Donald Trump: ಟ್ರಂಪ್ ಹೇಳಿದ ಆ 'ದೊಡ್ಡ, ಅತ್ಯಂತ ಗೌರವಾನ್ವಿತ ದೇಶ' ಯಾವುದು? ಆ ರಾಷ್ಟ್ರದ ಜೊತೆ ನಡೆಯಲಿರುವ ಮಾತುಕತೆ ಏನು?
ಅಮೆರಿಕ ಮತ್ತು ಚೀನಾ ನಡುವೆ ಸುಂಕ ಸಮರ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕವು ಪ್ರಮುಖ ದೇಶಗಳೊಂದಿಗೆ ಶುಕ್ರವಾರ ವ್ಯಾಪಾರ ಒಪ್ಪಂದದ ಕುರಿತು ಘೋಷಣೆ ಮಾಡಲಿದೆ. ಇದಕ್ಕಾಗಿ ಓವಲ್ ಕಚೇರಿಯಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗುರುವಾರ ಬೆಳಗ್ಗೆ ತಿಳಿಸಿದ್ದಾರೆ. ಈ ನಡುವೆ ಅವರು ತನ್ನ ಸುಂಕ ನೀತಿಯನ್ನು ವಿರೋಧಿಸಿರುವ ಚೀನಾವನ್ನು ಲೇವಡಿ ಮಾಡಿದ್ದು, ವಿಶ್ವದ ಅತ್ಯಂತ ದೊಡ್ಡ ಗೌರವಾನ್ವಿತ ದೇಶದೊಂದಿಗೂ ಮಾತುಕತೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.


ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ (China) ನಡುವೆ ಸುಂಕ ಸಮರ (Tariff war) ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕವು ಪ್ರಮುಖ ದೇಶಗಳೊಂದಿಗೆ ಶುಕ್ರವಾರ ವ್ಯಾಪಾರ ಒಪ್ಪಂದದ ಕುರಿತು ಘೋಷಣೆ ಮಾಡಲಿದೆ. ಇದಕ್ಕಾಗಿ ಓವಲ್ ಕಚೇರಿಯಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ (Donald Trump) ಟ್ರಂಪ್ ಗುರುವಾರ ಬೆಳಗ್ಗೆ ತಿಳಿಸಿದ್ದಾರೆ. ಈ ನಡುವೆ ಅವರು ತನ್ನ ಸುಂಕ ನೀತಿಯನ್ನು ವಿರೋಧಿಸಿರುವ ಚೀನಾವನ್ನು ಲೇವಡಿ ಮಾಡಿದ್ದು, ವಿಶ್ವದ ಅತ್ಯಂತ ದೊಡ್ಡ ಗೌರವಾನ್ವಿತ ದೇಶದೊಂದಿಗೂ ಮಾತುಕತೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.
ಈ ವಾರಾಂತ್ಯದಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ ಮತ್ತು ಚೀನಾ ಪ್ರತಿನಿಧಿಗಳು ಭೇಟಿಯಾಗಿ ಸುಂಕ ನೀತಿಯ ಕುರಿತು ಚರ್ಚೆ ನಡೆಸುವ ಮುನ್ನ ಟ್ರಂಪ್ ಅವರು ದೇಶದ ಹೆಸರನ್ನು ಉಲ್ಲೇಖಿಸದೆ ಮುಂದೆ ದೊಡ್ಡ ಅತ್ಯಂತ ಗೌರವಾನ್ವಿತ ದೇಶದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದ ನಡೆಯಲಿದೆ ಎಂದು ಹೇಳಿದ್ದಾರೆ. ಇದು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸುತ್ತಿರುವ ಸುಂಕ ಸಮರವನ್ನು ಪರಿಹರಿಸುವ ಮೊದಲ ಹೆಜ್ಜೆಯಾಗಬಹುದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಈ ಕುರಿತು ಟ್ರುತ್ ನಲ್ಲಿ ಹೇಳಿದ್ದು, ಶುಕ್ರವಾರ ಅಮೆರಿಕ ಮತ್ತು ಬ್ರಿಟನ್ ನಡುವಿನ ವ್ಯಾಪಾರ ಒಪ್ಪಂದವನ್ನು ಘೋಷಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ದೊಡ್ಡ ಮತ್ತು ಅತ್ಯಂತ ಗೌರವಾನ್ವಿತ ದೇಶದ ಪ್ರತಿನಿಧಿಗಳು ಅಮೆರಿಕದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದ ನಡೆಸಲಿದ್ದಾರೆ. ಇದಕ್ಕಾಗಿ ಓವಲ್ ಆಫೀಸ್ ಸಮ್ಮೇಳನ ನಡೆಯಲಿದೆ ಎಂದು ಟ್ರಂಪ್ ