Vishweshwar Bhat Column: ಲಂಕೇಶರ ಇಂಗ್ಲಿಷ್ ಕೀಳರಿಮೆ
ಲಂಕೇಶ್ ಬಗ್ಗೆ ಅವರು ಒಂದೆಡೆ ಹೀಗೆ ಬರೆಯುತ್ತಾರೆ- ಲಂಕೇಶರ ಹೆಸರಿನ ಪಿ.ಇನಿಷಿಯಲ್ಸ್ ಪಾಳ್ಯದ ಅಥವಾ ಪಟೇಲ್ ಅಥವಾ ಪಾಳೇಗಾರ ಎಂಬುದರಿಂದ ಬಂದದ್ದು ಇರಬೇಕು. ಇದನ್ನು ಕೇಳಿದ್ದು ಲಂಕೇಶರೇ. ಇವತ್ತಿಗೂ ಈ ‘ಪಿ’ ಅಕ್ಷರ ಲಂಕೇಶರ ಹೆಸರಿನೊಂದಿಗೆ ಸೇರಿಕೊಂಡ ಕಾರಣ ಬಹಿರಂಗ ವಾಗಿಲ್ಲ. ಅವರ ಊರು ಕೊನೆಗವಳ್ಳಿ, ತಂದೆ ನಂದಿಬಸಪ್ಪ.


ಸಂಪಾದಕರ ಸದ್ಯಶೋಧನೆ
ಕನ್ನಡ ಸಾಹಿತ್ಯ, ರಂಗಭೂಮಿ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದ, ದೂರದರ್ಶನದಲ್ಲಿ ಹಲವು ದಶಕಗಳ ಕಾಲ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ, ಆತ್ಮೀಯರಾದ ಎನ್.ಕೆ.ಮೋಹನರಾಂ ಅವರು ಪಿ.ಲಂಕೇಶ್ ಬಗ್ಗೆ ಒಂದು ಸೊಗಸಾದ ಪುಸ್ತಕ ಬರೆದಿದ್ದಾರೆ. ಅದರ ಹೆಸರು ‘ದ ಕ್ಯಾಪಿಟಲ್: ಲಂಕೇಶ್ ಪ್ರೈವೇಟ್ ಲಿಮಿಟೆಡ್’. ಲಂಕೇಶ್ ಅವರ ಬಗ್ಗೆ ತಿಳಿದು ಕೊಳ್ಳ ಬೇಕೆಂದು ಬಯಸುವವರು ಇದನ್ನು ಓದಲೇಬೇಕು. ಸಾಮಾನ್ಯವಾಗಿ ಲಂಕೇಶ್ ಬಗ್ಗೆ ಬರೆದ ವರೆಲ್ಲ ಅವರನ್ನು ಅತಿಯೆನಿಸುವಷ್ಟು ಹೊಗಳಿದ್ದಾರೆ, ಇಲ್ಲವೇ ತಮ್ಮನ್ನು ಅವರ ಜತೆಗಿನ ಒಡನಾಟದಿಂದ ಎತ್ತರಕ್ಕೇರಿಸಿಕೊಂಡಿದ್ದಾರೆ. ಆದರೆ ಮೋಹನರಾಂ ಮಾತ್ರ ಲಂಕೇಶರ ವ್ಯಕ್ತಿತ್ವ ವನ್ನು ವಸ್ತುನಿಷ್ಠ ವಾಗಿ ನೋಡುವ ಪ್ರಯತ್ನ ಮಾಡಿದ್ದಾರೆ.
