Operation Sindoor: 2 ಮಹಿಳಾ ಅಧಿಕಾರಿಗಳು, ಒಬ್ಬ ಕಾಶ್ಮೀರಿ ಪಂಡಿತ... ಆಪರೇಷನ್‌ಗೆ ಹೆಸರು ಸಿಂಧೂರ; ಇದು ಐತಿಹಾಸಿಕ ಮಾಧ್ಯಮಗೋಷ್ಠಿ!
Operation Sindoor Briefing:ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರತೀ ವಿಚಾರಗಳು ಬಹಳಷ್ಟು ವಿಶೇಷತೆ ಪಡೆದುಕೊಂಡಿವೆ. ದಾಳಿ ಬಗ್ಗೆ ಇಂದು ವಿದೇಶಾಂಗ ಕಾರ್ಯದರ್ಶಿ ಮತ್ತು ಸೇನಾಧಿಕಾರಿಗಳು ನಡೆಸಿದ ಮಾಧ್ಯಮಗೋಷ್ಠಿಗಳೂ ಬಹಳ ವಿಶೇಷತೆ ಪಡೆದುಕೊಂಡಿವೆ. ಕಾಶ್ಮೀರಿ ಪಂಡಿತ ಸಮುದಾಯದ ಹಿನ್ನೆಲೆವುಳ್ಳ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕೂಡ ಈ ಸುದ್ದಿಗೋಷ್ಠಿಯಲ್ಲಿದ್ದರು.


ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಪ್ರತೀಕಾರವಾಗಿ ಇಂದು ಬೆಳ್ಳಂ ಬೆಳಗ್ಗೆ ನಡೆದ ಸೇನಾ ಕಾರ್ಯಾಚರಣೆಗೆ ಇಟ್ಟಿರುವ ಹೆಸರೇ ಅತ್ಯಂತ ಭಾವನಾತ್ಮಕ ಮತ್ತು ಪ್ರತಿ ಭಾರತೀಯನ ಮನಮುಟ್ಟುವಂತಿದೆ. ಈ ಆಪರೇಷನ್ ಸಿಂಧೂರ್(Operation Sindoor) ಕಾರ್ಯಾಚರಣೆಗೆ ಸಂಬಂಧಿಸಿದ ಪ್ರತೀ ವಿಚಾರಗಳು ಬಹಳಷ್ಟು ವಿಶೇಷತೆ ಪಡೆದುಕೊಂಡಿವೆ. ದಾಳಿ ಬಗ್ಗೆ ಇಂದು ವಿದೇಶಾಂಗ ಕಾರ್ಯದರ್ಶಿ ಮತ್ತು ಸೇನಾಧಿಕಾರಿಗಳು ನಡೆಸಿದ ಮಾಧ್ಯಮಗೋಷ್ಠಿಯೂ ಬಹಳ ವಿಶೇಷತೆ ಪಡೆದುಕೊಂಡಿವೆ. ಭೂ ಲೋಕದ ಸ್ವರ್ಗ ಎಂದೇ ಖ್ಯಾತಿ ಪಡೆದಿದ್ದ ಪಹಲ್ಗಾಮ್‌ನಲ್ಲಿ ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದರು. ಪತ್ನಿಯರ ಎದುರೇ ಅವರವರ ಪತಿಯರನ್ನು ಗುಂಡಿಕ್ಕಿ ಹತ್ಯೆ ಮಾಡಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಹಿಂದೂ ಸಂಪ್ರದಾಯದ ಪ್ರಕಾರ ಸಿಂಧೂರ ಎಂಬುದು ಮುತ್ತೈದೆತನದ ಸಂಕೇತ. ಅಂತಹ ಸಿಂಧೂರವನ್ನೇ ಅಳಿಸಿ ಹಾಕುವ ಕೃತ್ಯಕ್ಕೆ ಉಗ್ರರು ಕೈ ಹಾಕಿದ್ದರು. ಹೀಗಾಗಿ ಈ ಆಪರೇಷನ್ ಸಿಂಧೂರ ಎಂಬುದು ದೇಶದ ಹೆಣ್ಣು ಮಕ್ಕಳ ಮುತ್ತೈದೆತನವನ್ನು ಸಾಂಕೇತಿಸಿ ಇಡಲಾದ ಹೆಸರು. ಒಟ್ಟಿನಲ್ಲಿ ಈ ಹೆಸರು ಹೆಣ್ಣು ಮಕ್ಕಳನ್ನು ನೇರವಾಗಿ ಭಾವನಾತ್ಮಕವಾಗಿ ಕನೆಕ್ಟ್ ಮಾಡುತ್ತದೆ.
