PBKS vs MI: ಎಬಿಡಿ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್
ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ 26 ಎಸೆತಗಳಿಂದ 44 ರನ್ ಬಾರಿಸಿ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ರೋಹಿತ್ ಈ ಪಂದ್ಯದಲ್ಲಿ 8 ರನ್‌ಗೆ ವಿಕೆಟ್ ಕಳೆದುಕೊಂಡರು. ಜಾನಿ ಬೇರ್‌ಸ್ಟೋ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 38 ಬಾರಿಸಿದರು.


ಅಹಮದಾಬಾದ್: ಪಂಜಾಬ್ ಕಿಂಗ್ಸ್ ವಿರುದ್ಧದ ಕ್ವಾಲಿಫೈಯರ್ -2(MI vs PBKS Qualifier 2) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(PBKS vs MI) ತಂಡದ ಸೂರ್ಯಕುಮಾರ್ ಯಾದವ್(Suryakumar Yadav) ಅವರು ಆರ್‌ಸಿಬಿ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್(Ab de Villiers) ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಸೂರ್ಯಕುಮಾರ್ 15 ರನ್ ಬಾರಿಸುತ್ತಿದ್ದಂತೆ ಆರಂಭಿಕನಲ್ಲದೆ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ವಿಲಿಯರ್ಸ್ ಅವರ ಹೆಸರಿನಲ್ಲಿತ್ತು. ಎಬಿಡಿ 2016ರ ಆವೃತ್ತಿಯಲ್ಲಿ ಆಡಿದ 16 ಇನಿಂಗ್ಸ್‌ಗಳಲ್ಲಿ 1 ಶತಕ ಹಾಗೂ 6 ಅರ್ಧಶತಕ ಸಹಿತ 687 ಗಳಿಸಿದ್ದರು. ಆದರೆ ಇದೀಗ ಈ ದಾಖಲೆಯನ್ನು ಸೂರ್ಯ ಮೆಟ್ಟಿ ನಿಂತಿದ್ದಾರೆ.
ಐಪಿಎಲ್ ಸೀಸನ್‌ನಲ್ಲಿ ಆರಂಭಿಕರಲ್ಲದೆ ಹೆಚ್ಚಿನ ರನ್
691* ಸೂರ್ಯಕುಮಾರ್ ಯಾದವ್ (2025)
687 ಎಬಿ ಡಿವಿಲಿಯರ್ಸ್ (2016)
684 ರಿಷಭ್ ಪಂತ್ (2018)
622 ಕೇನ್ ವಿಲಿಯಮ್ಸನ್ (2018)
605 ಸೂರ್ಯಕುಮಾರ್ ಯಾದವ್ (2023)
🚨 SURYA CREATED HISTORY 🚨
— Tanuj (@ImTanujSingh) June 1, 2025
- Suryakumar Yadav becomes the first non opener player to score 700 runs in an IPL season in History. 🤯 pic.twitter.com/loR4CvGoWo
ಮಳೆಯಿಂದ ವಿಳಂಬವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಮುಂಬೈ ಆರಂಭಿಕ ಆಘಾತದ ಹೊರತಾಗಿತೂ ಉತ್ತಮ ರನ್ ಕಲೆ ಹಾಕಿದೆ. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ರೋಹಿತ್ ಈ ಪಂದ್ಯದಲ್ಲಿ 8 ರನ್‌ಗೆ ವಿಕೆಟ್ ಕಳೆದುಕೊಂಡರು. ಜಾನಿ ಬೇರ್‌ಸ್ಟೋ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 38 ಬಾರಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ 26 ಎಸೆತಗಳಿಂದ 44 ರನ್ ಬಾರಿಸಿ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು.
ಇದನ್ನೂ ಓದಿ IPL 2025: ʻಜಸ್‌ಪ್ರೀತ್ ಬುಮ್ರಾ ಇರುವವರೆಗೂ ಪಂದ್ಯ ಮುಗಿಯಲ್ಲʼ-ಎಬಿ ಡಿ ವಿಲಿಯರ್ಸ್!
ಉಭಯ ಆಡುವ ಬಳಗ
ಮುಂಬೈ: ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ರೀಸ್ ಟಾಪ್ಲೆ.
ಪಂಜಾಬ್: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಒಮರ್ಜಾಯ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.