ಲಂಕೇಶ್ ಬಗ್ಗೆ ಅವರು ಒಂದೆಡೆ ಹೀಗೆ ಬರೆಯುತ್ತಾರೆ- ಲಂಕೇಶರ ಹೆಸರಿನ ಪಿ.ಇನಿಷಿಯಲ್ಸ್ ಪಾಳ್ಯದ ಅಥವಾ ಪಟೇಲ್ ಅಥವಾ ಪಾಳೇಗಾರ ಎಂಬುದರಿಂದ ಬಂದದ್ದು ಇರಬೇಕು. ಇದನ್ನು ಕೇಳಿದ್ದು ಲಂಕೇಶರೇ. ಇವತ್ತಿಗೂ ಈ ‘ಪಿ’ ಅಕ್ಷರ ಲಂಕೇಶರ ಹೆಸರಿನೊಂದಿಗೆ ಸೇರಿಕೊಂಡ ಕಾರಣ ಬಹಿರಂಗವಾಗಿಲ್ಲ. ಅವರ ಊರು ಕೊನೆಗವಳ್ಳಿ, ತಂದೆ ನಂದಿಬಸಪ್ಪ.
ಇದನ್ನೂ ಓದಿ: Vishweshwar Bhat Column: ಟೈಮ್ ಮ್ಯಾಗಜಿನ್ ಮುಖಪುಟ
ಹೀಗಾಗಿ ಕೆ.ಎನ್. ಎಂದು ಇರಬೇಕಿತ್ತು ಅಥವಾ ಕೆ ಮತ್ತು ಎನ್‌ಗಳಲ್ಲಿ ಒಂದಾದರೂ ಇರಬೇಕಿತ್ತು. ಲಂಕೇಶ್ ತಮ್ಮ ವೈಯಕ್ತಿಕ ಜೀವನದಲ್ಲಿ ಪಾಳೇಗಾರರೇ. ಪ್ರಶ್ನಾತೀತ ತಾನು ಎಂದು ಅಪಾರವಾಗಿ ನಂಬಿದ್ದ ಅವರನ್ನು ಪ್ರಶ್ನಿಸಿದವರನ್ನು ಪ್ರಹಾರಕ್ಕೊಳಪಡಿಸುತ್ತಿದ್ದರು. ತಮಗೆ ಬೇಕಾದವರನ್ನು ಅಟ್ಟಕ್ಕೇರಿಸುತ್ತಿದ್ದರು. ತಮಗೆ ಬೇಡವಾದವರನ್ನು ಚೆಚ್ಚುತ್ತಿದ್ದರು. ತನ್ನ ನಂಬಿಕೆಯೇ ಅಖೈರು ಎಂಬ ಅವರ ಹಟ ಸಹ ಅವರ ಪಾಳೇಗಾರಿಕೆಯ ಕುರುಹು.
ಅವರ ಬಹುತೇಕ ಪ್ರೇಮ ಪ್ರಕರಣಗಳು ಆಪೂರ್ಣವಾಗೇ ಉಳಿದದ್ದು, ಅವುಗಳಿಂದ ಇವರು ಪಡಬಾರದ ಪರಿಪಾಟಲಿಗೆ ಒಳಗಾದದ್ದು ಸಹ ಇವರ ಪಾಳೇಗಾರಿಕೆಯ ಗುಣದಿಂದಾಗೇ. ಬರಹಗಾರ ನಾಗಿ ಲಂಕೇಶರು ಏನಾಗಿದ್ದರೋ ನಿಜಜೀವನದಲ್ಲಿ ಅದಾಗಿರಲಿಲ್ಲ. ಯಾರಲ್ಲೂ ಇರದ ಒಳನೋಟ ಅವರಲ್ಲಿದ್ದರೂ, ಒಳ್ಳೆಯ ಪಾಠ ಮಾಡುವಲ್ಲಿ ಹೆಣಗಾಡುತ್ತಿದ್ದದ್ದಕ್ಕೆ ಕಾರಣ ಅವರ ಇಂಗ್ಲಿಷ್‌ನ ಮಿತಿಗಳು, ಬರವಣಿಗೆಯಲ್ಲಿ ಪರಿಣತಿಯಿದ್ದ ಲಂಕೇಶರು ಕ್ಲಾಸಿಗೆ ಹೋದೊಡನೆ ಇಂಗ್ಲಿಷ್ ಮರೆಯುತ್ತಿದ್ದರು.
