B.R. Naidu: ಟಿಟಿಡಿ ವಿರುದ್ಧ ಕೇಳಿ ಬಂದ ಆರೋಪ; ಎಸಿಬಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡುಗೆ ಮನವಿ
N.Chandrababu Naidu: ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳೆದ 5 ವರ್ಷಗಳಲ್ಲಿ ನಡೆದಿದೆ ಎನ್ನಲಾದ ಎಲ್ಲ ಅಕ್ರಮಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಮನವಿ ಸಲ್ಲಿಸಿದ್ದಾರೆ.

ಬಿ.ಆರ್.ನಾಯ್ಡು.

ಹೈದರಾಬಾದ್: ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳೆದ 5 ವರ್ಷಗಳಲ್ಲಿ ನಡೆದಿದೆ ಎನ್ನಲಾದ ಎಲ್ಲ ಅಕ್ರಮಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (Anti-Corruption Bureau)ದಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು (N.Chandrababu Naidu) ಅವರಿಗೆ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು (B.R. Naidu) ಮನವಿ ಮಾಡಿದರು. ಕಳೆದ 3 ತಿಂಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಗೋಶಾಲೆಯಲ್ಲಿ 100ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ ಎಂದು ವೈಎಸ್ಆರ್‌ಸಿಪಿ (YSRCP) ನಾಯಕರು ಆರೋಪಿಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದರು.
"ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಹಿಂದಿರುಗಿದ ಕೂಡಲೇ ಕಳೆದ 5 ವರ್ಷಗಳಲ್ಲಿ ನಡೆದ ಎಲ್ಲ ಅಕ್ರಮಗಳ ಬಗ್ಗೆ ಎಸಿಬಿ ತನಿಖೆ ನಡೆಸುವಂತೆ ಕೋರಿ ನಾವು ಮನವಿ ಸಲ್ಲಿಸುತ್ತೇವೆ" ಎಂದು ಗೋಶಾಲೆಗೆ ಭೇಟಿ ನೀಡಿದ ನಂತರ ಬಿ.ಆರ್.ನಾಯ್ಡು ತಿಳಿಸಿದರು.
టీటీడీ చైర్మన్ బీఆర్ నాయుడు గారిని ఆశీర్వాదించిన ఒంటిమిట్ట రామాలయం అర్చకులు
— B R Naidu (@BollineniRNaidu) April 18, 2025
ఒంటిమిట్ట బ్రహ్మోత్సవాలు దిగ్విజయంగా ముగియడంతో స్వామివారి తలంబ్రాలు, వస్త్రాలు, ప్రసాదాలను చైర్మన్ కు అందజేసిన అర్చకులు#AdminPost #TTD #Tirumala #TirumalaTirupatiDevasthanam pic.twitter.com/cxndWQsRpH
ಈ ಸುದ್ದಿಯನ್ನೂ ಓದಿ: Tirupati temple: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹಿಂದುಗಳಿಗೆ ಮಾತ್ರ ಉದ್ಯೋಗ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಕೆಲವು ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ದೇವಾಲಯ ಆಡಳಿತದ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ಅಭಿಯಾನವನ್ನು ಹರಡುತ್ತಿದ್ದಾರೆ ಎಂದು ದೂರಿದರು. ಕೇಳಿಬಂದ ಆರೋಪಗಳನ್ನು ನಿರಾಕರಿಸಿದ ಅವರು, ಹಿಂದಿನ ವೈಎಸ್ಆರ್‌ಸಿಪಿ ಸರ್ಕಾರವನ್ನು ದೂಷಿಸಿದರು. ಅಂದಿನ ಸರ್ಕಾರ ಹಸುಗಳಿಗೆ ಮೇವು ಒದಗಿಸಲು ಸಹ ವಿಫಲವಾಗಿತ್ತು ಎಂದು ಹೇಳಿದರು.
