Actor Sathyan: ಸಾವಿರಾರು ಕೋಟಿ ಆಸ್ತಿ ಹೊಂದಿದ್ದ ಈ ಹಾಸ್ಯ ನಟ ಪಾಪರ್ ಆಗಿದ್ದು ಹೇಗೆ?
ತಮಿಳು ಸಿನಿಮಾದಲ್ಲಿ ಖ್ಯಾತಿ ಪಡೆದ ನಟ ಸತ್ಯನ್ ತಮ್ಮ ವಿಶೇಷ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. 1988ರಲ್ಲಿ ಪೂವುಮ್ ಪುಯಾಲುಮ್ ಎನ್ನುವ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 2012ರಲ್ಲಿ ತೆರೆ ಕಂಡ ವಿಜಯ್ ನಟನೆಯ ನಾನ್ಬನ್ ಚಿತ್ರದಲ್ಲಿ ಸೈಲೆನ್ಸರ್ ಪಾತ್ರದ ಮೂಲಕ ಇವರು ಹೆಚ್ಚು ಖ್ಯಾತಿ ಪಡೆದಿದ್ದಾರೆ. ತಿರುಪತಿ, ಆರು, ಘಜನಿ, ಮಾಯಾವಿ, ಏಗನ್, ರಾರಾ, ಪುಲಿ ಇತ್ಯಾದಿ ತಮಿಳು ಚಲನಚಿತ್ರದ ಮೂಲಕ ಹಾಸ್ಯ ಜಗತ್ತಿನಲ್ಲಿ ನಟ ಸತ್ಯನ್ ತುಂಬಾ ಪ್ರಸಿದ್ಧಿ ಪಡೆದಿದ್ದರು.



ಹಾಸ್ಯ ನಟನಾಗಿ ಪ್ರಸಿದ್ಧರಾದ ನಟ ಸತ್ಯನ್ ಅವರು ಆರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ಟಿ. ಬಾಬು ನಿರ್ದೇಶನದ ಇಳಯನ್ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಿದ್ದರು. ಅನಂತರ ಕಣ್ಣ ಉನ್ನೈ ತೆಡುಕಿರನ್ ಸಿನಿಮಾದಲ್ಲಿಯು ನಾಯಕನಾಗಿ ಮಿಂಚಿದ್ದಾರೆ. ಆದರೆ ಈ ಎರಡು ಚಿತ್ರಗಳು ಅಂದುಕೊಂಡ ಮಟ್ಟಕ್ಕೆ ಯಶಸ್ಸು ಸಿಗಲಿಲ್ಲ. ಹೀಗಾಗಿ ಹೀರೊ ಇಮೇಜ್ನಿಂದ ಕಾಮಿಡಿ ಕ್ಯಾರೆಕ್ಟರ್ಗೆ ಇವರ ಪಾತ್ರ ಬದಲಾಗಲ್ಪಟ್ಟಿತ್ತು.

ಹೀರೋ ಆಗಿ ಮಿಂಚಬೇಕಿದ್ದ ಸತ್ಯನ್ ಅವರು ಆ ಬಳಿಕ ಸರಿಯಾದ ಅವಕಾಶ ಸಿಗದೆ ಹಾಸ್ಯ ನಟನಾಗಿಯೇ ಹೆಚ್ಚಾಗಿ ನಟನೆಯಲ್ಲಿ ತೊಡಗಿಕೊಂಡರು. ಕಾಮಿಡಿ ಪಾತ್ರದ ಜೊತೆಗೆ ನಟರ ಸ್ನೇಹಿತನ ಪಾತ್ರದಲ್ಲಿ ಕೂಡ ಅಭಿನಯಿಸಿದರು. ಅವರ ವೃತ್ತಿ ಜೀವನದಲ್ಲಿ 70ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ನನ್ಬನ್, ತುಪಾಕ್ಕಿ ಚಲನಚಿತ್ರಗಳು ಅವರಿಗೆ ವ್ಯಾಪಕ ಖ್ಯಾತಿಯನ್ನು ತಂದುಕೊಟ್ಟಿದೆ.

