ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DG-IGP M A Saleem Interview: ಸಮ ಸಮಾಜದ ನಿರ್ಮಾಣವೇ ಸಲೀಂ ಗುರಿ

ರಾಜ್ಯದಲ್ಲಿ ಹಲವು ಸವಾಲುಗಳಿದ್ದರೂ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬೆದರಿಕೆ ಇಲ್ಲವೇ ಅಶಾಂತಿ ಸೃಷ್ಟಿಯ ವಿಚಾರ ಸದ್ಯಕ್ಕೆ ಅಪ್ರಸ್ತುತ. ಈ ಬಗ್ಗೆ ಕೆಲ ಅಧ್ಯಯನ ನಡೆಸಬೇಕಿದ್ದು, ಮುಂದಿನ ದಿನಗಳಲ್ಲಿ ಎಲ್ಲ ವಿಚಾರಗಳ ಬಗ್ಗೆ ಆದ್ಯತೆ ನೀಡಿ ಶಾಂತಿ ಸುವ್ಯವಸ್ಥೆಯಿಂದ ರಾಜ್ಯದ ಪೊಲೀಸ್ ಪಡೆ ಮುನ್ನಡೆಯಬೇಕಿದೆ.

ಪಾರದರ್ಶಕತೆ ಕಾಪಾಡಿಕೊಳ್ಳಿ: ತ್ವರಿತ ನ್ಯಾಯದಾನಕ್ಕೆ ಆದ್ಯತೆ

Profile Ashok Nayak May 23, 2025 9:59 AM

ಸಂದರ್ಶನ: ಧ್ಯಾನ್‌ ಪೂಣಚ್ಚ

ಸ್ವಾಸ್ಥ್ಯ ಕೆಡಿಸುವವರಿಗೆ ಖಡಕ್‌ ಎಚ್ಚರಿಕೆ

ಪಾರದರ್ಶಕತೆ ಕಾಪಾಡಿಕೊಳ್ಳಿ: ತ್ವರಿತ ನ್ಯಾಯದಾನಕ್ಕೆ ಆದ್ಯತೆ

ಸೈಬರ್ ಅಪರಾಧ ತಡೆಗೆ ಅತ್ಯಾಧುನಿಕ ಟೀಂ ರಚನೆ

ನಾಡಿನ ನಾಡಿಮಿಡಿತ ಅರಿತಿರುವ ಜನಸಾಮಾನ್ಯರಲ್ಲಿ ನಮ್ಮವ ಎಂಬ ಭಾವನೆ ಇರುವ ಕನ್ನಡಿಗ ಎಂ.ಎ.ಸಲೀಂ ಅವರು ರಾಜ್ಯದ 43ನೇ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಡಿಜಿ-ಐಜಿಪಿ ಹುದ್ದೆಯ ಮೊದಲ ದಿನದ ಕಾರ್ಯಭಾರ ಒತ್ತಡದ ನಡುವೆಯೂ ವಿಶ್ವವಾಣಿಗೆ ನೀಡಿರುವ ಸಂದರ್ಶನದಲ್ಲಿ ರಾಷ್ಟ್ರವಿರೋಧಿ ಮತ್ತು ಸಮಾಜ ಘಾತುಕ ಶಕ್ತಿಗಳ ನಿರ್ಮೂಲನೆಗೆ ಕಟ್ಟಿಬದ್ದ ಎಂದಿರುವ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ ಕಾಯ್ದು ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಹೆಚ್ಚಿನ ಸಮಯ ಮೀಸಲಿ ಡುವ ವಾಗ್ದಾನದೊಂದಿಗೆ ತಮ್ಮ ಜಾತ್ಯತೀತ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ನೀವು ಜನಸಾಮಾನ್ಯರ ಪೊಲೀಸ್, ನಿಮ್ಮ ಅಪಾರ ನಿರೀಕ್ಷೆ ಇದೆ. ಏನನ್ನುತ್ತೀರಿ ?

