ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಮಿಗ್‌ ಫೈಟರ್‌ ಜೆಟ್‌, S-400 ಜೊತೆ ಫೋಟೋ... ಸೈಲೆಂಟ್‌ ಆಗಿಯೇ ಪಾಕ್‌ಗೆ ಖಡಕ್‌ ಎಚ್ಚರಿಕೆ ಕೊಟ್ರಾ ಮೋದಿ?

PM Modi At Adampur Airbase: ನಿನ್ನೆ ಆಪರೇಷನ್ ಸಿಂಧೂರ್‌ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ನಂತರ ಪ್ರಧಾನಿ ಮೋದಿ ಇಂದು ಪ‍ಂಜಾಬ್‌ನ ಆದಂಪುರದಲ್ಲಿರುವ ವಾಯುನೆಲೆಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ. ಈ ಫೋಟೋಗಳ ಮೂಲಕವೇ ಪ್ರಧಾನಿ ಮೋದಿ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಮಿಗ್‌ ಫೈಟರ್‌ ಜೆಟ್‌, S-400 ಜೊತೆ ಮೋದಿ ಫೋಟೋ-ಏನಿದರ ಅರ್ಥ?

Profile Rakshita Karkera May 13, 2025 6:00 PM

ನವದೆಹಲಿ: ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಇದೀಗ ಈ ನುಡಿಗಟ್ಟು ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿಚಾರದಲ್ಲಿ ನಿಜವಾದಂತಿದೆ. ನಿನ್ನೆ ಆಪರೇಷನ್ ಸಿಂಧೂರ್‌ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ನಂತರ ಪ್ರಧಾನಿ ಮೋದಿ ಇಂದು ಪ‍ಂಜಾಬ್‌ನ ಆದಂಪುರದಲ್ಲಿರುವ ವಾಯುನೆಲೆಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ. ಈ ಫೋಟೋಗಳ ಮೂಲಕವೇ ಪ್ರಧಾನಿ ಮೋದಿ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಅಂತಹದ್ದೇನಿದೆ ಆ ಫೋಟೋಗಳಲ್ಲಿ? ಇಲ್ಲಿದೆ ಡಿಟೇಲ್ಸ್‌

ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಆದಂಪುರ ವಾಯುನೆಲೆಯಲ್ಲಿ ಮಿಗ್ -29 ಯುದ್ಧ ವಿಮಾನ ಮತ್ತು ಎಸ್ -400 ವಾಯು ರಕ್ಷಣಾ ವ್ಯವಸ್ಥೆಯೊಂದಿಗಿನ ಫೋಟೋಗಳು ಭಾರೀ ವೈರಲ್‌ ಆಗುತ್ತಿವೆ. ಪ್ರಧಾನಿ ತಮ್ಮ ಭೇಟಿಯ ನಾಲ್ಕು ಗಮನಾರ್ಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ವಾಯುಪಡೆ ಸಿಬ್ಬಂದಿ ಮತ್ತು ಮಿಗ್ -29 ಯುದ್ಧ ವಿಮಾನದೊಂದಿಗೆ, ಇನ್ನೊಂದು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಹಿಂದೆ ಕಾಣುವ ಎಸ್ -400 ಕ್ಷಿಪಣಿ ವ್ಯವಸ್ಥೆ, ವಾಯುಸೇನೆ ಸಿಬ್ಬಂದಿ ಜೊತೆ ನಗುತ್ತಾ ಮಾತನಾಡುತ್ತಿರುವುದು ಮೂರನೇ ಫೋಟೋ ಆಗಿದ್ದರೆ, ಮಿಗ್‌-29 ವಿಮಾನದ ಎದುರು ನಿಂತು ಭಾಷಣ ಮಾಡುತ್ತಿರುವುದು ನಾಲ್ಕನೇ ಫೋಟೋ ಆಗಿದೆ. ಹೀಗಾಗಿ ಈ ಎಲ್ಲಾ ಫೋಟೋಗಳ ಮೂಲಕ ಭಾರತ ಸಶಸ್ತ್ರವಾಗಿ ಎಷ್ಟು ಬಲಶಾಲಿಯಾಗಿದೆ ಎಂಬುದು ಮತ್ತು ನಮ್ಮ ಮೇಲೆ ದಾಳಿಗೆ ಮುಂದಾದರೆ ಯಾವ ರೀತಿಯ ಪ್ರತಿಕ್ರಿಯೆ ಸಿಗಬಹುದೆಂಬ ಸಂದೇಶವನ್ನು ಪಾಕ್‌ಗೆ ರವಾನಿಸಿದ್ದಂತೆ ಕಾಣುತ್ತಿದೆ.

ಈ ಸುದ್ದಿಯನ್ನೂ ಓದಿ: Operation Sindoor: ನಿಮ್ಮ ಶೌರ್ಯಕ್ಕೆ ನನ್ನ ಸಲಾಂ: ಆಪರೇಷನ್‌ ಸಿಂದೂರ್‌ ಯಶಸ್ಸಿಗೆ ಯೋಧರನ್ನು ಶ್ಲಾಘಿಸಿದ ಪ್ರಧಾನಿ

ಆದಂಪುರ ವಾಯುನೆಲೆಯಲ್ಲಿ ಮೋದಿ ಫೋಟೋಗಳು ಇಲ್ಲಿವೆ



ಇನ್ನು ಬಹುಶಃ ಸಾರ್ವಜನಿಕವಾಗಿ ಬಿಡುಗಡೆಯಾದ ಮೊದಲ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಚಿತ್ರ ಇದಾಗಿದೆ., ಇದನ್ನು ವಿಶ್ವದ ಅತ್ಯುತ್ತಮ ಸ್ಕ್ವಾಡ್ರನ್‌ಗಳಲ್ಲಿ ಒಂದೆಂದು ಪ್ರಶಂಸಿಸಲಾಗಿದೆ ಮತ್ತು ಇದರಲ್ಲಿ ಭಾರತವು ಮೂರು ಸ್ಕ್ವಾಡ್ರನ್‌ಗಳನ್ನು ಹೊಂದಿದ್ದು, ಇನ್ನೂ ಎರಡು ಬರಲಿವೆ. ಇನ್ನು ಕಳೆದ ವಾರ ಪಾಕ್ ಹಾರಿಸಿದ ಹಲವಾರು ಕ್ಷಿಪಣಿಗಳನ್ನು ಎಸ್ -400 ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.