ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿಯ ಭಾರತ ಟೆಸ್ಟ್‌ ನಾಯಕತ್ವದ ಬೇಡಿಕೆಯನ್ನು ತಿರಸ್ಕರಿಸಿದ ಬಿಸಿಸಿಐ! ವರದಿ

Virat Kohli test Retirement Rumours: ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಪಡೆಯಬೇಕೆಂದು ಭಾರತದ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಆದರೆ, ಬಿಸಿಸಿಐ ಇನ್ನು ಇದನ್ನು ಸ್ವೀಕರಿಸಿಲ್ಲ. ಇದರ ನಡುವೆ ಮತ್ತೊಂದು ಮಹತ್ವದ ಅಂಶವೊಂದು ರಿವೀಲ್‌ ಆಗಿದೆ.

ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ಬೇಡಿಕೆ ಇಟ್ಟಿದ್ದ ವಿರಾಟ್‌ ಕೊಹ್ಲಿ!

ಭಾರತ ಟೆಸ್ಟ್‌ ನಾಯಕತ್ವವನ್ನು ಬಯಸಿದ ವಿರಾಟ್‌ ಕೊಹ್ಲಿ.

Profile Ramesh Kote May 10, 2025 4:00 PM

ನವದೆಹಲಿ: ರೋಹಿತ್‌ ಶರ್ಮಾ (Rohit sharma) ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೆ ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ (Virat Kohli) ಕೂಡ ದೀರ್ಘಾವಧಿ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸಿದ್ದಾರೆ. ಆದರೆ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (BCCI) ನಿವೃತ್ತಿ ಪಡೆಯದಂತೆ ಮನವಿ ಮಾಡಿಕೊಂಡಿದೆ. ಇದರ ನಡುವೆ ವಿರಾಟ್‌ ಕೊಹ್ಲಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಂಶ ಬಹಿರಂಗವಾಗಿದೆ. ವಿರಾಟ್‌ ಕೊಹ್ಲಿ ಟೆಸ್ಟ್‌ ತಂಡದ ನಾಯಕತ್ವ ನೀಡಬೇಕೆಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಆದರೆ ವಿರಾಟ್‌ ಕೊಹ್ಲಿಯ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ.

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಎಂದು ವಿರಾಟ್‌ ಕೊಹ್ಲಿಗೆ ಬಿಸಿಸಿಐಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

"ಅವರು ಈಗಲೂ ಅದ್ಭುತ ಫಿಟ್‌ನೆಸ್‌ ಹಾಗೂ ರನ್‌ ಗಳಿಸುವ ಹಸಿವನ್ನು ಹೊಂದಿದ್ದಾರೆ. ಡ್ರೆಸ್ಸಿಂಗ್‌ ಕೊಠಡಿಯಲ್ಲಿನ ಅವರ ಉಪಸ್ಥಿತಿ ತಂಡದ ಎಲ್ಲಾ ಆಟಗಾರರ ಉತ್ಸಾಸವನ್ನು ಹೆಚ್ಚಿಸುತ್ತದೆ. ಹಾಗಾಗಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಬಗ್ಗೆ ಅಂತಿಮ ಕರೆ ತೆಗೆದುಕೊಳ್ಳುವುದಕ್ಕೂ ಮುನ್ನ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಎಂದು ಅವರಿಗೆ ಬಿಸಿಸಿಐ ತಿಳಿಸಿದೆ,"ಎಂದು ಬಿಸಿಸಿಐ ಮೂಲಗಳು ಎನ್‌ಡಿ ಟಿವಿಗೆ ತಿಳಿಸಿದೆ.

Virat Kohli Test Retire: ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ನಿವೃತ್ತಿ!

ಟೆಸ್ಟ್‌ ನಾಯಕತ್ವವನ್ನು ಬಯಸಿದ ಕೊಹ್ಲಿ

ಭಾರತ ಟೆಸ್ಟ್‌ ತಂಡದ ನಾಯಕತ್ವ ನೀಡಬೇಕೆಂದು ವಿರಾಟ್‌ ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದಾರೆ. ಆದರೆ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯುವ ಆಟಗಾರನಿಗೆ ಟೆಸ್ಟ್‌ ತಂಡದ ನಾಯಕತ್ವ ನೀಡಬೇಕೆಂದು ಬಿಸಿಸಿಐ ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿಯ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ.

"ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಆರಂಭವಾಗಲಿದೆ. ತಂಡದ ಭವಿಷ್ಯ ಹಾಗೂ ನಿರಂತರತೆಯನ್ನು ಮನಸಿನಲ್ಲಿಟ್ಟುಕೊಳ್ಳಬೇಕಾಗಿದೆ. ಕೋಚ್ ಗೌತಮ್ ಗಂಭೀರ್ ಕೂಡ ತಮ್ಮೊಂದಿಗೆ ದೀರ್ಘಾವಧಿಯವರೆಗೆ ಕೆಲಸ ಮಾಡಲು ಸಾಧ್ಯವಾಗುವ ಆಟಗಾರರನ್ನು ಬಯಸುತ್ತಿದ್ದಾರೆ. ಇಂಗ್ಲೆಂಡ್‌ನಂತಹ ಮಹತ್ವದ ಸರಣಿಗಳಿಗೆ ಯಾವುದೇ ರೀತಿಯಯ ತಾತ್ಕಾಲಿಕ ಪರಿಹಾರವನ್ನು ಅವರು ಬಯಸುತ್ತಿಲ್ಲ. ಏಕೆಂದರೆ ಕಳೆದ ಎರಡು ಟೆಸ್ಟ್‌ ಸರಣಿಗಳಲ್ಲಿ ಭಾರತ ತಂಡ ಸೋಲು ಅನುಭವಿಸಿದೆ. ಇದೀಗ ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯು ಭಾರತ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ," ಎಂದು ಮೂಲಗಳು ತಿಳಿಸಿರುವುದನ್ನು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ʻರಾಹುಲ್‌ ದ್ರಾವಿಡ್‌ ನನಗೆ ಯಾವಾಗಲೂ ವಿಶೇಷʼ: ಕನ್ನಡಿಗನನ್ನು ಶ್ಲಾಘಿಸಿದ ರೋಹಿತ್‌ ಶರ್ಮಾ!

ಆಸ್ಟ್ರೇಲಿಯಾ ಸರಣಿಯಲ್ಲಿಯೇ ಆಟಗಾರರಿಗೆ ತಿಳಿಸಿದ್ದ ಕೊಹ್ಲಿ

ನನ್ನ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನ ಬಹುತೇಕ ಮುಗಿದಿದೆ ಎಂದು ಕೂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ ವಿರಾಟ್‌ ಕೊಹ್ಲಿ ತಮ್ಮ ಸಹ ಆಟಗಾರರ ಜೊತೆ ಹೇಳಿಕೊಂಡಿದ್ದರು. ಕಳೆದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಮೊದಲನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಹೊರತಾಗಿಯೂ ಇನ್ನುಳಿದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಅವರು ಐದು ಪಂದ್ಯಗಳಿಂದ ಕಲೆ ಹಾಕಿದ್ದು ಕೇವಲ 190 ರನ್‌ಗಳು ಮಾತ್ರ. ಟೆಸ್ಟ್‌ ತಂಡದ ನಾಯಕತ್ವ ನೀಡಿಲ್ಲವೆಂದು ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸಿದ್ದಾರೆಂಬುದನ್ನು ಮೂಲಗಳು ಖಚಿತಪಡಿಸಿಲ್ಲ.