ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kalaburagi News: ಭಾರತಾಂಬೆಯ ಸೇವೆಗೆ ಮರಳಿದ ಕನ್ಯಾಕುಮಾರ

ದೇಶದಲ್ಲಿ ಸದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶಗಳು ಗೋಚರವಾಗುತ್ತಿರುವ ನಿಟ್ಟಿನಲ್ಲಿ ರಜೆಯ ಮೇಲೆ ತೆರಳಿದ ಸೈನಿಕರ ಅವಶ್ಯಕತೆ ಭಾರತಾಂಬೆಗೆ ಇದ್ದು, ಅವರನ್ನು ಮರಳಿ ಕರೆಸಿ ಕೊಳ್ಳುವ ಪ್ರಕ್ರಿಯೆ ನಡೆದಿದ್ದು, ಇತ್ತ ಕಲಬುರಗಿಯ ಯೋಧ ಸಹ ತಾಯಿ ಭಾರತೀಯ ಸೇವೆಗಾಗಿ ರಜೆ ಮೊಟಕುಗೊಳಿಸಿ ಸೇನೆಗೆ ತೆರಳಿದ್ದಾನೆ

ಭಾರತಾಂಬೆಯ ಸೇವೆಗೆ ಮರಳಿದ ಕನ್ಯಾಕುಮಾರ

Profile Ashok Nayak May 10, 2025 5:57 PM

ಇಂಡೋ-ಪಾಕ್ ನಡುವೆ ಯುದ್ಧದ ಕಾರ್ಮೋಡ

ರಜೆ ಮೇಲೆ ಬಂದಿದ್ದ ಯೋಧನಿಗೆ ಬುಲಾವ್

ಕಲಬುರಗಿ: ದೇಶದಲ್ಲಿ ಸದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶಗಳು ಗೋಚರವಾಗುತ್ತಿರುವ ನಿಟ್ಟಿನಲ್ಲಿ ರಜೆಯ ಮೇಲೆ ತೆರಳಿದ ಸೈನಿಕರ ಅವಶ್ಯಕತೆ ಭಾರತಾಂಬೆಗೆ ಇದ್ದು, ಅವರನ್ನು ಮರಳಿ ಕರೆಸಿಕೊಳ್ಳುವ ಪ್ರಕ್ರಿಯೆ ನಡೆದಿದ್ದು, ಇತ್ತ ಕಲಬುರಗಿಯ ಯೋಧ ಸಹ ತಾಯಿ ಭಾರತೀಯ ಸೇವೆಗಾಗಿ ರಜೆ ಮೊಟಕುಗೊಳಿಸಿ ಸೇನೆಗೆ ತೆರಳಿದ್ದಾನೆ. ಕಲಬುರಗಿ ಜಿಲ್ಲೆಯ ಅ-ಜಲಪುರ ತಾಲೂಕಿನ ಅರ್ಜುಣಗಿ ತಾಂಡಾದ ನಿವಾಸಿಯಾದ ಕನ್ಯಾ ಕುಮಾರ್ ಚೌಹಾಣ್ ತಂಗಿಯ ಮದುವೆ ಹಾಗೂ ಹೆತ್ತ ತಾಯಿಯ ಅನಾರೋಗ್ಯ ಸಮಸ್ಯೆ ಹಿನ್ನೆಲೆ ಒಂದು ತಿಂಗಳ ರಜೆಯ ಮೇಲೆ ಕಲಬುರಗಿಗೆ ಬಂದಿದ್ದ, ಈಗ ಯುದ್ಧದ ಕಾರ್ಮೋಡ ಹೆಚ್ಚಾಗಿದ್ದ ರಿಂದ ಮರಳಿ ತನ್ನ ಕರ್ತವ್ಯಕ್ಕೆ ಹಾಜರಾಗಲು ಕಲಬುರಗಿಯಿಂದ ಪ್ರಯಾಣ ಬೆಳೆಸಿದ್ದಾನೆ.

