IPL 2025: ಆರ್‌ಸಿಬಿ ತವರಿನ ಸತತ ಸೋಲಿಗೆ ಕಾರಣವೇನು?
ತವರಿನಾಚೆ ಉತ್ತಮವಾಗಿ ಆಡುವ ಆರ್‌ಸಿಬಿ ತವರಿಗೆ ಮರಳಿದ ತಕ್ಷಣ ನೀರಸ ಪ್ರದರ್ಶನ ತೋರುತ್ತಿದೆ. ಆರ್‌ಸಿಬಿ ಸತತ ಟಾಸ್ ಸೋಲುತ್ತಿರುವುದು ಕೂಡ ಸೋಲಿಗೆ ಬಲವಾದ ಕಾರಣ ಎನ್ನಲಡ್ಡಿಯಿಲ್ಲ. ಹೌದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಗಳ ಇತಿಹಾಸವನ್ನೊಮ್ಮೆ ಕೆದಕಿದರೆ ಇಲ್ಲಿ ಟಾಸ್ ಗೆದ್ದು ಚೇಸಿಂಗ್ ನಡೆಸಿದ ತಂಡಗಳೇ ಹೆಚ್ಚು ಗೆಲುವು ಸಾಧಿಸಿದೆ.


ಬೆಂಗಳೂರು: ಆರ್‌ಸಿಬಿ(RCB)ಗೆ ಈ ವರ್ಷ ತವರಿನ ಅಂಗಳದಲ್ಲಿ ಗೆಲುವು(IPL 2025) ಒಲಿಯುವಂತೆ ಕಾಣುತ್ತಿಲ್ಲ. ಆಡಿದ ಮೂರು ಪಂದ್ಯಗಳಲ್ಲಿ ಸೋತು ತವರಿನ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಇದೇ ವರ್ಷ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಮಹಿಳಾ ಆರ್‌ಸಿಬಿ ತಂಡ ತವರಿನ ಎಲ್ಲ ಪಂದ್ಯದಲ್ಲಿ ಸೋಲು ಕಂಡಿತ್ತು. ಸೋಲಿನ ಬಳಿಕ ನಾಯಕಿ ಸ್ಮೃತಿ ಮಂಧನಾ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. “ನಾನು ಕ್ಷಮೆ ಕೇಳುತ್ತೇನೆ, ಪ್ರತಿ ಪಂದ್ಯಕ್ಕೂ ತುಂಬಾ ಮಂದಿ ಬಂದು ಬೆಂಬಲಿಸಿದ್ದೀರಿ. ಆದರೆ ಒಂದು ಪಂದ್ಯವೂ ಗೆಲ್ಲಲಾಗಲಿಲ್ಲ ಎಂದು ಹೇಳಿದ್ದರು. ಇದೀಗ ಪುರುಷರ ತಂಡದ ನಾಯಕ ರಜತ್ ಪಾಟೀದಾರ್ ಕೂಡ ಇಂತಹದ್ದೇ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಂತಿದ್ದಾರೆ.
ಟಾಸ್ ಸೋಲು
ತವರಿನಾಚೆ ಉತ್ತಮವಾಗಿ ಆಡುವ ಆರ್‌ಸಿಬಿ ತವರಿಗೆ ಮರಳಿದ ತಕ್ಷಣ ನೀರಸ ಪ್ರದರ್ಶನ ತೋರುತ್ತಿದೆ. ಆರ್‌ಸಿಬಿ ಸತತ ಟಾಸ್ ಸೋಲುತ್ತಿರುವುದು ಕೂಡ ಸೋಲಿಗೆ ಬಲವಾದ ಕಾರಣ ಎನ್ನಲಡ್ಡಿಯಿಲ್ಲ. ಹೌದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಗಳ ಇತಿಹಾಸವನ್ನೊಮ್ಮೆ ಕೆದಕಿದರೆ ಇಲ್ಲಿ ಟಾಸ್ ಗೆದ್ದು ಚೇಸಿಂಗ್ ನಡೆಸಿದ ತಂಡಗಳೇ ಹೆಚ್ಚು ಗೆಲುವು ಸಾಧಿಸಿದೆ. ಹೀಗಾಗಿ ಆರ್‌ಸಿಬಿ ಸೋಲಿಗೆ ಟಾಸ್ ಕೂಡ ಒಂದು ಪ್ರಮುಖ ಕಾರಣ.
ಅತಿಯಾದ ಆತ್ಮವಿಶ್ವಾಸ
ಇನ್ನೊಂದೆಡೆ ತಂಡದ ಅತಿಯಾದ ಆತ್ಮವಿಶ್ವಾಸ ಕೂಡ ಸೋಲಿಗೆ ಕಾರಣವಾಗುತ್ತಿರುವಂತೆ ಕಾಣುತ್ತಿದೆ. ಆಟಗಾರರು ತವರಿನಲ್ಲಿ ಸರಿಯಾದ ಅಭ್ಯಾಸ ನಡೆಸದೆ ಪಂದ್ಯವನ್ನಾಡುತ್ತಿರುವಂತೆ ಕಾಣುತ್ತಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಎಷ್ಟು ಕಳಪೆ ಮಟ್ಟದಿಂದ ಕೂಡಿತ್ತು ಎನ್ನುವುದಕ್ಕೆ ತಂಡದ ಇನಿಂಗ್ಸ್‌ನಲ್ಲಿದ್ದ ಡಾಟ್ ಬಾಲ್‌ಗಳೇ ಸಾಕ್ಷಿ. 14 ಓವರ್‌ಗಳ ಪಂದ್ಯದಲ್ಲಿ(84 ಎಸೆತ) ಆರ್‌ಸಿಬಿ ಒಟ್ಟು 43 ಡಾಟ್ ಬಾಲ್‌ಗಳನ್ನು ಆಡಿತು.
ಇನ್ನೊಂದೆಡೆ ಗೆದ್ದರೂ, ಸೋತರೂ ಅಭಿಮಾನಿಗಳ ಬೆಂಬಲ ಮಾತ್ರ ಕಿಂಚಿತ್ತು ಕಡಿಮೆಯಾಗಲ್ಲ ಎಂಬ ಆಟಗಾರ ದೃಢ ನಂಬಿಕೆ ಕೂಡ ತಂಡದ ಹಿನ್ನಡೆಗೆ ಕಾರಣವಾದಂತಿದೆ.
ಇದನ್ನೂ ಓದಿ IPL 2025: ಸೋಲಿನಲ್ಲೂ ದಾಖಲೆ ಬರೆದ ಆರ್‌ಸಿಬಿ!
ಆರ್‌ಸಿಬಿಗೆ ಇನ್ನು ತವರಿನಲ್ಲಿ 4 ಪಂದ್ಯಗಳು ಬಾಕಿ ಉಳಿದಿದೆ. ಈ ಪೈಕಿ ಕನಿಷ್ಠ ಒಂದು ಪಂದ್ಯಗಳನ್ನಾದರೂ ತಂಡ ಗೆಲ್ಲಲಿ ಎಂದು ಅಭಿಮಾನಿಗಳು ದೇವರದಲ್ಲಿ ಪ್ರಾರ್ಥಿಸುವಂತಾಗಿದೆ.