ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs PBKS: ಸಿಕ್ಸರ್‌ ದಾಖಲೆ ಮೇಲೆ ಕಣ್ಣಿಟ್ಟ ಹಿಟ್‌ಮ್ಯಾನ್‌ ರೋಹಿತ್‌

ಇಲ್ಲಿಯವರೆಗೆ, ಕೇವಲ ಆರು ಆಟಗಾರರು ಮಾತ್ರ ಟಿ20ಗಳಲ್ಲಿ 550 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇವರೆಂದರೆ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್, ನಿಕೋಲಸ್ ಪೂರನ್, ಅಲೆಕ್ಸ್ ಹೇಲ್ಸ್ ಮತ್ತು ಕಾಲಿನ್ ಮುನ್ರೊ.

ಸಿಕ್ಸರ್‌ ದಾಖಲೆ ಮೇಲೆ ಕಣ್ಣಿಟ್ಟ ಹಿಟ್‌ಮ್ಯಾನ್‌ ರೋಹಿತ್‌

Profile Abhilash BC Jun 1, 2025 3:23 PM

ಅಹಮದಾಬಾದ್‌: ಮುಂಬೈ ಇಂಡಿಯನ್ಸ್‌(Mumbai Indians) ತಂಡದ ಮಾಜಿ ನಾಯಕ ರೋಹಿತ್‌ ಶರ್ಮ(Rohit Sharma) ಅವರಿಗರ ಇಂದು ನಡೆಯುವ ಪಂಜಾಬ್‌ ಕಿಂಗ್ಸ್‌(MI vs PBKS) ವಿರುದ್ಧದ ಕ್ವಾಲಿಫೈಯರ್‌-2(IPL 2025 Qualifier 2) ಪಂದ್ಯದಲ್ಲಿ ಮಹತ್ವದ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ರೋಹಿತ್‌ ಇಂದಿನ ಪಂದ್ಯದಲ್ಲಿ ಮೂರು ಸಿಕ್ಸರ್‌ ಸಿಡಿಸಿದರೆ ಟಿ20 ಕ್ರಿಕೆಟ್‌ನಲ್ಲಿ 550 ಸಿಕ್ಸರ್‌ ಬಾರಿಸಿದ ಮೊದಲ ಭಾರತೀಯ ಹಾಗೂ ವಿಶ್ವದ 7ನೇ ಬ್ಯಾಟರ್‌ ಎನಿಸಿಕೊಳ್ಳಲಿದ್ದಾರೆ.

ಇಲ್ಲಿಯವರೆಗೆ, ಕೇವಲ ಆರು ಆಟಗಾರರು ಮಾತ್ರ ಟಿ20ಗಳಲ್ಲಿ 550 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇವರೆಂದರೆ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್, ನಿಕೋಲಸ್ ಪೂರನ್, ಅಲೆಕ್ಸ್ ಹೇಲ್ಸ್ ಮತ್ತು ಕಾಲಿನ್ ಮುನ್ರೊ. ಇವರಲ್ಲಿ, ಗೇಲ್ ಈ ಸ್ವರೂಪದಲ್ಲಿ 1,000 ಸಿಕ್ಸರ್‌ಗಳ ಗಡಿಯನ್ನು ದಾಟಿದ ಏಕೈಕ ಆಟಗಾರ. ಸದ್ಯ ರೋಹಿತ್‌ 452 ಪಂದ್ಯಗಳಿಂದ 547* ಬಾರಿಸಿದ್ದಾರೆ.

ಶುಕ್ರವಾರ ನಡೆದಿದ್ದ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 300 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ಮಾತ್ರವಲ್ಲಿದೆ ಐಪಿಎಲ್‌ನಲ್ಲಿ 7 ಸಾವಿರ ರನ್‌ ಪೂರ್ತಿಗೊಳಿಸಿದ 2ನೇ ಆಟಗಾರ ಎಂಬ ಮೈಲಿಗಲ್ಲು ನಿರ್ಮಿಸಿದ್ದರು. ಇದೀಗ ಕ್ವಾಲಿಫೈಯರ್‌ ಪಂದ್ಯದಲ್ಲಿ ಮತ್ತೊಂದು ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು

ಕ್ರಿಸ್ ಗೇಲ್ - 463 ಪಂದ್ಯಗಳಿಂದ 1056 ಸಿಕ್ಸರ್‌

ಕೀರನ್ ಪೊಲಾರ್ಡ್ - 695 ಪಂದ್ಯಗಳಿಂದ 908 ಸಿಕ್ಸರ್‌

ಆಂಡ್ರೆ ರಸೆಲ್ - 551 ಪಂದ್ಯಗಳಿಂದ 747 ಸಿಕ್ಸರ್‌

ನಿಕೋಲಸ್ ಪೂರನ್ - 398 ಪಂದ್ಯಗಳಿಂದ 639 ಸಿಕ್ಸರ್‌

ಅಲೆಕ್ಸ್ ಹೇಲ್ಸ್ - 496 ಪಂದ್ಯಗಳಿಂದ 560 ಸಿಕ್ಸರ್‌

ಕಾಲಿನ್ ಮುನ್ರೊ - 441 ಪಂದ್ಯಗಳಿಂದ 557 ಸಿಕ್ಸರ್‌

ರೋಹಿತ್ ಶರ್ಮಾ - 452 ಪಂದ್ಯಗಳಲ್ಲಿ 547 ಸಿಕ್ಸರ್‌



ರೋಹಿತ್‌ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2013ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಬಾರಿ ಟೆಸ್ಟ್‌ ಆಡಿದ್ದ ರೋಹಿತ್, ಈ ವರೆಗೂ ಭಾರತ ಪರ 67 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 12 ಶತಕ, 18 ಅರ್ಧಶತಕ ಸೇರಿದಂತೆ 40.57ರ ಸರಾಸರಿಯಲ್ಲಿ 4301 ರನ್‌ ಕಲೆಹಾಕಿದ್ದಾರೆ.

ಇದನ್ನೂ ಓದಿ IPL 2025 final: ಐಪಿಎಲ್​ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!