೂ ದಂಪತಿಯನ್ನು ತಮ್ಮ ಸಭಾಂಗಣಕ್ಕೆ ಸ್ವಾಗತಿಸಿ ಅವರು ವೇದಿಕೆಯನ್ನು ಖಾಲಿ ಮಾಡಿದ್ದಲ್ಲದೆ, ಅವರ ಅತಿಥಿಗಳು ಹಿಂದೂ ಆಚರಣೆಗಳಿಗೆ ವ್ಯವಸ್ಥೆ ಮಾಡಲು ಸಹ ಸಹಾಯ ಮಾಡಿದರು. ಎರಡೂ ವಿವಾಹಗಳನ್ನು ಗೌರವಯುತವಾಗಿ, ಒಂದರ ನಂತರ ಒಂದರಂತೆ ನಡೆಸಲಾಯಿತು.
ಇಬ್ಬರು ನವವಿವಾಹಿತ ದಂಪತಿಗಳು, ಒಬ್ಬರು ಹಿಂದೂ ಮತ್ತು ಒಬ್ಬರು ಮುಸ್ಲಿಂ, ಒಂದೇ ವೇದಿಕೆಯಲ್ಲಿ ನಿಂತು ಪೋಟೊ ಶೂಟ್ ಮಾಡಿದ್ದಾರೆ. ಇಲ್ಲಿ ಎರಡು ಕುಟುಂಬಗಳು ಕೇವಲ ಜಾಗವನ್ನು ಹಂಚಿಕೊಳ್ಳಲಿಲ್ಲ. ಅವರ ಭಾವನೆಗಳು, ಊಟವನ್ನು ಮತ್ತು ಸಂತೋಷವನ್ನು ಹಂಚಿಕೊಂಡರು. ಈ ಜೋಡಿ ಮದುವೆಯ ಆಚರಣೆ ರಾತ್ರಿಯವರೆಗೂ ನಡೆಯಿತು ಎನ್ನಲಾಗಿದೆ.
ಈ ಹಿಂದೆ ಮಾಲ್ಡಾದ ರಾಮಧಾಂತೋಲಾ ಗ್ರಾಮದ ಮುಸ್ಲಿಂ ಸಮುದಾಯವೊಂದು ಈ ಪ್ರದೇಶದಲ್ಲಿ ಉಂಟಾಗಿದ್ದ ಹಿಂದೂ-ಮುಸ್ಲಿಂ ವಿವಾದವನ್ನು ಬದಿಗಿಟ್ಟು, ದುಃಖಿತ ಹಿಂದೂ ಕುಟುಂಬವನ್ನು ಬೆಂಬಲಿಸಲು ಒಂದಾಗಿತ್ತು. ದೆಹಲಿಯಲ್ಲಿ ಅನಿರೀಕ್ಷಿತವಾಗಿ ನಿಧನರಾದ ವಲಸೆ ಕಾರ್ಮಿಕ ಟಿಂಕು ಮಂಡಲ್ (37) ಅವನ ಕುಟುಂಬಕ್ಕೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಿದ್ದರು.
ಈ ಸುದ್ದಿಯನ್ನೂ ಓದಿ:Viral Video: ತೆರೆದ ಮ್ಯಾನ್‌ಹೋಲ್‌ನಿಂದ ಎದ್ದು ಬಂದ ವ್ಯಕ್ತಿ- ಈ ಶಾಕಿಂಗ್ ವಿಡಿಯೊ ಇಲ್ಲಿದೆ
ಕುಟುಂಬದ ಏಕೈಕ ಜೀವನಾಧಾರವಾಗಿದ್ದ ಮಂಡಲ್, ತನ್ನ ಪತ್ನಿ ತುಂಪಾ ಮತ್ತು ನಾಲ್ವರು ಅಪ್ರಾಪ್ತ ಮಕ್ಕಳನ್ನು ಅಗಲಿದ್ದಾನೆ. ಮಂಡಲ್ ಅವನ ದೇಹವನ್ನು ಮನೆಗೆ ತರುವಲ್ಲಿ ಮತ್ತು ಅಂತಿಮ ವಿಧಿವಿಧಾನಗಳನ್ನು ನಿರ್ವಹಿಸುವಲ್ಲಿ ಕುಟುಂಬವು ಸಾಲ ಮಾಡಬೇಕಾಯಿತು. ಸಂಬಂಧಿಕರು ಮತ್ತು ನೆರೆಹೊರೆಯವರು ಆರಂಭದಲ್ಲಿ ಸ್ವಲ್ಪ ಹಣವನ್ನು ನೀಡಿದರು. ಆದರೆ ಅದು ಸಾಕಾಗಲಿಲ್ಲ. ಆಗ ಬರಾಬಗನ್ ಮತ್ತು ಕಚಾರಿ ಮೋರ್‌ನ ಮುಸ್ಲಿಂ ನಿವಾಸಿಗಳು ಈದ್ ಪ್ರಾರ್ಥನೆಯ ನಂತರ ದೇಣಿಗೆ ಸಂಗ್ರಹಿಸಿ ಬಡ ಹಿಂದೂ ಕುಟುಂಬಕ್ಕೆ ಸಹಾಯ ಮಾಡಿದ್ದರು.