Muddu Sose Serial: ಮುದ್ದು ಸೊಸೆ ಮಹಾಸಂಚಿಕೆ-ವಿದ್ಯಾಳ ಭವಿಷ್ಯವೇ ಅಲ್ಲೋಲ..ಕಲ್ಲೋಲ
ಪ್ರೀತಿ ಸಂಬಂಧಗಳ ಕಥೆಯನ್ನು ಹೊಂದಿರುವ ನಾಯಕಿಯ ಸುತ್ತ ಹೆಣೆದಿರುವ 'ಮುದ್ದು ಸೊಸೆ' ಈಗಾಗಲೇ ಪ್ರೇಕ್ಷಕರ ಹೃದಯ ಗೆದ್ದಿದೆ..ಆರಂಭದಿಂದಲೇ ಸಾಕಷ್ಟು ಕುತೂಹಲ ಕೆರಳಿಸುವ ಈ ಸೀರಿಯಲ್ ಮಹಾಸಂಚಿಕೆ ಪ್ರಸಾರವಾಗಲಿದೆ.ವಿಶೇಷವೆಂದರೆ ಸೀರಿಯಲ್ ನಲ್ಲಿ ವಿದ್ಯಾಳ ಭವಿಷ್ಯವೇ ಅಲ್ಲೋಲ ಕಲ್ಲೋಲ ಆಗಲಿದೆಯಾ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಮೂಡಿದೆ.



ಪ್ರೀತಿ ಸಂಬಂಧಗಳ ಕಥೆಯನ್ನು ಹೊಂದಿರುವ ನಾಯಕಿಯ ಸುತ್ತ ಹೆಣೆದಿರುವ ಮುದ್ದು ಸೊಸೆ' ಈಗಾಗಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ಮೇ 22 ರಿಂದ ರಾತ್ರಿ 7:30 ರಿಂದ 8:30ಕ್ಕೆ ಮುದ್ದು ಸೊಸೆ' ಮಹಾಸಂಚಿಕೆ ಪ್ರಸಾರವಾಗಿದ್ದು ಸೀರಿಯಲ್ ಪ್ರಿಯರು ಹೆಚ್ಚು ಥ್ರಿಲ್ ಆಗಿದ್ದಾರೆ.

ವಿಶೇಷವೆಂದರೆ ಸೀರಿಯಲ್ ನಲ್ಲಿ ವಿದ್ಯಾಳ ಭವಿಷ್ಯವೇ ಅಲ್ಲೋಲ ಕಲ್ಲೋಲ ಆಗಲಿದೆಯಾ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಮೂಡಿದೆ. ಚೆಲುವ ಕೋಪಗೊಂಡು ವಿದ್ಯಾ ಯಾರ ಜೊತೆಗೋ ಓಡಿ ಹೋಗಲು ಪ್ರಯತ್ನಿಸಿದ್ದಾಳೆ ಎಂದು ಆರೋಪ ಮಾಡುತ್ತಾನೆ. ವಿದ್ಯಾಗೆ ಇದರಿಂದ ತುಂಬಾ ದುಃಖವಾಗುವ ಸನ್ನಿವೇಶವೂ ಇರಲಿದೆ.

ತಾನು ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ವಿದ್ಯಾ ಅಳುತ್ತಾಳೆ. ಆದರೆ ಚೆಲುವ ಕಬ್ಬಿಣದ ರಾಡ್ ಅನ್ನು ಕಾಯಿಸಿ ಅವಳ ಕಾಲಿಗೆ ಬರೆ ಇಡುತ್ತಾನೆ. ಶಿವರಾಮೇಗೌಡ ಜೈಲಿನಲ್ಲಿದ್ದು ಚೆಲುವ ಭದ್ರನ ಮನೆಗೆ ಬಂದಾಗ ಭಾಗೀರಥಿ ತಟ್ಟೆ ಹೊರಗೆ ಎಸೆಯಲು ಪ್ರಾರಂಭಿಸುತ್ತಾಳೆ. ಚೆಲುವನಿಗೆ ಈ ರೀತಿಯ ವರ್ತನೆ ಶಾಕ್ ಆಗುತ್ತದೆ.

ಇದೇನಾಗ್ತಿದೆ ಎಂದು ಅವನು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಭಾಗೀರಥಿ ತನಗೆ ತನ್ನ ಮಗನ ಸಂಬಂಧವನ್ನು ಮುಂದುವರೆ ಸುವುದು ಇಷ್ಟವಿಲ್ಲ ಎಂದು ಹೇಳುತ್ತಾಳೆ. ವಿದ್ಯಾಳ ಹುಟ್ಟುಹಬ್ಬದಂದೇ ಶಿವರಾಮೇಗೌಡ ಜೈಲಿನಿಂದ ಬಿಡುಗಡೆಯಾಗು ತ್ತಾನೆ. ಅಜ್ಜಿ ಭದ್ರನ ಮದುವೆ ವಿನಂತಿಯ ಜೊತೆ ಮಾಡುವಂತೆ ಶಿವರಾಮೇಗೌಡನಿಗೆ ಸಲಹೆ ಕೊಡುತ್ತಾಳೆ.

ಶಿವರಾಮೇಗೌಡನು ಭದ್ರನ ಮದುವೆ ಬಗ್ಗೆ ತಾನು ನಿರ್ಧಾರ ಮಾಡಿರೋದಾಗಿ ತಿಳಿಸುತ್ತಾನೆ. ಅವನು ಮಾಡಿರೋ ನಿರ್ಧಾರ ಏನು? ಇದರಿಂದ ವಿದ್ಯಾಗೆ ಅನುಕೂಲವಾಗುತ್ತಾ? ಅಪಾಯವಾಗುತ್ತಾ? ಎನ್ನುವ ಕಥೆಯೇ ಕುತೂಹಲ ಕಾರಿಯಾಗಿದೆ.