ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GT vs LSG: ಬೌಲಿಂಗ್‌ ವೇಳೆ ಎರಡು ಬಾರಿ ಜಾರಿ ಬಿದ್ದ ಅರ್ಷದ್‌ ಖಾನ್!‌ ವಿಡಿಯೊ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 2025ರ ಇಂಡಿಯನ್‌ ಪ್ರೀಮಿಯರ್‌ದ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಜಿಟಿ ವೇಗದ ಬೌಲರ್‌ ಅರ್ಷದ್‌ ಖಾನ್‌ ಅವರು ಬೌಲಿಂಗ್‌ ವೇಳೆ ಎರಡು ಬಾರಿ ಜಾರಿ ಬಿದ್ದಿದ್ದಾರೆ.

ಬೌಲಿಂಗ್‌ ವೇಳೆ ಎರಡು ಬಾರಿ ಜಾರಿ ಬಿದ್ದ ಅರ್ಷದ್‌ ಖಾನ್!‌ ವಿಡಿಯೊ

ಬೌಲಿಂಗ್‌ ವೇಳೆ ಎರಡು ಬಾರಿ ಜಾರಿ ಬಿದ್ದ ಅರ್ಷದ್‌ ಖಾನ್‌!

Profile Ramesh Kote May 22, 2025 10:41 PM

ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್‌ (LSG vs GT) ನಡುವಣ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ಕಂಡುಬಂದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಗುಜರಾತ್ ಬೌಲರ್ ಅರ್ಷದ್ ಖಾನ್ (Arshad Khan) ರನ್-ಅಪ್‌ನಲ್ಲಿ ತೊಂದರೆ ಅನುಭವಿಸಿದರು ಮತ್ತು ಅವರ ಮೊದಲ ಓವರ್‌ನಲ್ಲಿ ಎರಡು ಬಾರಿ ಕಾಲು ಜಾರಿ ಬಿದ್ದರು.

ತಮ್ಮ ಮೊದಲನೇ ಎಸೆತದಲ್ಲೇ ಅರ್ಷದ್ ಖಾನ್‌ ಕ್ರೀಸ್‌ ಬಳಿ ಬಿದ್ದರು. ಚೆಂಡನ್ನು ರಿಲೀಸ್‌ ಮಾಡುವ ವೇಳೆ ಕಾಲು ಹುಲ್ಲಿನ ಮೇಲೆ ಜಾರಿತು ಹಾಗೂ ನೋವಿನಿಂದ ಕಿರುಚುತ್ತಾ ಅವರು ಕೆಳಗೆ ಬಿದ್ದರು. ಈ ಘಟನೆಯು ಆಟಗಾರರು ಮತ್ತು ಪಂದ್ಯದ ಅಂಪೈರ್‌ಗಳಿಗೆ ಕಳವಳವನ್ನು ಹುಟ್ಟುಹಾಕಿತು. ಆದಾಗ್ಯೂ, ಅವರು ಚೇತರಿಸಿಕೊಂಡು ತನ್ನ ಓವರ್ ಅನ್ನು ಪೂರ್ಣಗೊಳಿಸಲು ಸಜ್ಜಾದರು.

IPL 2025: ʻಫೇಕ್‌ ನ್ಯೂಸ್‌ʼ-ಎಲ್‌ಎಸ್‌ಜಿ ತೊರೆಯುವ ಬಗ್ಗೆ ರಿಷಭ್‌ ಪಂತ್‌ ಸ್ಪಷ್ಟನೆ!

ಸ್ವಲ್ಪ ಸಮಯದ ನಂತರ ಅರ್ಷದ್ ಖಾನ್ ಮತ್ತೆ ಬೌಲ್‌ ಮಾಡಲು ಪ್ರಾರಂಭಿಸಿದರು. ಆದರೆ, ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ಮತ್ತೆ ನೆಲಕ್ಕೆ ಉರುಳಿದರು. ಈ ಬಾರಿಯೂ ಅವರಿಗೆ ಗಾಯವಾಯಿತು. ಫಿಸಿಯೊ ಮೈದಾನಕ್ಕೆ ಬರಲೇಬೇಕಾಯಿತು. ಅವರು, ಅರ್ಷದ್ ಅವರನ್ನು ಪರೀಕ್ಷಿಸಿದರು. ಒಳ್ಳೆಯ ವಿಷಯವೆಂದರೆ ಅವರಿಗೆ ಹೆಚ್ಚು ಗಾಯವಾಗಲಿಲ್ಲ. ಅವರು ತನ್ನ ಓವರ್ ಅನ್ನು ಪೂರ್ಣಗೊಳಿಸಿದರು. ಈ ಓವರ್‌ನಲ್ಲಿ ಅವರು 13 ರನ್‌ಗಳನ್ನು ನೀಡಿದರು. ನಂತರ, ಅವರು ಮೈದಾನದಿಂದ ಹೊರನಡೆದರು.



