KKR vs RR: ದುರ್ಬಲ ರಾಜಸ್ಥಾನ್ ವಿರುದ್ಧ ಕೆಕೆಆರ್ ಕಾದಾಟ
ರಾಜಸ್ಥಾನ್ ತಂಡಕ್ಕೆ ಈ ಬಾರಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಗೆಲುವು, 8ರಲ್ಲಿ ಸೋತಿರುವ ರಾಜಸ್ಥಾನ್ ಈಗಾಗಲೆ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಾದರೂ ಗೆದ್ದು ಕನಿಷ್ಠ ಕೊನೇ ಸ್ಥಾನದಿಂದ ಪಾರಾಗುವ ಅವಕಾಶವಷ್ಟೇ ರಾಜಸ್ಥಾನ್ ಮುಂದಿದೆ.


ಕೋಲ್ಕತಾ: ಪ್ಲೇ-ಆಫ್ ಪ್ರವೇಶ ಪಡೆಯಲು ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಅಜಿಂಕ್ಯ ರಹಾನೆ(Ajinkya Rahane) ಸಾರಥ್ಯದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ತವರಿನಲ್ಲಿ ಭಾನುವಾರ ನಡೆಯುವ ಐಪಿಎಲ್(IPL 2025) 18ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್(KKR vs RR) ವಿರುದ್ಧ ಕಣಕ್ಕಿಳಿಯಲಿದೆ. ಇದು ಹಗಲು ಪಂದ್ಯವಾಗಿದೆ. ಕೆಕೆಆರ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರುವ ಹಂಬಲದಲ್ಲಿದ್ದರೆ, ಈಗಾಗಲೆ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿರುವ ರಾಜಸ್ಥಾನ್‌ಗೆ ಪಡೆ ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿದೆ.
ಕೆಕೆಆರ್ ತಂಡ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 5 ಸೋಲಿನೊಂದಿಗೆ 9 ಅಂಕ ಕಲೆಹಾಕಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸುವ ಮೂಲಕ ಪ್ಲೇಆಫ್ ಪ್ರವೇಶವನ್ನೂ ಜೀವಂತವಿರಿಸುವ ಅವಕಾಶ ಕೆಕೆಆರ್ ಮುಂದಿದೆ.
ಮತ್ತೊಂದೆಡೆ ರಾಜಸ್ಥಾನ್ ತಂಡಕ್ಕೆ ಈ ಬಾರಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಗೆಲುವು, 8ರಲ್ಲಿ ಸೋತಿರುವ ರಾಜಸ್ಥಾನ್ ಈಗಾಗಲೆ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಾದರೂ ಗೆದ್ದು ಕನಿಷ್ಠ ಕೊನೇ ಸ್ಥಾನದಿಂದ ಪಾರಾಗುವ ಅವಕಾಶವಷ್ಟೇ ರಾಜಸ್ಥಾನ್ ಮುಂದಿದೆ. ಜತೆಗೆ ಇತರ ಕೆಲ ತಂಡಗಳ ಪ್ಲೇಆಫ್ ಲೆಕ್ಕಾಚಾರವನ್ನು ತಪ್ಪಿಸಲು ಪ್ರಯತ್ನಿಸಬಹುದಾಗಿದೆ. ಹರಾಜಿನಲ್ಲಿ ವಿದೇಶಿ ಆಟಗಾರರನ್ನು ಕೈ ಬಿಟ್ಟು ದೇಶೀಯ ಆಟಗಾರರಿಗಷ್ಟೇ ಮಣೆ ಹಾಕಿದ್ದು ರಾಜಸ್ಥಾನ್ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ.
ಮುಖಾಮುಖಿ
ರಾಜಸ್ಥಾನ್ ಮತ್ತು ಕೆಕೆಆರ್ ತಂಡಗಳು ಇದುವರೆಗಿನ ಐಪಿಎಲ್‌ನಲ್ಲಿ 31 ಪಂದ್ಯಗಳನ್ನಾಡಿದ್ದು, ಈ ಪೈಕಿ ಕೆಕೆಆರ್ 15 ಪಂದ್ಯ ಗೆದ್ದಿದ್ದರೆ, ರಾಜಸ್ಥಾನ್ 14 ಪಂದ್ಯ ಜಯಿಸಿದೆ. 2 ಪಂದ್ಯ ಫಲಿತಾಂಶ ಕಂಡಿಲ್ಲ. ಹಾಲಿ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಕೆಕೆಆರ್ 8 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು.
ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ 4 ಸಾವಿರ ರನ್ ಪೂರೈಸಿ ಎಲೈಟ್ ಪಟ್ಟಿ ಸೇರಿದ ಬಟ್ಲರ್
ಸಂಭಾವ್ಯ ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿ.ಕೀ.), ಶಿಮ್ರಾನ್ ಹೆಟ್ಮೆಯರ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಫಜಲ್ಹಕ್ ಫಾರೂಕಿ.
ಕೆಕೆಆರ್: ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರೋವ್ಮನ್ ಪೊವೆಲ್, ಹರ್ಷಿತ್ ರಾಣಾ, ಅನುಕುಲ್ ರಾಯ್, ವರುಣ್ ಚಕ್ರವರ್ತಿ.