ಎಲ್ಲರ ನಿರೀಕ್ಷೆಯಂತೆ ಹಾರ್ಡ್‌ವರ್ಕ್ ಮಾಡಬೇಕಿದೆ. ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡ ಬೇಕಿದೆ. ಪೊಲೀಸರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮೊದಲ ಆದ್ಯತೆಯಾಗಿದ್ದು, ಅಂತಹ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ.

ರಾಜ್ಯ ಹಾಗೂ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮಗಳೇನು ?

ಸೇವಾವಧಿಯಲ್ಲಿ ಸಂಚಾರ ಸಮಸ್ಯೆಗಳ ಬಗ್ಗೆ ಸಾಕಷ್ಟು ಪ್ರಯೋಗ ಮಾಡಿ ಜಾರಿಗೆ ತರಲಾಗಿದೆ. ಸಂಚಾರಿ ಒತ್ತಡವನ್ನು ನಿವಾರಿಸಲು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಹಲವು ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕೈಗೊಳ್ಳಲಾಗುತ್ತದೆ. ನಗರದ ಸಂಚಾ ರದ ಸಮಸ್ಯೆ ನಿವಾರಿಸುವುದು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಉಪಕ್ರಮಗಳನ್ನು ಆಯಾ ಸಮಯಕ್ಕೆ ತಕ್ಕಂತೆ ರೂಪಿಸಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ವಿನೂತನ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು.

ಇದನ್ನೂ ಓದಿ: Nadoja Mahesh Joshi Interview: ಟೀಕೆಗೆ ಹೆದರಿ, ಕೆಲಸದಿಂದ ಹಿಂಜರಿಯುವುದಿಲ್ಲ

ರಾಜ್ಯಕ್ಕೆ ಯಾವುದಾದರೂ ಬೆದರಿಕೆಗಳಿವೆಯೇ ? ಮುಂದಿರುವ ಸವಾಲುಗಳೇನು ?

ರಾಜ್ಯದಲ್ಲಿ ಹಲವು ಸವಾಲುಗಳಿದ್ದರೂ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬೆದರಿಕೆ ಇಲ್ಲವೇ ಅಶಾಂತಿ ಸೃಷ್ಟಿಯ ವಿಚಾರ ಸದ್ಯಕ್ಕೆ ಅಪ್ರಸ್ತುತ. ಈ ಬಗ್ಗೆ ಕೆಲ ಅಧ್ಯಯನ ನಡೆಸಬೇಕಿದ್ದು, ಮುಂದಿನ ದಿನಗಳಲ್ಲಿ ಎಲ್ಲ ವಿಚಾರಗಳ ಬಗ್ಗೆ ಆದ್ಯತೆ ನೀಡಿ ಶಾಂತಿ ಸುವ್ಯವಸ್ಥೆಯಿಂದ ರಾಜ್ಯದ ಪೊಲೀಸ್ ಪಡೆ ಮುನ್ನಡೆಯಬೇಕಿದೆ.

ಇಲಾಖೆಯ ನೇಮಕಾತಿ ಗ್ರಹಣ ಬಗೆಹರಿಯಬಹುದೆ ?

ನೇಮಕಾತಿ ವಿಚಾರ ಸರಕಾರದ ಮಟ್ಟದಲ್ಲಿ ಸಾಕಷ್ಟು ನಡೆಯುತ್ತಿದೆ. ಹೀಗಿದ್ದರೂ ಇಲಾಖೆಯಲ್ಲಿನ ನೇಮಕಾತಿ, ಕೆಲ ತಾಂತ್ರಿಕ ಲೋಪದೋಷಗಳ ಬಗ್ಗೆಯೂ ಗಮನ ಹರಿಸಬೇಕಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ.

ಹೆಚ್ಚುತ್ತಿರುವ ಸೈಬರ್ ಅಪರಾಧ ಮುಕ್ತಿ ಕಾಣಬಹುದೇ ?

