Operation Sindoor: ಭಾರತ ನಡೆಸಿದ್ದ ದಾಳಿಗೆ ಭಯೋತ್ಪಾದಕರು ವಿಲವಿಲ; ಬಲಿಯಾದ ಲಷ್ಕರ್, ಜೈಶ್‌ನ ಟಾಪ್ ಕಮಾಂಡರ್‌ಗಳ ಹೆಸರು ರಿವೀಲ್
ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರರ ನೆಲೆಯನ್ನು ಧ್ವಂಸ ಮಾಡಿದೆ. ದಾಳಿಯಲ್ಲಿ 100 ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ. ಭಾರತೀಯ ದಾಳಿಯಲ್ಲಿ ಕೊಲ್ಲಲ್ಪಟ್ಟ ಅನೇಕ ಭಯೋತ್ಪಾದಕರಲ್ಲಿ ಮುದಾಸರ್ ಖಾದಿಯನ್ ಖಾಸ್, ಹಫೀಜ್ ಮುಹಮ್ಮದ್ ಜಮೀಲ್, ಮೊಹಮ್ಮದ್ ಯೂಸುಫ್ ಅಜರ್, ಖಾಲಿದ್ (ಅಬು ಆಕಾಶ) ಮತ್ತು ಮೊಹಮ್ಮದ್ ಹಸನ್ ಖಾನ್ ಸೇರಿದ್ದಾರೆ.


ನವದೆಹಲಿ: ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರರ ನೆಲೆಯನ್ನು (Operation Sindoor) ಧ್ವಂಸ ಮಾಡಿದೆ. ದಾಳಿಯಲ್ಲಿ 100 ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ. ಭಾರತೀಯ ದಾಳಿಯಲ್ಲಿ ಕೊಲ್ಲಲ್ಪಟ್ಟ ಅನೇಕ ಭಯೋತ್ಪಾದಕರಲ್ಲಿ ಮುದಾಸರ್ ಖಾದಿಯನ್ ಖಾಸ್, ಹಫೀಜ್ ಮುಹಮ್ಮದ್ ಜಮೀಲ್, ಮೊಹಮ್ಮದ್ ಯೂಸುಫ್ ಅಜರ್, ಖಾಲಿದ್ (ಅಬು ಆಕಾಶ) ಮತ್ತು ಮೊಹಮ್ಮದ್ ಹಸನ್ ಖಾನ್ ಸೇರಿದ್ದಾರೆ. ಹತರಾದ ಈ ಕೊಲ್ಲಲ್ಪಟ್ಟ ಈ ಭಯೋತ್ಪಾದಕರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಲ್ಲಿ ಟಾಪ್ ಕಮಾಂಡರ್‌ಗಳಾಗಿದ್ದರು ಎಂದು ತಿಳಿದು ಬಂದಿದೆ.
ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಎರಡರೊಂದಿಗೂ ಬಲವಾದ ಸಂಪರ್ಕ ಹೊಂದಿದೆ. ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದ ಉಸ್ತುವಾರಿ ವಹಿಸಿದ್ದ ಅಬು ಜುಂದಾಲ್ ಎಂದೂ ಕರೆಯಲ್ಪಡುವ ಮುದಾಸರ್ ಖಾದಿಯಾನ್ ಖಾಸ್ ಅವರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯು ಅಂತಿಮ ಗೌರವವನ್ನು ಸಲ್ಲಿಸಿತ್ತು. ಜೈಶ್ ಮುಖ್ಯಸ್ಥ ಮಸೂದ್ ಅಜರ್ ನ ಹಿರಿಯ ಸೋದರ ಮಾವ ಮತ್ತು ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾಹ್ ನ ಮುಖ್ಯಸ್ಥ ಹಫೀಜ್ ಮುಹಮ್ಮದ್ ಜಮೀಲ್ ಕೂಡ ಹತ್ಯೆಗೀಡಾಗಿದ್ದಾರೆ ಎಂಬ ಮಾಹಿತಿಗಳು ತಿಳಿದು ಬಂದಿದೆ.
ಜಮೀಲ್ ಜೆಇಎಂ ನ ಪ್ರಮುಖ ಸಿದ್ಧಾಂತವಾದಿ ಮತ್ತು ನಿಧಿಸಂಗ್ರಹಕಾರನಾಗಿದ್ದ. ಈತ ಉಗ್ರರಿಗೆ ತರಬೇತಿ ನೀಡುವ ಮದರಸಾಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ. ಅಜರ್ ನ ಮತ್ತೊಬ್ಬ ಸೋದರಳಿಯ ಮೊಹಮ್ಮದ್ ಯೂಸುಫ್ ಅಜರ್, ಅಲಿಯಾಸ್ ಉಸ್ತಾದ್ ಜಿ ಮತ್ತು ಐಸಿ -814 ವಿಮಾನ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದ. ಆತನೂ ಈ ದಾಳಿಯಲ್ಲಿ ಹತನಾಗಿದ್ದಾನೆ.
ಈ ಸುದ್ದಿಯನ್ನೂ ಓದಿ: Operation Sindoor: ಪಾಕಿಸ್ತಾನದ ಕ್ಷಿಪಣಿ-ಡ್ರೋನ್ ದಾಳಿಗೆ ರಷ್ಯಾ, ಇಸ್ರೇಲ್ ಶಸ್ತ್ರಾಸ್ತ್ರಗಳಿಂದ ತಿರುಗೇಟು ಕೊಟ್ಟ ಭಾರತ
ಭಾರತ ಉಗ್ರರ ಮೇಲೆ ನಡೆಸಿದ ದಾಳಿ ಬಳಿಕ ಪಾಕಿಸ್ತಾನ ಭಾರತದ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ. ಪಾಕಿಸ್ತಾನದ LOC ಬಳಿ ನಿರಂತವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಇದೀಗ ಡ್ರೋನ್ ಮೂಲಕ ದಾಳಿ ನಡೆಸುತ್ತಿದ್ದು, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತಿನ ಭಾಗದಲ್ಲಿ ಡ್ರೋನ್‌ಗಳ ದಾಳಿ ಆಗಿದೆ. ಆದರೆ ಭಾರತದ S-400 (ಸುದರ್ಶನ ) ಅವುಗಳನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಅಮೃತ ಸರದ ಬಳಿ ಡ್ರೋನ್ ಹಾಗೂ ಕ್ಷಿಪಣಿಗಳ ಅವಶೇಷಗಳು ಪತ್ತೆಯಾಗಿವೆ. ಶ್ರೀನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ದಾಲ್ ಸರೋವರದ ಆಳಕ್ಕೆ ಕ್ಷಿಪಣಿಯಂತಹ ವಸ್ತುವೊಂದು ಬಿದ್ದಿದ್ದು, ಶನಿವಾರ ಬೆಳಿಗ್ಗೆ ನಗರವನ್ನು ಬೆಚ್ಚಿಬೀಳಿಸಿದ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.