ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pakistan Tension: ಭಾರತೀಯ ಸೈನಿಕರು ಶಿಬಿರ ತೊರೆಯುತ್ತಿರುವುದು ಸುಳ್ಳು

ಪಾಕ್‌ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಕಾರಣ ಪ್ರಮುಖ ಐಟಿ ಮತ್ತು ಜಾಗತಿಕ ಸಲಹಾ ಸಂಸ್ಥೆಗಳು ಸೂಕ್ಷ್ಮ ಪ್ರದೇಶಗಳಲ್ಲಿನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (WFH) ಮತ್ತು ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಸಲಹೆಗಳನ್ನು ನೀಡಿವೆ.

ಭಾರತೀಯ ಸೈನಿಕರು ಶಿಬಿರ ತೊರೆಯುತ್ತಿರುವುದು ಸುಳ್ಳು

Profile Abhilash BC May 10, 2025 2:14 PM

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ(India-Pakistan Tension) ಹೆಚ್ಚಾಗುತ್ತಿದ್ದಂತೆ, ಭಾರತೀಯ ಸೈನಿಕರು ತಮ್ಮ ಶಿಬಿರಗಳನ್ನು ತೊರೆಯುತ್ತಿದ್ದಾರೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಇದೊಂದು ಸುಳ್ಳು ಸುದ್ದಿ ಎಂದು ಸರ್ಕಾರ ಶನಿವಾರ ಹೇಳಿದೆ. ಪಿಐಬಿ ಸತ್ಯಶೋಧನ (Fact Check) ವಿಭಾಗವು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊ ಭಾರತೀಯ ಸೇನೆಗೆ ಸಂಬಂಧಿಸಿದ್ದಲ್ಲ ಎಂದು ಖಚಿತಪಡಿಸಿದೆ.

ಅಸಲಿಗೆ ಈ ವಿಡಿಯೊ ಖಾಸಗಿ ರಕ್ಷಣಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾಗಿರುವುದಕ್ಕೆ ಸಂತೋಷದಿಂದ ಭಾವುಕರಾದ ವೇಳೆ ಚಿತ್ರಿಕರಿಸಿದ ವಿಡಿಯೊ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಸುದರ್ಶನ ಚಕ್ರ ಎಂದು ಕರೆಯಲ್ಪಡುವ S-400 ಏರ್‌ ಡಿಫೆನ್ಸ್‌ ಸಿಸ್ಟಂ(S-400 system) ಕ್ಷಿಪಣಿಗೆ ಹಾನಿಯಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಇದೊಂದು ಆಧಾರರಹಿತ, ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಜತೆಗೆ ಭಾರತೀಯ ಸೇನೆಯ ಬಗ್ಗೆ ಪಾಕಿಸ್ತಾನ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸುಳ್ಳು ಸುದ್ಧಿಗಳನ್ನು ಹಂಚಿಕೊಳ್ಳುತ್ತಿದ್ದು ಈ ಬಗ್ಗೆ ದೇಶದ ಜನರು ಚಿಂತಿಸುವ ಮತ್ತು ಭಯ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.

ಹೈ ಅಲರ್ಟ್‌ ಪ್ರದೇಶದಲ್ಲಿ ಐಟಿ ಕಂಪನಿಗಳಿಗೆ ವರ್ಕ್‌ ಫ್ರಮ್‌ ಹೋಮ್

ಪಾಕ್‌ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಕಾರಣ ಪ್ರಮುಖ ಐಟಿ ಮತ್ತು ಜಾಗತಿಕ ಸಲಹಾ ಸಂಸ್ಥೆಗಳು ಸೂಕ್ಷ್ಮ ಪ್ರದೇಶಗಳಲ್ಲಿನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (WFH) ಮತ್ತು ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಸಲಹೆಗಳನ್ನು ನೀಡಿವೆ.

ದೆಹಲಿ, ನೋಯ್ಡಾ, ಗುರುಗ್ರಾಮ್, ಚಂಡೀಗಢ ಮತ್ತು ಇತರ ಹೈ-ಅಲರ್ಟ್ ಪ್ರದೇಶಗಳಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ 'ವರ್ಕ್‌ ಫ್ರಮ್‌ ಹೋಮ್' ಸಲಹೆಯನ್ನು ನೀಡಲಾಗಿದೆ. ಸಿಬ್ಬಂದಿಗೆ ಸಹಾಯ ಮಾಡಲು ಕಮಾಂಡ್ ಸೆಂಟರ್ ಹಾಟ್‌ಲೈನ್ ಅನ್ನು ಸಹ ಸ್ಥಾಪಿಸಲಾಗಿದೆ ಎಂದು ಮನಿ ಕಂಟ್ರೋಲ್ ಮೂಲಗಳು ತಿಳಿಸಿವೆ. ಉತ್ತರ ರಾಜ್ಯಗಳಲ್ಲಿ ಹೆಚ್ಚಿದ ಭದ್ರತಾ ಎಚ್ಚರಿಕೆಗಳ ನಡುವೆಯೂ ಉದ್ಯೋಗಿಗಳನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ.