Alia Bhatt: ಸ್ನೇಹಿತೆಯ ಮದುವೆಯಲ್ಲಿ ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ ಅಲಿಯಾ
ಬಾಲಿವುಡ್ ನಟಿ ಅಲಿಯಾ ಭಟ್ ಸ್ಪೇನ್ ನಲ್ಲಿ ಕಪ್ಪು ಬಣ್ಣದ ಗೌನ್ ನಲ್ಲಿ ಮಿಂಚಿದ್ದಾರೆ. ತಮ್ಮ ಆತ್ಮೀಯ ಸ್ನೇಹಿತೆಯ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಅವರು ಸ್ಟ್ರಾಪ್ಲೆಸ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದು, ಎಲ್ಲರನ್ನು ಬೆರಗುಗೊಳ್ಳುವಂತೆ ಮಾಡಿದ್ದಾರೆ. ಇವರ ಈ ಚಿತ್ರಗಳು ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಮೆಚ್ಚುಗೆಯೂ ಹರಿದು ಬಂದಿದೆ.



ಸ್ಪೇನ್ನಲ್ಲಿ ನಡೆದ ಆತ್ಮೀಯ ಸ್ನೇಹಿತೆ ತಾನ್ಯಾ ಸಹಾ ಗುಪ್ತಾ ಅವರ ಮದುವೆಯಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಕಪ್ಪು ಬಣ್ಣದ ನಿಲುವಂಗಿ ಧರಿಸಿ ಮಿಂಚಿದ್ದಾರೆ. ಕಾನ್ಸ್ 2025ರಲ್ಲಿ ಬಿಳಿ ಬಣ್ಣದ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದ ನಟಿ ಈಗ ಸ್ನೇಹಿತೆಯ ಮದುವೆಯಲ್ಲಿ ಕಪ್ಪು ಬಣ್ಣದ ಉಡುಗೆ ಧರಿಸಿ ಎಲ್ಲರನ್ನು ಬೆರಗುಗೊಳ್ಳುವಂತೆ ಮಾಡಿದ್ದಾರೆ.

ಸ್ನೇಹಿತೆ ತಾನ್ಯಾ ಸಹಾ ಗುಪ್ತಾ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ಸ್ಪೇನ್ಗೆ ಹಾರಿರುವ ನಟಿ ಅಲ್ಲಿ ವಧುವಿನ ಕೆಲಸಗಳಲ್ಲಿ ಜತೆಯಾಗಿದ್ದಾರೆ. ವಿವಾಹದಲ್ಲಿ ಪಾಲ್ಗೊಂಡಿರುವ ನಟಿ ಇನ್ಸ್ಟಾಗ್ರಾಮ್ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸ್ಟೈಲಿಶ್ ಕಪ್ಪು ಸ್ಟ್ರಾಪ್ಲೆಸ್ ನಿಲುವಂಗಿಯಲ್ಲಿ ಆಲಿಯಾ ಎಲ್ಲರನ್ನು ಮೋಡಿ ಮಾಡಿದ್ದಾರೆ.

ಮದುಮಗಳು ತಾನ್ಯಾ ಬಿಳಿ ಬಣ್ಣದ ಗೌನ್ನಲ್ಲಿ ಮಿಂಚಿದ್ದರೆ ಅಲಿಯಾ ಅವರಿಗೆ ಸರಿ ಹೊಂದುವಂತೆ ಕಪ್ಪು ಬಣ್ಣದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ವಧುವಿನ ಗೆಳತಿಯರು ಕಪ್ಪು ಬಟ್ಟೆಗಳಲ್ಲಿದ್ದರೂ ಅಲಿಯಾ ಅವರ ನಡುವೆ ಮಿಂಚಿದ್ದಾರೆ. ಇದರ ಹಲವಾರು ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ಸ್ಟಾಗ್ರಾಮ್ನಲ್ಲಿ ಕಾಣಿಸಿಕೊಂಡಿರುವ ಒಂದು ಫೋಟೊದಲ್ಲಿ ಬಿಳಿ ಗೌನ್ ಧರಿಸಿರುವ ವಧುವಿನ ಹಿಂದೆ ಗೆಳತಿಯರ ಪಕ್ಕದಲ್ಲಿ ಆಲಿಯಾ ಭಟ್ ನಿಂತಿರುವುದನ್ನು ಕಾಣಬಹುದು. ಆಲಿಯಾ ಒಂದು ಕೈಯಲ್ಲಿ ಬಿಳಿ ಛತ್ರಿ ಮತ್ತು ಇನ್ನೊಂದು ಕೈಯಲ್ಲಿ ಕೆಲವು ಬಿಳಿ ಹೂವುಗಳನ್ನು ಹಿಡಿದಿದ್ದಾರೆ.

ಕಪ್ಪು ಬಣ್ಣದ ಗೌನ್ ಧರಿಸಿರುವ ಅಲಿಯಾ ಕನಿಷ್ಠ ಆಭರಣಗಳನ್ನು ಧರಿಸಿ ಕಪ್ಪು ಬಣ್ಣದ ಕಿವಿಯೋಲೆಗಳನ್ನು ಹಾಕಿಕೊಂಡಿದ್ದಾರೆ. ಕೂದಲನ್ನು ಅಚ್ಚುಕಟ್ಟಾಗಿ ಬನ್ ಮಾಡಿ ಕಟ್ಟಿಕೊಂಡಿದ್ದಾರೆ. ಆಲಿಯಾ ಮತ್ತು ಗೆಳತಿಯರು ವಧುವಿನಂತಯೇ ಕಂಗೊಳಿಸುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.

ತಾನ್ಯಾ ಅವರ ಸಾಂಪ್ರದಾಯಿಕ ಶೈಲಿಯ ವಿವಾಹ ಕಾರ್ಯಕ್ರಮಗಳಲ್ಲಿ ಆಲಿಯಾ ಬಿಳಿ ಬ್ರೇಲೆಟ್ ಧರಿಸಿದ್ದು ಅದಕ್ಕೆ ಹೊಂದಿಕೆಯಾಗುವ ಉದ್ದನೆಯ ಬ್ಲೇಜರ್ ಮತ್ತು ಕ್ರೀಮ್ ಸ್ಕರ್ಟ್ ಧರಿಸಿದ್ದರು. ಅಲ್ಲದೇ ಇನ್ನೊಂದು ಸಮಾರಂಭದಲ್ಲಿ ಸಾಂಪ್ರದಾಯಿಕ ಸಾಸಿವೆ ಹಳದಿ ಬಣ್ಣದ ಬ್ಲೌಸ್ನೊಂದಿಗೆ ಜೋಡಿಸಲಾದ ಬಹು ಬಣ್ಣದ ಕಾಲಿದಾರ್ ಲೆಹೆಂಗಾವನ್ನು ಧರಿಸಿ ಮಿಂಚಿದ್ದರು.

ಮದುವೆ, ಮಗುವಾದ ಮೇಲೂ ಸಿನಿ ರಂಗದಲ್ಲಿ ಸಕ್ರಿಯವಾಗಿರುವ ನಟಿ ಅಲಿಯಾ ಭಟ್ ಸದ್ಯ ವೈಆರ್ಎಫ್ನ ಮೊದಲ ಮಹಿಳಾ ನೇತೃತ್ವದ ಸ್ಪೈ ಚಿತ್ರದಲ್ಲಿ ಶಾರ್ವರಿ ಜತೆಗೆ ಕಾಣಿಸಿಕೊಳ್ಳಲಿದ್ದಾರೆ. ʼಆಲ್ಫಾʼ ಶೀರ್ಷಿಕೆಯ ಈ ಚಿತ್ರ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಇದರೊಂದಿಗೆ ಸಂಜಯ್ ಲೀಲಾ ಬನ್ಸಾಲಿ ಅವರ 'ಲವ್ ಆ್ಯಂಡ್ ವಾರ್' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.