20 ವರ್ಷಗಳಿಂದ ಸಿಆರ್‌ಪಿಎಫ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಮನೆಯಲ್ಲಿ ಬರುವ ಮೇ.19ರಂದು ತಂಗಿಯ ಮದುವೆ ನಿಮಿತ್ತ ಒಂದು ತಿಂಗಳ ರಜೆ ಪಡೆದ ಮೇ.6ರಂದು ಕಲಬುರಗಿಗೆ ಆಗಮಿಸಿದ್ದರು. ಇದೀಗ ಪಹಲ್ಗಾಮ್ ದಾಳಿ ಪ್ರತೀಕಾರವಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಏರ್ಪಟ್ಟ ಹಿನ್ನೆಲೆಯಲ್ಲಿ, ರಜೆ ರದ್ದುಪಡಿಸಿ ನಿಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಹೆಡ್ಕ್ವಾರ್ಟರ್ಸ್‌ನಿಂದ ಕರೆ ಬಂದಿದೆ.

ಇದನ್ನೂ ಓದಿ: India-Pak Tensions: ಪಾಕ್‌ ವಾಯುಪ್ರದೇಶ ಬಂದ್‌; ಎಲ್ಲಾ ವಿಮಾನ ಸಂಚಾರ ಸ್ಥಗಿತ

ಯೋಧ ಕನ್ಯಾಕುಮಾರ ಚೌಹಾಣ್ ಅವರ ತಾಯಿಯ ಅನಾರೋಗ್ಯ ಹಾಗೂ ತಂಗಿಯ ಮದುವೆ ಯನ್ನು ಬಿಟ್ಟು,ಇದೀಗ ದೇಶದ ಸೇವೆಗಾಗಿ ಪುನಃ ತನ್ನ ಕರ್ತವ್ಯಕ್ಕೆ ಹಾಜರಾಗುತ್ತಿದ್ದು,ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹೆಡ್ ಕ್ವಾರ್ಟರ್ಸ್ ನಿಂದ ಕರೆ ಬಂದ ಕೂಡಲೇ ಕಲಬುರಗಿ ರೈಲ್ವೆ ನಿಲ್ದಾಣದಿಂದ ಹೈದರಾಬಾದ್ ಗೆ ತೆರಳಿ ಅಲ್ಲಿಂದ ಶ್ರೀನಗರಕ್ಕೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಕಣ್ಣೀರಿಡುತ್ತಾ ಬೀಳ್ಕೊಟ್ಟ ಹೆಂಡತಿ

ತಂಗಿಯ ಮದುವೆಗೆ ಬಂದಿದ್ದ ಸಿಆರ್‌ಪಿಎಫ್ ಯೋಧ‌ ಕನ್ಯಾಕುಮಾರ ಚೌಹಾಣ್ ಮರಳಿ ಕರ್ತವ್ಯಕ್ಕೆ ಹಾಜರಾಗಲು ಹೋಗುತ್ತಿದ್ದಂತೆ ಕಲಬುರಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಸಂಬಂಽಕರು ಹಾಗೂ ಸಾರ್ವಜನಿಕರು ಹೂವಿನ ಹಾರ ಹಾಕಿ ಯುದ್ಧದಲ್ಲಿ ಜಯಶಾಲಿಯಾಗಲಿ ಎಂದು ಪ್ರೀತಿಯಿಂದ ದೇಶ ಸೇವೆಗೆ ಕಳುಹಿಸಿ ಕೊಟ್ಟಿದ್ದಾರೆ. ಇತ್ತ ಯೋಧನ ಪತ್ನಿ ಸಹ ಕಣ್ಣೀರು ಹಾಕಿ, ಆತಂಕದಲ್ಲೇ ಪತಿಯನ್ನು ಯುದ್ಧ ಭೂಮಿಗೆ ಕಳುಹಿಸಿದ್ದಾರೆ.

*

ದೇಶದ ಮೇಲೆ ಶತ್ರುಗಳ ಹಾವಳಿ ಹೆಚ್ಚಾಗಿದ್ದು, ಹೆಡ್ ಕ್ವಾರ್ಟರ್ಸ್ ನಿಂದ ಕರೆ ಬಂದಿದೆ. ಹೋಗಲೇ ಬೇಕಾಗುತ್ತದೆ. ಹೋಗಲಿಲ್ಲ ಅಂದರೆ ನಡೆಯುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ ಮುಖ್ಯವಾಗಲಿದೆ. ಅಮಾಯಕರ ಬಲಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತೇವೆ.

- ಕನ್ಯಾಕುಮಾರ್ ಚೌಹಾಣ್

ಸಿಆರ್‌ಪಿಎ- ಯೋಧ, ಕಲಬುರಗಿ