Kodishri Bhavishya: ಜಲ, ವಾಯು ಗಂಡಾಂತರ; ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯದಲ್ಲಿ ಏನೇನಿದೆ?
ಬೆಳಗಾವಿಯಲ್ಲಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದ್ದಾರೆ. ಮತ್ತೆ ವಾಯುರೂಪದಲ್ಲಿ ಭಾದೆ ಅಪ್ಪಳಿಸಲಿದೆ. 5 ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ.

ಬೆಳಗಾವಿ: ದೇಶಾದ್ಯಂತ ಮತ್ತೆ ಕೋವಿಡ್ (Covid-19) ಪ್ರಕರಣ ಹೆಚ್ಚಾಗುತ್ತಿದ್ದು, ಈ ಬಗ್ಗೆ ಬೆಳಗಾವಿಯಲ್ಲಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದ್ದಾರೆ (Kodishri Bhavishya). ಮತ್ತೆ ವಾಯುರೂಪದಲ್ಲಿ ಭಾದೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. 5 ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ. ʼʼಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ. ಲೋಕಕ್ಕೆ ವಾಯು, ಜಲದಿಂದ 5 ವರ್ಷ ಗಂಡಾಂತರವಿದೆʼʼ ಎಂದು ಅವರು ಹೇಳಿದ್ದಾರೆ.
ʼʼ5 ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಎದುರಾಗಲಿದ್ದು, ಜನರು ಹುಷಾರಾಗಿರೋದು ಒಳ್ಳೇಯದು. ಹಿಮಾಲಯ ಕರಗಿ ದಿಲ್ಲಿಯವರೆಗೆ ತಲುಪಲಿದೆ. ಅಲ್ಲದೆ ಮೇಘಸ್ಪೋಟ ಆಗುವ ಸಾಧ್ಯತೆಗಳಿವೆ. ಭೂಕಂಪ ಸಂಭವಿಸಲಿದೆ. ಮತೀಯ ಗಲಭೆಗಳು ಹೆಚ್ಚಾಗಲಿವೆʼʼ ಎಂದು ಕೋಡಿಶ್ರೀ ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Dengue Case: ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣ- ಪೋಷಕರೇ ಎಚ್ಚರ !
ಯುದ್ಧ ಭೀತಿ
ರಾಜಕೀಯವಾಗಿ ಅರಸನರಮನೆಗೆ ಕಾರ್ಮೋಡ ಕವಿದಿತ್ತು ಎಂದು ಸ್ವಾಮೀಜಿ ಮಾರ್ಮಿಕವಾಗಿ ನುಡಿದಿದ್ದಾರೆ. ʼʼಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದ್ದು, ಜನರಲ್ಲಿ ಅಶಾಂತಿ ಹೆಚ್ಚಾಗಲಿದೆ. ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ರಚನೆಯಾಗುತ್ತವೆʼʼ ಎಂದು ಹೇಳಿದ್ದಾರೆ.
ರಾಜ್ಯ ರಾಜಕೀಯ ಹೇಗಿರಲಿದೆ?
ʼʼಅನೇಕ ರಾಜಕೀಯ ಮುಖಂಡರಿಗೆ ಸಾವಿದೆ ಹಾಗೂ ಭಯ ಕಾಡಲಿದೆ. ಅದಾಗ್ಯೂ ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಎನಾಗುತ್ತೆ ನೋಡಬೇಕುʼʼ ಎಂದು ಸ್ವಾಮೀಜಿ ತಿಳಿಸಿದ್ದಾರೆ.