Israeli Strike: ಮುಂದುವರಿದ ಹಮಾಸ್-ಇಸ್ರೇಲ್ ಸಂಘರ್ಷ; 30 ಜನ ಬಲಿ
ಯುದ್ಧಪೀಡಿತ ಪ್ರದೇಶವಾದ ರಫಾದಲ್ಲಿ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ನೆರವು ವಿತರಣೆ ಕಾರ್ಯವನ್ನು ನಡೆಸುತ್ತಿತ್ತು. ಈ ಸ್ಥಳದ ಬಳಿ ಇಸ್ರೇಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದು, 115 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ಸಂಬಂಧಿತ ಮಾಧ್ಯಮ ಡಬ್ಲ್ಯೂಎಎಫ್ಎ ಭಾನುವಾರ ವರದಿ ಮಾಡಿದೆ. ಆದರೆ ಈ ವರದಿಯ ಕುರಿತು ಇಸ್ರೇಲ್ ಇದುವರೆಗೆ ಯಾವುದೇ ಪ್ರತಿಕ್ರಿಯನ್ನು ನೀಡಿಲ್ಲ.


ರಫಾ: ಯುದ್ಧಪೀಡಿತ ಪ್ರದೇಶದಲ್ಲಿ (War-torn area) ಸಂತ್ರಸ್ತ ಜನರಿಗೆ ಮಾನವೀಯ ನೆರವು ನೀಡುತ್ತಿದ್ದ ಕೇಂದ್ರದ ಬಳಿ ಇಸ್ರೇಲ್ (Israeli Strike) ನಡೆಸಿದ ದಾಳಿಯಲ್ಲಿ 30 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಫಾದಲ್ಲಿ(Rafah) ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ( Gaza Humanitarian Foundation) ನಡೆಸುತ್ತಿದ್ದ ನೆರವು ವಿತರಣಾ ಕೇಂದ್ರದ ಬಳಿ ಇಸ್ರೇಲಿ ದಾಳಿ ನಡೆಸಿದೆ ಎಂದು ಹಮಾಸ್ (Hamas) ಮಾಧ್ಯಮ ಡಬ್ಲ್ಯೂಎಎಫ್ಎ ಭಾನುವಾರ ವರದಿ ಮಾಡಿದೆ. ಆದರೆ ಈ ಬಗ್ಗೆ ಇಸ್ರೇಲ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯುದ್ಧಪೀಡಿತ ಪ್ರದೇಶವಾದ ರಫಾದಲ್ಲಿ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ನೆರವು ವಿತರಣೆ ಕಾರ್ಯವನ್ನು ನಡೆಸುತ್ತಿತ್ತು. ಈ ಸ್ಥಳದ ಬಳಿ ಇಸ್ರೇಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದು, 115 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ಸಂಬಂಧಿತ ಮಾಧ್ಯಮ ಡಬ್ಲ್ಯೂಎಎಫ್ಎ ಭಾನುವಾರ ವರದಿ ಮಾಡಿದೆ. ಆದರೆ ಈ ವರದಿಯ ಕುರಿತು ಇಸ್ರೇಲ್ ಇದುವರೆಗೆ ಯಾವುದೇ ಪ್ರತಿಕ್ರಿಯನ್ನು ನೀಡಿಲ್ಲ.
ಇಸ್ರೇಲ್ ಬೆಂಬಲಿತವಾಗಿರುವ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ಇತ್ತೀಚೆಗೆ ಯುದ್ಧಪೀಡಿತ ಪ್ರದೇಶದಲ್ಲಿ ಮಾನವೀಯ ನೆರವು ನೀಡಲು ಗಾಜಾದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಆದರೆ ಈ ಬಗ್ಗೆ ಕೆಲವು ಪ್ಯಾಲೆಸ್ಟೀನಿಯನ್ನರು ಕಳವಳ ವ್ಯಕ್ತಪಡಿಸಿದ್ದರು. ನೆರವು ಕೇಂದ್ರದಲ್ಲಿ ವ್ಯವಸ್ಥೆ ತಟಸ್ಥವಾಗಿದ್ದು, ನೆರವು ನೀಡಲು ಇಸ್ರೇಲ್ ಬಳಸಲು ಯೋಜಿಸಿರುವ ಬಯೋಮೆಟ್ರಿಕ್ ಮತ್ತು ಇತರ ತಪಾಸಣೆಗಳ ಬಗ್ಗೆ ಕೆಲವು ಪ್ಯಾಲೆಸ್ಟೀನಿಯನ್ನರು ಆತಂಕ ವ್ಯಕ್ತ ಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಇಸ್ರೇಲ್ ಅಧಿಕಾರಿಗಳು ಈ ಕ್ರಮಗಳು ನೆರವು ಸ್ವೀಕರಿಸುವವರನ್ನು ಪರೀಕ್ಷಿಸಲು ಮತ್ತು ಹಮಾಸ್ಗೆ ಸಂಬಂಧಿಸಿದವರನ್ನು ಹೊರಗಿಡಲು ಮಾಡಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Belagavi Accident: ಬೆಳಗಾವಿಯಲ್ಲಿ ಟ್ಯಾಂಕರ್ ಹರಿದು ಮೂವರು ಕಾರ್ಮಿಕರ ದುರ್ಮರಣ
ಮೇ 28 ರಂದು ಇಸ್ರೇಲ್ ಕನಿಷ್ಠ ಮೂವರು ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ. ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ನ ವಿತರಣಾ ಕೇಂದ್ರಗಳಲ್ಲಿ ಒಂದರ ಬಳಿ 46 ಇತರರನ್ನು ಗಾಯಗೊಳಿಸಿದೆ ಎಂದು ಹಮಾಸ್ ಆರೋಪಿಸಿದೆ. ಆದರೆ ಈ ಆರೋಪವನ್ನು ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ನಿರಾಕರಿಸಿತ್ತು.
ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ಬಳಿ ಸಾವಿರಾರು ಪ್ಯಾಲೆಸ್ಟೀನಿಯನ್ನರು ನೆರವು ಪಡೆಯಲು ಸೇರಿದ್ದರಿಂದ ಸ್ಥಳದಲ್ಲಿ ನಿಯಂತ್ರಣ ಪಡೆಯಲು ಇಸ್ರೇಲ್ ಸೇನಾ ಪಡೆಗಳು ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದವು ಎಂದು ಇಸ್ರೇಲಿ ಸೇನೆ ತಿಳಿಸಿದೆ.