ʼʼಅವರು ದಾನ ಪಡೆದ ಹಸುಗಳನ್ನೂ ಮಾರಾಟ ಮಾಡಿದ್ದಾರೆ ಮತ್ತು ಈಗ ಟಿಡಿಪಿ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ತಪ್ಪು, ಸುಳ್ಳು ಆರೋಪ ಮಾಡುವವರನ್ನು ದೇವರು ಶಿಕ್ಷಿಸುತ್ತಾನೆ" ಎಂದು ಅಭಿಪ್ರಾಯಪಟ್ಟರು.
ಗೋಶಾಲೆಯಲ್ಲಿ ಹಸುಗಳ ಸಾವಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ದಾಖಲಿಸುವುದಾಗಿ ಕೆಲವು ವ್ಯಕ್ತಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದ ಬಿ.ಆರ್.ನಾಯ್ಡು, ವೈಎಸ್ಆರ್‌ಸಿಪಿಯ 5 ವರ್ಷಗಳ ಆಡಳಿತದಲ್ಲಿ ನಡೆದ ಟಿಟಿಡಿ ನಿಧಿಯ ದುರುಪಯೋಗದ ಬಗ್ಗೆಯೂ ದೂರು ದಾಖಲಿಸುವಂತೆ ತಿಳಿಸಿದರು.
ಇಂತಹ ಕಾನೂನು ಪ್ರಕ್ರಿಯೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅಡಿಯಲ್ಲಿ ಕಳೆದ 10 ತಿಂಗಳಲ್ಲಿ ಟಿಟಿಡಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಸಮರ್ಥಿಸಿಕೊಂಡರು.
ವೈಎಸ್ಆರ್‌ಸಿಪಿ ಹೇಳಿದ್ದೇನು?
ಟಿಟಿಡಿ ಮಾಜಿ ಅಧ್ಯಕ್ಷ ಮತ್ತು ವೈಎಸ್ಆರ್‌ಸಿಪಿಯ ಹಿರಿಯ ಮುಖಂಡ ಬಿ.ಕರುಣಾಕರ ರೆಡ್ಡಿ ಇತ್ತೀಚೆಗೆ ಟಿಟಿಡಿ ವಿರುದ್ದ ಗಂಭೀರ ಆರೋಪ ಹೊರಿಸಿದ್ದರು. ಟಿಟಿಡಿ ಗೋಶಾಲೆಯಲ್ಲಿ ಕಳೆದ 3 ತಿಂಗಳಲ್ಲಿ ಸುಮಾರು 100 ಹಸುಗಳು ಸಾವನ್ನಪ್ಪಿವೆ ಎಂದು ಆರೋಪಿಸಿದ್ದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದ ಅವರು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ ಹಾಗೂ ಹೇಳಿಕೆಗೆ ಬದ್ಧರಾಗಿರುವುದಾಗಿಯೂ ತಿಳಿಸಿದ್ದರು.
ಇದಕ್ಕೂ ಮೊದಲು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ಅವರು 43 ಹಸುಗಳು ಸಾವನ್ನಪ್ಪಿವೆ ಎಂದು ಹೇಳಿದರೆ, ಬಿ.ಆರ್.ನಾಯ್ಡು ಈ ಸಂಖ್ಯೆ 22 ಎಂದು ತಿಳಿಸಿದ್ದರು. ಇನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಯಾವುದೇ ಹಸು ಸಾವನ್ನಪ್ಪಿಲ್ಲ ಎಂದಿದ್ದರು. ಈ ಬಗ್ಗೆ ಪ್ರಸ್ತಾವಿಸಿದ್ದ ಕರುಣಾಕರ ರೆಡ್ಡಿ ಮೂವರು 3 ರೀತಿಯ ಹೇಳಿಕೆ ನೀಡುತ್ತಿರುವುದಾಗಿಯೂ ಈಗಿನ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದಾಗಿಯೂ ದೂರಿದ್ದರು.