RCB vs CSK: ಮಳೆ ಭೀತಿ ಮಧ್ಯೆ ಇಂದು ಆರ್‌ಸಿಬಿ-ಚೆನ್ನೈ ಕಾದಾಟ
ತರಿನಲ್ಲಿ ಆರಂಭಿಕ 3 ಪಂದ್ಯಗಳಲ್ಲಿ ಸೋತಿದ್ದ ಆರ್‌ಸಿಬಿ, ರಾಜಸ್ಥಾನ ವಿರುದ್ಧದ ಗೆಲುವಿನೊಂದಿಗೆ ಮನೆಯಂಗಳದಲ್ಲೂ ಜಯದ ಖಾತೆ ತೆರೆದಿತ್ತು. ಆ ಬಳಿಕ ಸತತ ಗೆಲುವು ಸಾಧಿಸಿರುವ ಆರ್‌ಸಿಬಿ ಈ ಬಾರಿ ತವರಿನಲ್ಲೂ ಗೆಲುವಿನ ಓಟ ಮುಂದುವರಿಸುವುದು ಆರ್‌ಸಿಬಿ ಹಂಬಲವಾಗಿದೆ.


ಬೆಂಗಳೂರು: ಇಂದು(ಮೇ 3, ಶನಿವಾರ) ನಡೆಯುವ ಐಪಿಎಲ್(IPL 2025) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs CSK) ಮತ್ತು ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ಕಿಂಗ್ಸ್ ತಂಡಗಳು ಚಿನ್ನಸ್ವಾಮಿ ಸ್ಟೇಡಿಂನಲ್ಲಿ(M. Chinnaswamy Stadium) ಮುಖಾಮುಖಿ ಆಗಲಿವೆ. ಪಾಟೀದಾರ್ ಪಡೆ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಳ್ಳುವ ಹಂಬಲದಲ್ಲಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು ಪಂದ್ಯ ನಡೆಯುವುದೇ ಅನುಮಾನ ಎನ್ನುವಂತಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿತ್ತು. ಶನಿವಾರ ಕೂಡ ಹವಾಮಾನ ಇಲಾಖೆ ಭಾರೀ ಮಳೆ ಎಚ್ಚರಿಕೆ ನೀಡಿದೆ.
ಹಾಲಿ ಆವೃತ್ತಿಯಲ್ಲಿ ಪಂಜಾಬ್ ವಿರುದ್ಧದ ಪಂದ್ಯ ಮಳೆ ಅಡಚಣೆಯಿಂದ ತಲಾ 14 ಓವರ್ಗಳಿಗೆ ಕಡಿತಗೊಂಡಿತ್ತು. ಸಿಎಸ್ಕೆ ನಡುವಿನ ಪಂದ್ಯವೂ ಸಂಪೂರ್ಣ ರದ್ದಾಗುವ ಸಾಧ್ಯತೆ ಕಡಿಮೆ. ಏಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆ ನೀರು ಇಂಗಿಸುವ ಸಬ್ಏರ್ ಸಿಸ್ಟಮ್ ಇದೆ. ಆದರೆ ಮಳೆ ಬಿಡುವು ನೀಡಿದರೆ ಮಾತ್ರ ಇದು ಸಾಧ್ಯ.
ತರಿನಲ್ಲಿ ಆರಂಭಿಕ 3 ಪಂದ್ಯಗಳಲ್ಲಿ ಸೋತಿದ್ದ ಆರ್‌ಸಿಬಿ, ರಾಜಸ್ಥಾನ ವಿರುದ್ಧದ ಗೆಲುವಿನೊಂದಿಗೆ ಮನೆಯಂಗಳದಲ್ಲೂ ಜಯದ ಖಾತೆ ತೆರೆದಿತ್ತು. ಆ ಬಳಿಕ ಸತತ ಗೆಲುವು ಸಾಧಿಸಿರುವ ಆರ್‌ಸಿಬಿ ಈ ಬಾರಿ ತವರಿನಲ್ಲೂ ಗೆಲುವಿನ ಓಟ ಮುಂದುವರಿಸುವುದು ಆರ್‌ಸಿಬಿ ಹಂಬಲವಾಗಿದೆ.
ಸಾಲ್ಟ್ ಕಣಕ್ಕೆ
ಅನಾರೋಗ್ಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಫಿಲ್ ಸಾಲ್ಟ್ ಈ ಪಂದ್ಯದಲ್ಲಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಶುಕ್ರವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಕೂಡ ನಡೆಸಿದ್ದರು.
ಇದನ್ನೂ ಓದಿ IPL 2025 Points Table: ಗುಜರಾತ್ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ತಂಡ ಆರ್‌ಸಿಬಿ
ಸಂಭಾವ್ಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್/ ಜಾಕೋಬ್ ಬೆಥೆಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮ್ಯಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜಾಶ್ ಹೇಝಲ್‌ವುಡ್, ಯಶ್ ದಯಾಳ್
ಚೆನ್ನೈ ಸೂಪರ್ ಕಿಂಗ್ಸ್: ಶೇಖ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ದೀಪಕ್ ಹೂಡ, ಎಂಎಸ್ ಧೋನಿ (ನಾಯಕ, ವಿ.ಕೀ), ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತೀಶ ಪತಿರಾಣ.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.