ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಮದರಸದಲ್ಲಿ 14 ವರ್ಷದ ಬಾಲಕ ಮೇಲೆ ಪೈಶಾಚಿಕ ಕೃತ್ಯ! ಮೌಲ್ವಿ ಅರೆಸ್ಟ್‌

ಲಕ್ನೋದ ಮಡಿಯಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ನೌಬಸ್ತಾ ಬಡಾ ಖಾದಾನ್ ಪ್ರದೇಶದ 'ದಾರುಲ್ ಉಲೂಮ್' ಎಂಬ ಮದರಸದಲ್ಲಿ ಓದುತ್ತಿದ್ದ ಸೀತಾಪುರದ 14 ವರ್ಷದ ಬಾಲಕನ ಮೇಲೆ ಮೌ ಜಿಲ್ಲೆಯ ಮೌಲ್ವಿ ಕಾರಿ ಅಬ್ದುಲ್ ಲೈಂಗಿಕ ದೌರ್ಜನ್ಯ (Physical Abuse) ನಡೆಸಿದ್ದು ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಮೌಲ್ವಿಯನ್ನು ಬಂಧಿಸಿದ್ದಾರೆ.

ಮದರಸದಲ್ಲಿ 14 ವರ್ಷದ ಬಾಲಕ ಮೇಲೆ ಪೈಶಾಚಿಕ ಕೃತ್ಯ! ಮೌಲ್ವಿ ಅರೆಸ್ಟ್‌

ಲಖನೌ: ಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ (Physical Abuse) ಎಸಗುತ್ತಿದ್ದ ಮೌಲ್ವಿಯೊಬ್ಬನನ್ನು (madarsa maulvi) ಲಕ್ನೋದಲ್ಲಿ (lucknow) ಬಂಧಿಸಲಾಗಿದೆ. ಲಖನೌ ಮಡಿಯಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ನೌಬಸ್ತಾ ಬಡಾ ಖಾದಾನ್ ಪ್ರದೇಶದ ಮದರಸದಲ್ಲಿ ಮೌಲ್ವಿ ಕಾರಿ ಅಬ್ದುಲ್ ಎಂಬಾತ ಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. 14 ವರ್ಷದ ಬಾಲಕನೊಬ್ಬ ಇದನ್ನು ಮನೆಯಲ್ಲಿ ತಿಳಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕನ ಪೋಷಕರು ಈ ಬಗ್ಗೆ ವಿಚಾರಿಸಲು ಮದರಸ ಹೋದಾಗ ಅವರ ಮೇಲೆ ಹಲ್ಲೆಯ ಪ್ರಯತ್ನವನ್ನೂ ನಡೆಸಲಾಗಿದೆ.

ಲಕ್ನೋದ ಮಡಿಯಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ನೌಬಸ್ತಾ ಬಡಾ ಖಾದಾನ್ ಪ್ರದೇಶದ 'ದಾರುಲ್ ಉಲೂಮ್' ಎಂಬ ಮದರಸದಲ್ಲಿ ಓದುತ್ತಿದ್ದ ಸೀತಾಪುರದ 14 ವರ್ಷದ ಬಾಲಕನ ಮೇಲೆ ಮೌ ಜಿಲ್ಲೆಯ ಮೌಲ್ವಿ ಕಾರಿ ಅಬ್ದುಲ್ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಹಾಫಿಜ್-ಎ-ಕುರಾನ್ ಆಗಲು ತರಬೇತಿ ಪಡೆಯಲು ಬಾಲಕ ಮದರಸ ಬಂದಿದ್ದ. ಮೇ 15ರಂದು ಎಲ್ಲ ಮಕ್ಕಳೊಂದಿಗೆ ರಾತ್ರಿ ಊಟ ಮುಗಿಸಿ ಹಾಸ್ಟೆಲ್ ಕೋಣೆಯಲ್ಲಿ ಮಲಗಿದ್ದ ಬಾಲಕನನ್ನು ಸುಮಾರು 11 ಗಂಟೆಗೆ ಮೌಲ್ವಿ ಬಂದು ಎಬ್ಬಿಸಿ ತನ್ನ ಕೋಣೆಗೆ ಕರೆಸಿ ಅತ್ಯಾಚಾರ ನಡೆಸಿದ್ದಾನೆ. ಮೌಲ್ವಿ ಈ ಹಿಂದೆಯೂ ಹಲವು ಬಾರಿ ಮಕ್ಕಳ ಮೇಲೆ ಇಂತಹ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ.

ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಮದರಸದಿಂದ ಹೊರಹಾಕುವುದಾಗಿ ಮಕ್ಕಳಿಗೆ ಮೌಲ್ವಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಬೇರೆ ಮಕ್ಕಳು ಮೌಲ್ವಿಗೆ ಹೆದರಿ ಅತ್ಯಾಚಾರವನ್ನು ಸಹಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ ಬಾಲಕ ತನ್ನ ಕುಟುಂಬದವರಿಗೆ ವಿಷಯ ತಿಳಿಸಿದ್ದರಿಂದ ಈ ವಿಷಯ ಬೆಳಕಿಗೆ ಬಂದಿದೆ.

ಬಾಲಕ ನೀಡಿದ ದೂರಿನ ಮೇರೆಗೆ ಕುಟುಂಬಸ್ಥರು ವಿಚಾರಿಸಲು ಮದರಸಕ್ಕೆ ತೆರಳಿದಾಗ ಮೌಲ್ವಿ ಅವರನ್ನು ಬಂಧನದಲ್ಲಿ ಇರಿಸಿದ್ದು ಮಾತ್ರವಲ್ಲದೆ ಅವರ ಮೇಲೆ ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ಕೂಡ ನಡೆಸಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೌಲ್ವಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Indus River: ಸಿಂಧೂ ನದಿ ನೀರು ಒಪ್ಪಂದ ರದ್ದು; ಹೇಗಿದೆ ಚಿತ್ರಣ.... ಸ್ಯಾಟ್‌ಲೈಟ್‌ ಫೋಟೋಗಳು ಏನು ಹೇಳುತ್ತವೆ?

ಸುಮಾರು 20 ವರ್ಷಗಳಿಂದ ನಡೆಯುತ್ತಿರುವ ದಾರುಲ್ ಉಲೂಮ್ ಮದರಸದಲ್ಲಿ ಹಲವಾರು ಬಾಲಕ, ಬಾಲಕಿಯರು ಓದುತ್ತಿದ್ದಾರೆ. ಮೌಲ್ವಿ ಕಾರಿ ಅಬ್ದುಲ್ ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದು ಸೇರಿದ್ದು, ಮಕ್ಕಳಿಗೆ ತರಬೇತಿ ನೀಡುತ್ತಿದ್ದ. ಮೌಲ್ವಿಯ ವಿರುದ್ಧ ಪೋಕ್ಸೊ ಕಾಯ್ದೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ.