ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಆಪರೇಷನ್ ಸಿಂಧೂರ್' ದಾಳಿಯಲ್ಲಿ ಭಾರತ ಬಳಸಿದ ಶಸ್ತ್ರಾಸ್ತ್ರಗಳು ಯಾವುದು?

ಭಾರತೀಯ ಸೇನೆಯು ರಫೇಲ್ ಜೆಟ್‌ಗಳಲ್ಲಿ ಅಳವಡಿಸಲಾದ ಸ್ಕಾಲ್ಪ್ ಕ್ರೂಸ್ ಕ್ಷಿಪಣಿ, ಹ್ಯಾಮರ್ ಕ್ಷಿಪಣಿ ಹಾಗೂ ಆತ್ಮಾಹುತಿ ಡ್ರೋನ್​ಗಳಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಈ ಪೈಕಿ ಸಾಲ್ಟ್ ಕ್ರೂಸ್ ಕ್ಷಿಪಣಿ, ಹ್ಯಾಮರ್ ಎಂಬ ಬಾಬರ್ ಮತ್ತು ಕಾಮಿಕೇಜ್ ಡ್ರೋನ್‌ಗಳನ್ನು ಬಳಸಲಾಗಿತ್ತು.

'ಆಪರೇಷನ್ ಸಿಂಧೂರ್' ದಾಳಿಯಲ್ಲಿ ಭಾರತ ಬಳಸಿದ ಶಸ್ತ್ರಾಸ್ತ್ರಗಳು ಯಾವುದು?

Profile Abhilash BC May 7, 2025 3:03 PM

ನವದೆಹಲಿ: ಬುಧವಾರ ಮುಂಜಾನೆ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ದಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ(Pak terror camps,) ನಡೆಸಿರುವ 'ಆಪರೇಷನ್ ಸಿಂಧೂರ್'(Operation Sindoor) ದಾಳಿ ಯಶಸ್ವಿಯಾಗಿದೆ. ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆ (ಐಎಎಫ್)ಗಳು ನಿಖರವಾದ ದಾಳಿ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಬಳಸಿಕೊಂಡು ಈ ದಾಳಿ ನಡೆಸಿದ್ದರು. ಇದು 2019 ರ ಬಾಲಕೋಟ್ ವೈಮಾನಿಕ ದಾಳಿಯ ನಂತರ ಭಾರತ ನಡೆಸಿದ ಅತಿದೊಡ್ಡ ಗಡಿಯಾಚೆಗಿನ ನಿಖರ ದಾಳಿಯಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಯಾವೆಲ್ಲ ಶಸ್ತ್ರಾಸ್ತ್ರಗಳನ್ನು ಬಳಸಿತು ಎಂಬ ಮಾಹಿತಿ ಇಲ್ಲಿದೆ.

ಭಾರತೀಯ ಸೇನೆಯು ರಫೇಲ್ ಜೆಟ್‌ಗಳಲ್ಲಿ ಅಳವಡಿಸಲಾದ ಸ್ಕಾಲ್ಪ್ ಕ್ರೂಸ್ ಕ್ಷಿಪಣಿ, ಹ್ಯಾಮರ್ ಕ್ಷಿಪಣಿ ಹಾಗೂ ಆತ್ಮಾಹುತಿ ಡ್ರೋನ್​ಗಳಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಈ ಪೈಕಿ ಸಾಲ್ಟ್ ಕ್ರೂಸ್ ಕ್ಷಿಪಣಿ, ಹ್ಯಾಮರ್ ಎಂಬ ಬಾಬರ್ ಮತ್ತು ಕಾಮಿಕೇಜ್ ಡ್ರೋನ್‌ಗಳನ್ನು ಬಳಸಲಾಗಿತ್ತು.

SCALP (ಸ್ಟಾರ್ಮ್ ಶ್ಯಾಡೋ)

ಸ್ಕಾಲ್ಪ್ ಕ್ರೂಸ್ ಕ್ಷಿಪಣಿಯನ್ನು ಸ್ಟಾರ್ಮ್ ಶ್ಯಾಡೋ ಎಂದೂ ಕರೆಯುತ್ತಾರೆ. ಇದು 250 ಕಿಲೋಮೀಟರ್‌ಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ವಾಯು-ಉಡಾವಣಾ, ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಯಾಗಿದೆ. ಯುರೋಪಿಯನ್ ರಕ್ಷಣಾ ಕಂಪನಿ ಎಂಬಿಡಿಎ ಇದನ್ನು ತಯಾರಿಸಿದೆ. ರಾತ್ರಿಯಲ್ಲಿ ಮತ್ತು ಎಲ್ಲಾ ಹವಾಮಾನದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಗಟ್ಟಿಯಾದ ಬಂಕರ್‌ಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳಂತಹ ಗುರಿಗಳನ್ನು ನಾಶಮಾಡುವ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಇದರ ವ್ಯಾಪ್ತಿಯು 550 ಕಿಲೋಮೀಟರ್‌ ಆಗಿದೆ. 450 ಕೆಜಿ ತೂಕವನ್ನು ಹೊತ್ತೊಯ್ಯಬಲ್ಲ ಈ ಕ್ಷಿಪಣಿಯನ್ನು ಪತ್ತೆಹಚ್ಚುವುದು ಕಷ್ಟ. ಇದು ಜೆಟ್‌ನಿಂದ ಹಾರಿಸಿದಾಗ ತುಂಬಾ ಕೆಳಕ್ಕೆ ಹಾರುತ್ತದೆ.

scalp_storm shadow

ಹ್ಯಾಮರ್ ಸ್ಮಾರ್ಟ್ ಬಾಂಬ್(HAMMER AIR-TO-GROUND BOMB)

ಕಾರ್ಯಾಚರಣೆಯಲ್ಲಿ ಬಳಸಲಾದ ಇನ್ನೊಂದು ಆಯುಧ, ಹ್ಯಾಮರ್ (ಹೈಲಿ ಅಗೈಲ್ ಮಾಡ್ಯುಲರ್ ಮ್ಯುನಿಷನ್ ಎಕ್ಸ್ಟೆಂಡೆಡ್ ರೇಂಜ್), ಎಲ್ಲಾ ಹವಾಮಾನದಲ್ಲೂ ಬಳಸಬಹುದಾದ ಗಾಳಿಯಿಂದ ನೆಲಕ್ಕೆ ನಿಖರತೆ-ಮಾರ್ಗದರ್ಶಿತ ಯುದ್ಧ ಸಾಮಗ್ರಿಯಾಗಿದೆ. ಇದನ್ನು ಗ್ಲೈಡ್ ಬಾಂಬ್ ಎಂದೂ ಕರೆಯುತ್ತಾರೆ. ಇದು 70 ಕಿ.ಮೀ ವರೆಗೆ ಗುರಿಯಿಡುವ ವ್ಯಾಪ್ತಿಯನ್ನು ಹೊಂದಿದೆ. ಮತ್ತು ಪ್ರಮಾಣಿತ ಬಾಂಬ್‌ಗಳಿಗೆ (250 ಕೆಜಿ, 500 ಕೆಜಿ, 1,000 ಕೆಜಿ) ಅಳವಡಿಸಬಹುದು.

HAMMER AIR-TO-GROUND BOMB

ಫ್ರೆಂಚ್ ಕಂಪನಿ ಸಫ್ರಾನ್ ತಯಾರಿಸಿದ ಈ ಬಾಂಬ್, ಜ್ಯಾಮಿಂಗ್‌ಗೆ ಸೂಕ್ಷ್ಮವಲ್ಲದ ಮತ್ತು ಒರಟಾದ ಭೂಪ್ರದೇಶದ ಮೇಲೆ ಕಡಿಮೆ ಎತ್ತರದಿಂದ ಉಡಾಯಿಸಬಹುದು. ಇದನ್ನು ಪ್ರತಿಬಂಧಿಸುವುದು ಕಷ್ಟಕರ. ಕೋಟೆಯ ರಚನೆಯ ಕಟ್ಟಡಗಳನ್ನು ಭೇದಿಸಲು ಇದು ಸಹಕಾರಿ. ಇದೇ ಕಾರಣಕ್ಕೆ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟುಮಾಡಲು ಸಾಧ್ಯವಾಯಿತು. ಜೈಶ್ ಮತ್ತು ಲಷ್ಕರ್‌ನ ಪ್ರಧಾನ ಕಚೇರಿಗಳನ್ನು ನೆಲಸಮಗೊಳಿಸಿದ್ದು ಕೂಡ ಇದೇ ಬಾಂಬ್ ಬಳಸಿ.

ಇದನ್ನೂ ಓದಿ Operation Sindoor: ಪಹಲ್ಗಾಮ್ ಹತ್ಯಾಕಾಂಡದ ಸಂತ್ರಸ್ತರ ಪತ್ನಿಯರು ಆಪರೇಷನ್ ಸಿಂಧೂರ್ ಬಗ್ಗೆ ಹೇಳಿದ್ದೇನು?