ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India's Test squad: ಹೇಗಿದ್ದೀತು ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡ?

ಮೊಹಮ್ಮದ್ ಶಮಿ ಅವರ ಹೆಸರು ಕೈಬಿಡುವ ಸಾಧ್ಯತೆ ಹೆಚ್ಚು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಶಮಿ ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐಗೆ ಅನುಮಾನವಿದೆ. ಹೀಗಾಗಿ ಅವರ ಬದಲಿಗೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಆಯ್ಕೆಯಾಗಬಹುದು. ಜಸ್‌ಪ್ರೀತ್‌ ಬುಮ್ರಾ ಅವರ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅವರು ಸರಣಿಯ ಎಲ್ಲ ಪಂದ್ಯಗಳನ್ನು ಆಡುವುದು ಅನುಮಾನ.

ಹೇಗಿದ್ದೀತು ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡ?

Profile Abhilash BC May 24, 2025 10:27 AM

ಮುಂಬಯಿ: ಅನುಭವಿ ಆಟಗಾರರಾದ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಏಕಕಾಲಕ್ಕೆ ಟೆಸ್ಟ್‌ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದರಿಂದ ಭಾರತೀಯ ಟೆಸ್ಟ್‌ ಕ್ರಿಕೆಟ್‌ ಪರಿವರ್ತನೆಯ ಕಾಲಘಟ್ಟದಲ್ಲಿದೆ. ಇನ್ನು ಮುಂದೆ ಯುವ ಆಟಗಾರರ ಸಾರಥ್ಯದಲ್ಲಿ(India's NextGen Test squad) ಮುನ್ನಡೆಯಲಿದೆ. ಜೂನ್‌ನಲ್ಲಿ ನಡೆಯುವ ಇಂಗ್ಲೆಂಡ್‌ ಟೆಸ್ಟ್‌ ಸರಣಿ ಮೊದಲ ಅಗ್ನಿಪರೀಕ್ಷೆಯಾಗಿದೆ. ಇಂದು(ಶನಿವಾರ) ಬಿಸಿಸಿಐ ತಂಡ(India's Test squad) ಪ್ರಕಟಿಸುವ ಸಾಧ್ಯತೆ ಇದೆ. ಸರಣಿಗೆ ತಂಡ(India's Probable 16 in England) ಹೇಗಿದ್ದೀತು, ಯಾರೆಲ್ಲ ಆಡಬಹುದು ಎಂಬ ವರದಿ ಇಲ್ಲಿದೆ.

ಬ್ಯಾಟರ್ಸ್: ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್.

ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರು ಆರಂಭಿಕ ಜೋಡಿಯಾಗಿ ಕಣಕ್ಕಿಳಿಬಹುದು. ಈಗಾಗಲೇ ಈ ಜೋಡಿ ಕಳೆದ ಆಸೀಸ್‌ ಪ್ರವಾಸದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಹೀಗಾಗಿ ಇವರೇ ಇಂಗ್ಲೆಂಡ್‌ ಸರಣಿಯಲ್ಲಿಯೂ ಇನಿಂಗ್ಸ್‌ ಆರಂಭಿಸುವುದು ಖಚಿತ. ಶುಭಮನ್ ಗಿಲ್ 3 ನೇ ಸ್ಥಾನದಲ್ಲಿ ಆಡಬಹುದು. ಒಂದೊಮ್ಮೆ ಅವರು ವಿರಾಟ್ ಕೊಹ್ಲಿ ಸ್ಥಾನದಲ್ಲಿ ಬ್ಯಾಟಿಂಗ್‌ ನಡೆಸಿದರೂ ಅಚ್ಚರಿಯಿಲ್ಲ. ಆಗ ಮೂರನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್‌ ಸಾಯಿ ಸುದರ್ಶನ್‌ ಕಣಕ್ಕಿಳಿಯಬಹುದು.

ವಿಕೆಟ್‌ ಕೀಪರ್‌: ರಿಷಭ್ ಪಂತ್

ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ರಿಷಭ್‌ ಪಂತ್‌ ವೈಫಲ್ಯ ಕಂಡಿದ್ದರೂ ಟೆಸ್ಟ್ ಸ್ವರೂಪದಲ್ಲಿ ಅವರು ಮೊದಲ ಆಯ್ಕೆಯ ಕೀಪರ್ ಆಗಿದ್ದಾರೆ. ವಿದೇಶಗಳಲ್ಲಿ ಪಂತ್‌ ಅವರ ಟೆಸ್ಟ್‌ ದಾಖಲೆ ಕೂಡ ಉತ್ತಮ ಮಟ್ಟಲ್ಲಿದೆ. ಮೀಸಲು ಕೀಪರ್‌ ಆಗಿ ಧ್ರುವ ಜುರೆಲ್‌ ಅವಕಾಶ ಪಡೆಯಬಹುದು.

ಸ್ಪಿನ್ನರ್: ಜಡೇಜಾ/ ಸುಂದರ್‌

ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಪೈಪೋಟಿ ನಡೆಯಲಿದೆ. ಗಂಭೀರ್ ಭಾರತ ತಂಡದೊಂದಿಗೆ ತಮ್ಮ ಅಲ್ಪಾವಧಿಯ ಅವಧಿಯಲ್ಲಿ ಸುಂದರ್ ಅವರತ್ತ ಒಲವು ತೋರಿದ್ದಾರೆ. ಆದರೆ ಜಡೇಜಾ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು. ಕುಲದೀಪ್ ಯಾದವ್ ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

ವೇಗಿಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ನಿತೀಶ್ ಕುಮಾರ್ ರೆಡ್ಡಿ

ಮೊಹಮ್ಮದ್ ಶಮಿ ಅವರ ಹೆಸರು ಕೈಬಿಡುವ ಸಾಧ್ಯತೆ ಹೆಚ್ಚು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಶಮಿ ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐಗೆ ಅನುಮಾನವಿದೆ. ಹೀಗಾಗಿ ಅವರ ಬದಲಿಗೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಆಯ್ಕೆಯಾಗಬಹುದು. ಜಸ್‌ಪ್ರೀತ್‌ ಬುಮ್ರಾ ಅವರ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅವರು ಸರಣಿಯ ಎಲ್ಲ ಪಂದ್ಯಗಳನ್ನು ಆಡುವುದು ಅನುಮಾನ.

ಇದನ್ನೂ ಓದಿ Mohammed Shami: ಇಂಗ್ಲೆಂಡ್‌ ಟೆಸ್ಟ್‌ಗೆ ವೇಗಿ ಶಮಿ ಆಯ್ಕೆ ಅನುಮಾನ

ಮೀಸಲು ಆಟಗಾರರು

ಅಭಿಮನ್ಯು ಈಶ್ವರನ್, ವಾಷಿಂಗ್ಟನ್ ಸುಂದರ್, ಕರುಣ್ ನಾಯರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್.

ಭಾರತ ಸಂಭಾವ್ಯ ಆಡುವ ಬಳಗ

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್.