ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್‌ಗೆ ಪದಾರ್ಪಣೆ ಮಾಡಲು ವೈಭವ್‌ ಸೂರ್ಯವಂಶಿಯ ತಯಾರಿ ಹೇಗಿತ್ತು? ಬಾಲ್ಯದ ಕೋಚ್‌ ಹೇಳಿದ್ದಿದು!

ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೇ ಸಿಕ್ಸರ್‌ ಬಾರಿಸುವ ಮೂಲಕ 14ನೇ ವಯಸ್ಸಿನ ವೈಭವ್‌ ಸೂರ್ಯವಂಶಿ ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೃತ್ತಿ ಜೀವನವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಇದೀಗ ಕೋಚ್ ಮನೀಶ್ ಓಜಾ, ವೈಭವ್‌ ಅವರ ಆಹಾರ ಪದ್ಧತಿಯ ಬಗ್ಗೆ ಪ್ರಮುಖ ಅಂಶವನ್ನು ಬಹಿರಂಗ ಪಡಿಸಿದ್ದಾರೆ. ವೈಭವ್ ಸೂರ್ಯವಂಶಿಗೆ ಮಟನ್ ಮತ್ತು ಪಿಝಾ ತುಂಬಾ ಇಷ್ಟ ಎಂದು ಮನೀಶ್ ಓಜಾ ತಿಳಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಆಹಾರ ಪದ್ದತಿ ಬಗ್ಗೆ ಬಾಲ್ಯದ ಕೋಚ್‌ ಹೇಳಿದ್ದಿದು!

ವೈಭವ್‌ ಸೂರ್ಯವಂಶಿ

Profile Ramesh Kote Apr 20, 2025 6:15 PM

ನವದೆಹಲಿ: ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ, ಲಖನೌ ಸೂಪರ್ ಜಯಂಟ್ಸ್ (Lucknow Super Gaints) ವಿರುದ್ಧ ಕೇವಲ ಎರಡು ರನ್‌ಗಳಿಂದ ಸೋತಿರಬಹುದು, ಆದರೆ ಈ ತಂಡದ 14ರ ವಯಸ್ಸಿನ ಆಟಗಾರ ವೈಭವ್ ಸೂರ್ಯವಂಶಿ (Vaibhan Suryavabshi) ಬಗ್ಗೆ ಇನ್ನೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶನಿವಾರ ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದಿದ್ದ ವೈಭವ್‌ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಪ್ರಭಾವ ಬೀರಿದರು. ಅದರಲ್ಲಿಯೂ ವಿಶೇಷವಾಗಿ ಅವರು ತಾವು ಎದುರಿಸಿದ ಮೊಟ್ಟ ಮೊದಲ ಎಸೆತದಲ್ಲಿಯೇ ಸಿಕ್ಸರ್‌ ಬಾರಿಸಿ ತಮ್ಮ ಐಪಿಎಲ್‌ ವೃತ್ತಿ ಜೀವನವನ್ನು ಭರ್ಜರಿಯಾಗಿ ಆರಂಭಿಸಿದ್ದರು. ಆ ಮೂಲಕ ವಿಶ್ವದ ಕ್ರಿಕೆಟ್‌ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2025ರ ಐಪಿಎಲ್‌ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದ ವೈಭವ್‌ ಸೂರ್ಯವಂಶಿಗೆ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಆಡಲು ಅವಕಾಶ ಲಭಿಸಿತು. ನಾಯಕ ಸಂಜು ಸ್ಯಾಮ್ಸನ್‌ ಗಾಯದಿಂದ ಹೊರ ನಡೆದ ಕಾರಣ ಅವರ ಸ್ಥಾನದಲ್ಲಿ ಇನಿಂಗ್ಸ್‌ ಆರಂಭಿಸಲು ವೈಭವ್‌ಗೆ ಅವಕಾಶ ಲಭಿಸಿತು. ಅದರಂತೆ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಅವರು ಬಳಸಿಕೊಂಡರು. ತಾವು ಎದುರಿಸಿದ ಮೊಟ್ಟ ಮೊದಲ ಎಸೆತದಲ್ಲಿಯೇ ಅವರು ಸ್ಟಾರ್‌ ವೇಗಿ ಶಾರ್ದುಲ್‌ ಠಾಕೂರ್‌ಗೆ ಲಾಂಗ್‌ ಆಫ್‌ ಮೇಲೆ ಪವರ್‌ಫುಲ್‌ ಸಿಕ್ಸರ್‌ ಬಾರಿಸಿದ್ದರು. ಒಟ್ಟಾರೆ ಆಡಿದ ಕೇವಲ 20 ಎಸೆತಗಳಲ್ಲಿ 34 ರನ್‌ಗಳನ್ನು ಸಿಡಿಸಿ ಔಟ್‌ ಆಗಿದ್ದರು. ತಮ್ಮ ಚೊಚ್ಚಲ ಇನಿಂಗ್ಸ್‌ನಲ್ಲಿ ವೈಭವ್‌ 3 ಸಿಕ್ಸರ್‌ ಬಾರಿಸಿದ್ದರು ಎಂಬುದು ವಿಶೇಷ.