ಸೈಬರ್ ಅಪರಾಧ ಸದ್ಯಕ್ಕೆ ನಿಲ್ಲುವಂತದ್ದಲ್ಲ. ನಮ್ಮ ರಾಜ್ಯ ಸೈಬರ್ ಅಪರಾಧ ತಡೆಗಟ್ಟುವಲ್ಲಿ ದೇಶದಲ್ಲಿ ಮುಂದಿದೆ. ಹೀಗಿದ್ದರೂ, ನ್ಯಾಯಾಧೀಶರು, ಕೋರ್ಟ್ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಸ್ಥರದ ತರಬೇತಿ ನೀಡಲಾಗುತ್ತಿದೆ. ಅತ್ಯಾಧುನಿಕ ಉಪಕರಣ ಅಳವಡಿಸಿಕೊಂಡು ರಾಜ್ಯ ಹಾಗೂ ವಿದೇಶಿ ಅಪರಾಧಗಳನ್ನು ಬೇಧಿಸಲು ನಮ್ಮ ತಂಡವನ್ನು ಸಜ್ಜುಗೊಳಿಸಬೇಕಾ ಗಿದ್ದು, ಕೆಲ ದಿನಗಳಲ್ಲೇ ಬಲಿಷ್ಠವಾದ ಸೈಬರ್ ತಂಡ ಕಟ್ಟಿ ಕ್ರಿಮಿನಲ್‌ಗಳಿಗಿಂತ ಮುಂದಿರುವ ಹೊಸ ಸೈಬರ್ ಅಪರಾಧ ನಿಯಂತ್ರಣ ಟೀಂ ಕಟ್ಟಲು ಯೋಜನೆ ಸಿದ್ಧಪಡಿಸಲಾಗುತ್ತದೆ.

1 R

ಮಕ್ಕಳ ಮೇಲಿನ ಅಪರಾಧ ಚಟುವಟಿಕೆ ಹೆಚ್ಚುತ್ತಿದೆ. ಇದರ ನಿಗ್ರಹಕ್ಕೆ ಕಾರ್ಯಸೂಚಿ ಗಳೇನು ?

ಮಹಿಳೆ ಮತ್ತು ಮಕ್ಕಳ ವಿಚಾರ ಸಂಬಂಧ ಈಗ ಪ್ರಕರಣಗಳು ಹೆಚ್ಚಿದಂತೆ ದೂರುಗಳೂ ಹೆಚ್ಚಾಗಿ ದಾಖಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ. ಉದಾ: ಹೆಚ್ಚಿನ ಪೋಕ್ಸೊ ಪ್ರಕರಣಗಳು ಹೊರ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ಮೊದಲೆಲ್ಲ ಇದು ಗಮನಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಸುರಕ್ಷತೆಯ ಸಮಸ್ಯೆಯಾಗುತ್ತಿತ್ತು. ಈಗ ದೂರು ದಾಖಲಾಗುತ್ತಿರುವುದರಿಂದ ಅಪರಾಧಕ್ಕೆ ಕಡಿವಾಣ ಹಾಕಲು ಸಹಾಯವಾಗುತ್ತಿದೆ. ಅಲ್ಲದೆ ತನಿಖೆಯು ಹಲವು ಆಯಾಮಗಳಲ್ಲಿ ನಡೆದು ಸಂತ್ರಸ್ತರಿಗೆ ನ್ಯಾಯ ದೊರಕುತ್ತಿದೆ. ಸಮಾಜದ ದುರ್ಬಲ ವರ್ಗದವರಲ್ಲಿ ಈ ಸಂಬಂಧ ಇಲಾಖೆ ಭರವಸೆ ಮೂಡಿಸುವ ಕೆಲಸ ನಡೆಯುತ್ತದೆ.

ನೂತನ ಯೋಜನೆಗಳೇನು ?

ರಾಜ್ಯದಲ್ಲಿ ಸೌಹಾರ್ದತೆ ಮುಖ್ಯ. ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆ. ಅದು ನಿರಂತರವಾಗಿರುವಂತೆ ಶಾಂತಿ ಸಹಬಾಳ್ವೆಯಿಂದ ಇರುವಂತೆ ಇಲಾಖೆಯನ್ನು ಸಂಯೋಜಿಸಲಾಗುವುದು.

ಇಲಾಖೆಯ ಬಲವರ್ಧನೆ ಹಾಗೂ ಜನಸ್ನೇಹಿಯಾಗಿ ಮಾಡಲು ಸಾಧ್ಯವಿದೆಯೇ?