ಗುಜರಾತ್‌ ಟೈಟನ್ಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ

ಗುಜರಾತ್ ಟೈಟನ್ಸ್ ಪ್ಲೇಯಿಂಗ್‌ XI ಯಾವುದೇ ಬದಲಾವಣೆ ಮಾಡಿಲ್ಲ. ಲಖನೌ ಸೂಪರ್‌ ಜಯಂಟ್ಸ್‌ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಟಾಸ್ ನಂತರ ಗುಜರಾತ್ ಟೈಟನ್ಸ್‌ ನಾಯಕ ಶುಭಮನ್ ಗಿಲ್, "ನಾವು ಮೊದಲು ಬೌಲ್‌ ಮಾಡುತ್ತೇವೆ, ವಿಕೆಟ್ ಚೆನ್ನಾಗಿ ಕಾಣುತ್ತಿದೆ. ನಾವು ಚೇಸ್‌ ಮಾಡುತ್ತೇವೆ. ಅರ್ಹತಾ ಸುತ್ತಿನಲ್ಲೂ ನಾವು ಆಟದ ಆವೇಗವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ, ಈ ಎರಡೂ ಪಂದ್ಯಗಳು ಸಮಾನವಾಗಿ ಮುಖ್ಯವಾಗುತ್ತವೆ. ನಾವು (ಗಿಲ್‌-ಸುದರ್ಶನ್‌) ಪರಸ್ಪರ ಪೂರಕವಾಗಿರುವ ರೀತಿ ಅದ್ಭುತವಾಗಿದೆ, ಯಾವ ಬೌಲರ್‌ಗೆ ದಾಳಿ ನಡೆಸಬೇಕೆಂದು ನಾವು ಸಂಭಾಷಣೆ ನಡೆಸುವುದಿಲ್ಲ. ನಾವು ಸಕಾರಾತ್ಮಕ ಉದ್ದೇದಿಂದ ಬ್ಯಾಟ್‌ ಮಾಡುತ್ತೇವೆ. ನಮ್ಮ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ಹೇಳಿದ್ದಾರೆ.

IPL 2025: ರಿಷಭ್‌ ಪಂತ್‌ ಎದುರಿಸುತ್ತಿರುವ ಸಮಸ್ಯೆಯನ್ನು ರಿವೀಲ್‌ ಮಾಡಿದ ಯೋಗರಾಜ್‌ ಸಿಂಗ್‌!

235 ರನ್‌ಗಳನ್ನು ಕಲೆ ಹಾಕಿದ ಲಖನೌ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಮಿಚೆಲ್‌ ಮಾರ್ಷ್‌ ಅವರ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್‌ಗಳ ನಷ್ಟಕ್ಕೆ 235 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 236 ರನ್‌ಗಳ ಗುರಿಯನ್ನು ನೀಡಿತು. ಅದ್ಭುತ ಬ್ಯಾಟ್‌ ಮಾಡಿದ ಮಿಚೆಲ್‌ ಮಾರ್ಷ್‌, 64 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 117 ರನ್‌ಗಳನ್ನು ಸಿಡಿಸಿದರು. ಏಡೆನ್‌ ಮಾರ್ಕ್ರಮ್‌ 36 ರನ್‌ ಗಳಿಸಿದರೆ, ನಿಕೋಲಸ್‌ ಪೂರನ್‌ 27 ಎಸೆತಗಳಲ್ಲಿ ಅಜೇಯ 56 ರನ್‌ಗಳನ್ನು ಕಲೆ ಹಾಕಿದ್ದರು.