RR vs LSG: ಸಿಕ್ಸರ್‌ ಮೂಲಕ ಐಪಿಎಲ್‌ಗೆ ಅದ್ದೂರಿ ಪದಾರ್ಪಣೆ ಮಾಡಿದ ವೈಭವ ಸೂರ್ಯವಂಶಿ!

ವೈಭವ್‌ ಸೂರ್ಯವಂಶಿ ಬಗ್ಗೆ ಅವರ ಬಾಲ್ಯದ ಕೋಚ್‌ ಮನೀಷ್‌ ಓಜಾ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್‌ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಲು ವೈಭವ್‌ ಯಾವ ರೀತಿ ತಯಾರಿ ನಡೆಸಿದ್ದರು ಹಾಗೂ ಆಹಾರ ಪದ್ದತಿ ಹಾಗೂ ಫಿಟ್‌ನೆಸ್‌ ಯಾವ ರೀತಿ ಇತ್ತು ಎಂಬುದನ್ನು ರಿವೀಲ್‌ ಮಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ' ಜೊತೆ ಮಾತನಾಡಿದ ಮನೀಷ್‌ ಓಜಾ, "ಅವರಿಗೆ (ವೈಭವ್‌ ಸೂರ್ಯವಂಶಿ) ಕೋಳಿ ಮತ್ತು ಕುರಿ ಮಾಂಸ ಮಾತ್ರ ಇಷ್ಟ. ಅವರು ಚಿಕ್ಕವರು, ಆದ್ದರಿಂದ ಅವರಿಗೂ ಪಿಝಾ ತುಂಬಾ ಇಷ್ಟ, ಆದರೆ ಈಗ ಅದನ್ನು ತಿನ್ನುವುದಿಲ್ಲ. ನಾವು ಅವರಿಗೆ ಕುರಿ ಮಾಂಸ ಕೊಟ್ಟಾಗ, ಎಷ್ಟೇ ಕೊಟ್ಟರೂ ಅದನ್ನೆಲ್ಲಾ ತಿನ್ನುತ್ತಿದ್ದರು. ಈ ಕಾರಣದಿಂದಲೇ ಅವರು ಸ್ವಲ್ಪ ದಪ್ಪವಾಗಿ ಕಾಣುತ್ತಿದ್ದಾರೆ," ಎಂದು ಹೇಳಿದ್ದಾರೆ.



"ಇದೀಗ ಅವರ ಆಹಾರದಿಂದ ಕುರಿ ಮಾಂಸವನ್ನು ತೆಗೆದುಹಾಕಲಾಗಿದೆ. ಅವರ ಆಹಾರದಲ್ಲಿ ಪಿಝಾ ಕೂಡ ಇಲ್ಲ. ಇದೆಲ್ಲವೂ ಅವರ ಆಟಕ್ಕಾಗಿ, ಅವರ ಫಿಟ್ನೆಸ್ ಉತ್ತಮವಾಗಿ ಇಟ್ಟುಕೊಳ್ಳುವ ಸಲುವಾಗಿ. ಅವರು ಬಹಳ ಎತ್ತರಕ್ಕೆ ಬೆಳೆಯುತ್ತಾರೆ, ಆದರೆ ಅವರು ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕು," ಎಂದು ಮನೀಷ್‌ ಓಜಾ ತಿಳಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು 1.10 ಕೋಟಿ ರೂ.ಗಳಿಗೆ ಖರೀದಿಸಿತ್ತು. ರಾಜಸ್ಥಾನವನ್ನು ಹೊರತುಪಡಿಸಿ, ಹಲವು ಇತರ ತಂಡಗಳು ವೈಭವ್‌ಗಾಗಿ ಪೈಪೋಟಿ ನಡೆಸಿದ್ದವು. ಆದರೆ ರಾಜಸ್ಥಾನ ಕೊನೆಯವರೆಗೂ ದೃಢವಾಗಿ ನಿಂತು ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು.

IPL 2025: ಪಂಜಾಬ್‌ ಪಂದ್ಯಕ್ಕೆ ಆರ್‌ಸಿಬಿ ಲಿಯಾಮ್‌ ಲಿವಿಂಗ್‌ಸ್ಟೋನ್‌ರನ್ನು ಕೈ ಬಿಡಲು ಕಾರಣವೇನು?

"ಅವರು ಭಯಮುಕ್ತ ಬ್ಯಾಟ್ಸ್‌ಮನ್‌. ಅವರು ಬ್ರಿಯಾನ್ ಲಾರಾ ಅವರನ್ನು ಮೆಚ್ಚುತ್ತೇನೆ ಎಂದು ಪದೇ ಪದೇ ಹೇಳಿದ್ದಾರೆ. ಆದರೆ, ಅವರು ಯುವರಾಜ್‌ ಸಿಂಗ್‌ ಹಾಗೂ ಬ್ರಿಯಾನ್‌ ಲಾರಾ ಅವರ ಮಿಶ್ರಣ. ಅವರು ಆಕ್ರಮಣಕಾರಿ ಬ್ಯಾಟಿಂಗ್‌ ಯುವರಾಜ್‌ ಸಿಂಗ್‌ ಅವರ ರೀತಿ ಇದೆ," ಎಂದು ತಿಳಿಸಿದ್ದಾರೆ ವೈಭವ್‌ ಬಾಲ್ಯದ ಕೋಚ್‌.

"ಅವರು ಸದ್ಯ ತುಂಬಾ ಖುಷಿಯಾಗಿದ್ದಾರೆ. ನಿನ್ನೆ (ಶುಕ್ರವಾರ) ಅಭ್ಯಾಸ ಮುಗಿಸಿದ ಬಳಿಕ ವೈಭವ್‌ ನನಗೆ ಕರೆ ಮಾಡಿದ್ದರು ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದದ ಪಂದ್ಯದಲ್ಲಿ ಆಡಲು ನನಗೆ ಅವಕಾಶ ಇದೆ ಎಂದು ದ್ರಾವಿಡ್‌ ಸರ್‌ ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ ತಿಳಿಸಿದೆ ಎಂದು ನನ್ನ ಬಳಿ ಹೇಳಿದ್ದರು. ಶಾಂತವಾಗಿದ್ದು, ನಿನ್ನ ಹಾದಿಯನ್ನು ನೀನು ಆಡಲು ಎಂದು ಸಲಹೆ ನೀಡಿದ್ದೆ. ಮೊದಲನೇ ಎಸೆತ ಸಿಕ್ಸರ್‌ ಹೊಡೆಯಬಹುದಾದರೆ, ಹಿಂಜರಿಯಬೇಡ ಎಂದು ಹೇಳಿದ್ದೆ," ಎಂದು ಮನೀಷ್‌ ಓಜಾ ತಿಳಿಸಿದ್ದಾರೆ.