ನೋಡಿ, ಇಲಾಖೆಯಲ್ಲಿನ ಸಿಬ್ಬಂದಿ, ಅಽಕಾರಿಗಳ ಸೇವೆ ನಾವು ಜನಸ್ನೇಹಿಯಾಗಿಯೇ ಇರುತ್ತದೆ. ಕಾನೂನಡಿಯೇ ಕೆಲಸ ಮಾಡಲು ನಿಯಮಗಳಿವೆ. ಅಪರಾಧ ವಿಚಾರಗಳಿಗೆ ಆಯಾ ಮಾನದಂಡ ಗಳಂತೆಯೇ ಕರ್ತವ್ಯವೂ ಮಾಡಬೇಕಿದೆ. ಹೀಗಿದ್ದರೂ ಪೊಲೀಸರು ಸಮುದಾಯದ ಸಹಭಾಗಿತ್ವ ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗುತ್ತದೆ. ಜನರೂ ಕೂಡ ತಮ್ಮ ಕರ್ತವ್ಯ ಮಾಡಬೇಕಿದೆ. ಅದರಂತೆ ನಮ್ಮ ಸಿಬ್ಬಂದಿ, ಅಧಿಕಾರಿಗಳಿಗೂ ಕೂಡ ಉತ್ತಮ ಕೆಲಸದ ವಾತಾವರಣ ನಿರ್ಮಿಸ ಬೇಕಿದೆ. ಕ್ಷೇಮಾಭಿವೃದ್ಧಿಗೆ ಸರಕಾರದ ಯೋಜನೆಗಳಿದ್ದರೂ ಮತ್ತಷ್ಟು ಸುಧಾರಣೆ ತರಬೇಕಿದೆ. ಒಟ್ಟಿನಲ್ಲಿ ಕಮ್ಯೂನಿಟಿ ಪೊಲೀಸಿಸಂಗೆ ಹೆಚ್ಚಿನ ಆದ್ಯತೆ ನೀಡುವಂತೆ ಶ್ರಮಿಸಲಾಗುತ್ತದೆ.

22 R

ಸಹೋದ್ಯೋಗಿಗಳಿಗೆ ತಮ್ಮ ಸಲಹೆ ಹಾಗೂ ಆದೇಶಗಳೇನು?

ತಮ್ಮ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಿ ಎನ್ನುವುದು ಸಲಹೆ. ಅದರಂತೆ ನಮ್ಮ ಮೇಲೆ ನಂಬಿಕೆ ಬರುವಂತೆ ಹಾಗೂ ನ್ಯಾಯದ ಭರವಸೆ ಸಾಮಾನ್ಯರಲ್ಲಿ ಸೃಷ್ಟಿಯಾಗಲು ಕ್ರಮ ವಹಿಸಲಾಗುವುದು. ನೊಂದವರ ಪರವಾಗಿ ಠಾಣೆಯಲ್ಲೇ ನ್ಯಾಯ ಸಿಕ್ಕುವ ವಾತಾವರಣ ನಿರ್ಮಿಸಲಾಗುವುದು. ಹಾಗೇ ನಮ್ಮವರ ಕಲ್ಯಾಣಕ್ಕೂ ಕ್ರಮ ವಹಿಸಲಾಗುತ್ತದೆ.

*

ಜಾಲತಾಣಗಳ ವಿಚಾರಕ್ಕೂ ಕೆಲವೊಂದು ನಿಯಮ ಬಿಗಿ ಮಾಡಬೇಕಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗು ತ್ತದೆ. ಸುಳ್ಳು ಸುದ್ದಿ ಹರಡುವಿಕೆ, ಡ್ರಗ್ಸ್ ಮಾರಾಟ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಂಡು ಸಮ-ಸಮಾಜ ನಿರ್ಮಾಣವೇ ನಮ್ಮ ಗುರಿಯಾಗಿದೆ.

- ಎಂ.ಎ ಸಲೀಂ, ಪೊಲೀಸ್ ಮಹಾನಿರ್ದೇಶಕ