ಕೊಯಮತ್ತೂರು ಜಿಲ್ಲೆಯ ಮಾಧಂಪಟ್ಟಿ ಎಂಬಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಹೊಂದಿದ್ದ ಸತ್ಯನ್ ಅವರು ಬಹುದೊಡ್ಡ ಶ್ರೀಮಂತರಾಗಿದ್ದರು. ಮಾಧಂಪಟ್ಟಿಯಲ್ಲಿ ಬಂಗಲೆ, ಐಶಾರಾಮಿ, ನೂರು ಎಕರೆಗಳ ತೋಟ ಮತ್ತು ಆಸ್ತಿಗಳನ್ನು ಹೊಂದಿದ್ದರು.

ಸತ್ಯನ್ ಮಾಧಂಪಟ್ಟಿ ಅವರ ತಂದೆ ಶಿವಕುಮಾರ್ ಆಗಿದ್ದು ಅವರಿಗೆ ಸಿನಿಮಾದ ಬಗ್ಗೆ ತೀವ್ರ ಆಸಕ್ತಿ ಇತ್ತು. ಅವರು ಪ್ರಮುಖ ತಮಿಳು ನಟರ ಪರಿಚಯವನ್ನು ಕೂಡ ಹೊಂದಿದ್ದು ಚಲನಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು. ಆದರೆ ಸಿನಿಮಾ ನಿರ್ಮಾಣ ಕ್ಷೇತ್ರದಿಂದ ಆರ್ಥಿಕ ನಷ್ಟಕ್ಕೆ ಉಂಟಾಗುವಂತಾಯಿತು. ಬಳಿಕ ನಷ್ಟ ಬರಿಸಲು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿದರು.

ಮಾಧಂಪಟ್ಟಿ ಶಿವಕುಮಾರ್ ಅವರು ತಮ್ಮ ಮಗ ಸತ್ಯನ್ ಅವರನ್ನು ಇಳಯವನ್ ಚಿತ್ರವನ್ನು ನಿರ್ಮಿಸುವ ಮೂಲಕ ಸಿನಿಮಾರಂಗಕ್ಕೆ ಪರಿಚಯಿಸಿ ದೊಡ್ಡ ಸ್ಟಾರ್ ಮಾಡುವ ಗುರಿಯನ್ನು ಹೊಂದಿದ್ದರು. ಆದರೆ ಈ ಚಿತ್ರವು ನಿರೀಕ್ಷಿತ ಯಶಸ್ಸನ್ನು ಗಳಿಸಲಿಲ್ಲ, ಇದು ಮತ್ತಷ್ಟು ಆರ್ಥಿಕ ನಷ್ಟಗಳಿಗೆ ಕಾರಣವಾಗಿ ಆರ್ಥಿಕ ನಷ್ಟ ಭರಿಸಲು ಆಸ್ತಿ ಮಾರಾಟ ಮಾಡಿ ನಷ್ಟ ಅನುಭವಿಸಿದರು.

ಮಾಧಂಪಟ್ಟಿ ಶಿವಕುಮಾರ್ ಅವರ ಮರಣದ ನಂತರ ನಟ ಸತ್ಯನ್ ಅವರು ತಮ್ಮೆಲ್ಲ ಆಸ್ತಿ ಕಳೆದುಕೊಂಡು ಮಾಧಂಪಟ್ಟಿಯಲ್ಲಿರುವ ತಮ್ಮ ಬಂಗಲೆಯನ್ನು ಮಾರಿ ಚೆನ್ನೈಗೆ ಸ್ಥಳಾಂತರ ಗೊಂಡರು. ಒಟ್ಟಿನಲ್ಲಿ ಸಾವಿರಾರು ಕೋಟಿ ಆಸ್ತಿ ಹೊಂದಿದ್ದರು ಅವರು ತಮ್ಮೆಲ್ಲ ಆಸ್ತಿ ಕಳೆದುಕೊಂಡು ಸಿನಿಮಾದಲ್ಲಿಯೂ ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಬೇಕಾಯ್ತು ಎಂಬುದೇ ವಿಪರ್ಯಾಸ.