ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysore Pak: ಮೈಸೂರ್‌ ಪಾಕ್‌ ನಹೀ... ಮೈಸೂರ್‌ ಶ್ರೀ ಬೋಲೋ! ಚಪ್ಪರಿಸಿ ತಿನ್ನೋ ಸಿಹಿ ತಿಂಡಿಯ ಹೆಸರು ಚೇಂಜ್‌

Mysore Pak name changed: ಎಳೆಯರಿಂದ ಹಿರಿಯವರೆಗೂವರೆಗೂ ಮೈಸೂರು ಪಾಕ್ ಅನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ʻಮೈಸೂರ್‌ ಪಾಕʼಎಂಬ ಈ ಹೆಸರಿನ ಈ ಸಿಹಿ ತಿಂಡಿ ಬರು ಬರುತ್ತಾ ಸೈಲಿಶ್‌ ಆಗಿ ʻಮೈಸೂರ್‌ ಪಾಕ್‌ʼಆಗಿ ಬದಲಾಯ್ತು. ಇದೀಗ ಈ ʻಪಾಕ್‌ʼ ಶಬ್ದಕ್ಕೆ ಕತ್ತರಿ ಹಾಕೋಕೆ ಜೈಪುರದ ಸಿಹಿತಿಣಸು ಅಂಗಡಿಯೊಂದು ಮುಂದಾಗಿದೆ.

ಮೈಸೂರ್‌ ಪಾಕ್‌ಗೆ ಹೊಸ ಹೆಸರು!

Profile Rakshita Karkera May 23, 2025 3:52 PM

ಜೈಪುರ: ಮೈಸೂರು ಪಾಕ್‌ ಯಾರಿಗೆ ಇಷ್ಟ ಇಲ್ಲ ಹೇಳಿ. ಒಮ್ಮೆ ತಿಂದರೆ ಮತ್ತೆ ಮತ್ತೆ ಸವಿಯಬೇಕು ಬೇಕೆನಿಸುವ ಸಿಹಿ ಅದು. ನಮ್ಮ ಮೈಸೂರಿನಲ್ಲೇ ಹುಟ್ಟಿಕೊಂಡ ಪಾಕ ವಿಧಾನವಿದು. ಕರ್ನಾಟಕ ರಾಜ್ಯದಲ್ಲಿ ಜನ್ಮ ತಾಳಿದ ಈ ಮೈಸೂರು ಪಾಕ್‌ ಈಗ ದೇಶ ಮಾತ್ರವಲ್ಲದೇ ವಿದೇಶಿಗರಿಗೂ ಮೆಚ್ಚಿನ ಸಿಹಿ ತಿಂಡಿ. ಎಳೆಯರಿಂದ ಹಿರಿಯವರೆಗೂವರೆಗೂ ಮೈಸೂರು ಪಾಕ್ ಅನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ʻಮೈಸೂರ್‌ ಪಾಕʼಎಂಬ ಈ ಹೆಸರಿನ ಈ ಸಿಹಿ ತಿಂಡಿ ಬರು ಬರುತ್ತಾ ಸೈಲಿಶ್‌ ಆಗಿ ʻಮೈಸೂರ್‌ ಪಾಕ್‌ʼಆಗಿ ಬದಲಾಯ್ತು. ಇದೀಗ ಈ ʻಪಾಕ್‌ʼ ಶಬ್ದಕ್ಕೆ ಕತ್ತರಿ ಹಾಕೋಕೆ ಜೈಪುರದ ಸಿಹಿತಿನಿಸು ಅಂಗಡಿಯೊಂದು ಮುಂದಾಗಿದೆ. ಕರ್ನಾಟಕದ ಹೆಮ್ಮೆಯಾಗಿರುವ ʻಮೈಸೂರ್‌ ಪಾಕ್‌ʼ ಹೆಸರನ್ನು ಬದಲಿಸಲು ಮುಂದಾಗಿರುವ ಜೈಪುರದ ಈ ಅಂಗಡಿ ಇಟ್ಟಿರುವ ಹೊಸ ಹೆಸರೇನು ಗೊತ್ತಾ? ಇಲ್ಲಿದೆ ಮಾಹಿತಿ.