ಲಂಕೇಶರ ಅತ್ಯಂತ ಪ್ರೀತಿಯ ವಿದ್ಯಾರ್ಥಿಯಾಗಿದ್ದು, ಅವರ ಬಹುತೇಕ ನಾಟಕಗಳಲ್ಲಿ ಅಭಿನಯಿ ಸಿದ್ದ ನನ್ನ ಹಳೆಯ ಗೆಳೆಯ, ಈಗ ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್.ನಾಗರಾಜ್ ಹೇಳುತ್ತಿದ್ದುದು, ಅವರು ತರಗತಿಗೆ ಬರುತ್ತಿದ್ದದ್ದೇ ಹದಿನೈದು ನಿಮಿಷ ತಡವಾಗಿ. ಪಾಠ ಮಾಡುತ್ತಿದ್ದದ್ದು 15-20 ನಿಮಿಷ ಮಾತ್ರ. ಅದೂ ಹೇಳುತ್ತಿದ್ದzಲ್ಲವೂ ಅರ್ಧಂಬರ್ಧವೇ.
ಇಪ್ಪತ್ತು ವರ್ಷ ಅನುಭವದ ನಂತರವೂ ಅವರು ಇಂಗ್ಲಿಷ್‌ನಲ್ಲಿ ನಿರಾಳವಾಗಿ ಪಾಠ ಮಾಡುತ್ತಿರ ಲಿಲ್ಲ. ಇದನ್ನು ಅವರೇ ಅನೇಕ ಬಾರಿ ಹೇಳಿದ್ದುಂಟು, ಇಂಗ್ಲಿಷ್ ಬಿ.ಎ. (ಆನರ್ಸ್) ಎಂದೂ ಅವರ ಆಸಕ್ತಿಯ ಆಯ್ಕೆಯಾಗಿರಲಿಲ್ಲ. ಜಿ.ಎಸ್.ಶಿವರುದ್ರಪ್ಪನವರು ಹೇಳಿದರು ಎಂಬ ಕಾರಣಕ್ಕೆ ಅದಕ್ಕೆ ಸೇರಿದ್ದು. ಅವರಿಗೆ ಡಾಕ್ಟರಾಗಬೇಕು ಎಂಬ ಆಸೆಯಿತ್ತು, ಎಂ.ಎಸ್ಸಿಯನ್ನೂ ಮಾಡಬೇಕೆಂದು ಕೊಂಡಿದ್ದರು. ಆದರೆ ಎರಡಕ್ಕೂ ಪ್ರವೇಶ ಸಿಗದೆ ಸೇರಿದ್ದು ಬಿ.ಎ. (ಆನರ್ಸ್ )ಗೆ. ಇಂಗ್ಲಿಷ್ ಬಗ್ಗೆ ಲಂಕೇಶ್‌ಗೆ ಕೀಳರಿಮೆ ಇತ್ತು. ಇದು ಅವರ ಅಧ್ಯಾಪಕ ವೃತ್ತಿಯ ಕೊನೆಯ ದಿನಗಳವರೆಗೂ ಕಾಡಿತ್ತು.
ಒಂದಷ್ಟು ಕನ್ನಡ ಬಲ್ಲ ವಿದ್ಯಾರ್ಥಿಗಳಿಗೆ ಲಂಕೇಶರ ಬರವಣಿಗೆ ಕನಿಷ್ಠವಾದರೂ ಅರ್ಥ ವಾಗುತ್ತಿತ್ತು. ಉಳಿದವರಿಗೆ ಲಂಕೇಶರು ಅರ್ಥವಾಗುವ ಸಾಧ್ಯತೆ ಇರಲಿಲ್ಲ. ಶೇ.ಎಪ್ಪತ್ತು-ಎಂಬತ್ತರಷ್ಟು ಇರುತ್ತಿದ್ದದ್ದು, ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳಲ್ಲಿ ಕನ್ನಡೇತರರೇ. ಲಂಕೇಶರು ಇವರಿಗೆಲ್ಲ ನಿಗೂಢವಾಗಿಯೇ ಉಳಿಯುತ್ತಿದ್ದರು. ಹಾಗಂತ ಮೋಹನರಾಂ ಬರೆಯುತ್ತಾರೆ.