ಇನ್ನು ದಾಳಿ ನಂತರ ಇಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಯೂ ಇಂತಹದ್ದೇ ಒಂದು ಭಾವನಾತ್ಮಕ ವಿಚಾರ ಕಂಡು ಬರುತ್ತದೆ. ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಬ್ಬರು ಸೇನಾ ಸಮವಸ್ತ್ರದಲ್ಲಿ ಇಬ್ಬರು ಮಹಿಳೆಯರು ಭಾಗಿಯಾಗಿದ್ದರು. ಅವರು ಬೇರೆ ಯಾರು ಅಲ್ಲ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್. ಇವರಿಬ್ಬರೂ ಸೇನಾ ಕಾರ್ಯಾಚರಣೆ ಹೇಗೆ ನಡೆಯಿತು? ಎಲ್ಲೆಲ್ಲಿ ನಡೆಯಿತು? ಎಂಬ ಬಗ್ಗೆ ಸಂಪೂರ್ಣ ವಿವರವನ್ನು ಸವಿಸ್ತಾರವಾಗಿ ಮುಂಡಿಟ್ಟಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಮಹಿಳಾ ಸೇನಾಧಿಕಾರಿಗಳು ಭಾಗಿಯಾಗಿವುದು ಬಹಳ ವಿರಳ. ಆದರೆ ಈ ಬಾರಿ ಈ ಸಮರ ಮಹಿಳೆಯರು ಅನುಭವಿಸಿದ ನೋವಿನ ಪ್ರತೀಕಾರವಾಗಿರುವುದರಿಂದ ಮಹಿಳಾ ಸೇನಾಧಿಕಾರಿಗಳು ಸುದ್ದಿಗೋಷ್ಠಿ ನಡೆಸುವ ಮೂಲಕ ನಾರಿ ಶಕ್ತಿಯನ್ನು ಇಡೀ ಪ್ರಪಂಚಕ್ಕೆ ಸಾರಿದ್ದಾರೆ.
ಈ ಸುದ್ದಿಯನ್ನೂ ಓದಿ: Operation Sindoor: ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡ ಭಾರತ; ಸಿನಿಮಾ ಮಂದಿ ಏನಂದ್ರು?
ವಿಕ್ರಮ್ ಮಿಸ್ರಿ ಉಪಸ್ಥಿತಿ ಹಿಂದಿದೆ ಇಂಟ್ರಸ್ಟಿಂಗ್ ಸಂಗತಿ
ಇನ್ನು ಸುದ್ದಿಗೋಷ್ಠಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ನೇತೃತ್ವದಲ್ಲಿ ನಡೆಯಿತು. ವಿಕ್ರಮ್ ಮಿಸ್ರಿಗೂ ಕಾಶ್ಮೀರಕ್ಕೂ ಭಾವನಾತ್ಮಕ ನಂಟಿದೆ. ಸುದ್ದಿಗೋಷ್ಠಿಯಲ್ಲಿ ಅವರ ಭಾಗಿ ಹಿಂದೆಯೂ ಒಂದು ಇಂಟ್ರೆಸ್ಟಿಂಗ್ ಸಂಗತಿ ಇದೆ. ವಿಕ್ರಮ್ ಮಿಸ್ರಿ ಮೂಲತಃ ಕಾಶ್ಮೀರಿ ಪಂಡಿತರು. ದಶಕಗಳ ಹಿಂದೆ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ನಲುಗಿ ಬೇಸತ್ತು ಮೂಲ ನೆಲಯನ್ನೇ ಕಳೆದುಕೊಂಡು ಬದುಕಿದಂತಹ ಕಾಶ್ಮೀರಿ ಪಂಡಿತರ ಸಮುದಾಯಕ್ಕೆ ಸೇರಿದ ಮಿಸ್ರಿ ಈ ಸುದ್ದಿಗೋಷ್ಠಿ ನಡೆಸಲು ಬಹಳ ಸೂಕ್ತ ವ್ಯಕ್ತಿ ಎಂದು ಸರ್ಕಾರ ಭಾವಿಸಿದಂತೆ ತೋರುತ್ತಿದೆ.