ಸಿಹಿತಿಂಡಿ, ಮಿಠಾಯಿ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ ಜೈಪುರದ ತ್ಯೋಹಾರ್ ಸ್ವೀಟ್ಸ್, ಮೈಸೂರ್‌ ಪಾಕ್‌ ಸಿಹಿ ತಿಂಡಿಯನ್ನು ಹೊಸ ಹೆಸರಿನ ಮೂಲಕ ಮರು ಬ್ರ್ಯಾಂಡ್‌ ಮಾಡಲು ಮುಂದಾಗಿದೆ. ಪಾಕ್‌ ಎಂಬ ಪದವನ್ನು ತೆಗೆದು ಮೈಸೂರ್‌ ಶ್ರೀ ಎಂದು ಈ ಸಿಹಿತಿಂಡಿಗೆ ಹೆಸರಿಟ್ಟಿದ್ದು, ಇದೀಗ ಎಲ್ಲೆಡೆ ಈ ವಿಚಾರ ಬಹಳ ಸದ್ದು ಮಾಡುತ್ತಿದೆ. ಇನ್ನು ಮೈಸೂರ್‌ ಪಾಕ್‌ ಮಾತ್ರವಲ್ಲ...ಪಾಕ್‌ ಎಂದು ಎಂದು ಹೆಸರಿರುವ ಎಲ್ಲಾ ಸಿಹಿತಿಂಡಿಗಳ ಹೆಸರನ್ನು ಬದಲಿಸಲಾಗಿದೆ. ಮೋತಿ ಪಾಕ್, ಆಮ್ ಪಾಕ್, ಗೊಂಡ್ ಪಾಕ್ ಮತ್ತು ಮೈಸೂರು ಪಾಕ್‌ನಂತಹ ಹೆಸರುಗಳು ಈಗ ಮೋತಿ ಶ್ರೀ, ಆಮ್ ಶ್ರೀ, ಗೊಂಡ್ ಶ್ರೀ ಮತ್ತು ಮೈಸೂರು ಶ್ರೀಗಳಾಗಿ ರೀ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ.

ಈ ಸುದ್ದಿಯನ್ನೂ ಓದಿ: Tamannaah Bhatia: ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಆಯ್ಕೆ; ಕನ್ನಡಿಗರು ಗರಂ

ಯಾಕೀ ಹೆಸರು ಬದಲಾವಣೆ?

ಇನ್ನು ಏಕಾಏಕಿ ಈ ಸಿಹಿತಿಂಡಿಯ ಹೆಸರು ಬದಲಾವಣೆ ಏಕೆ? ಇದರ ಹಿಂದಿರುವ ಉದ್ದೇಶವಾದರೂ ಏನು? ಅಂಗಡಿ ಮಾಲೀಕರಾದ ಅಂಜಲಿ ಜೈನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇವಲ ದೇಶಭಕ್ತಿಯಿಂದಾಗಿ ಈ ಹೆಸರು ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ. ಪಹಲ್ಗಾಮ್‌ ದಾಳಿ, ಆಪರೇಷನ್‌ ಸಿಂದೂರ್‌ ಬಳಿಕ

ಪಾಕ್‌ ಅನ್ನೋ ಪದ ನಮ್ಮ ದೇಶದ ಸಿಹಿತಿಂಡಿಯಲ್ಲಿರುವುದು ಸರಿ ಕಾಣುತ್ತಿಲ್ಲ. ದೇಶಭಕ್ತಿಯ ಮನೋಭಾವವು ಗಡಿಯಲ್ಲಿ ಮಾತ್ರ ಇರಬಾರದು, ಬದಲಾಗಿ ಪ್ರತಿಯೊಬ್ಬ ನಾಗರಿಕನಲ್ಲೂ ಇರಬೇಕು. ಹೀಗಾಗಿಯೇ ಮೈಸೂರ್‌ ಪಾಕ್‌ ಹೆಸರನ್ನು ಬದಲಿಸಿದ್ದೇವೆ ಎಂದಿದ್ದಾರೆ. ಗ್ರಾಹಕರಲ್ಲೂ ದೇಶ ಭಕ್ತಿ ಭಾವನೆ ಮೂಡಬೇಕೆಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.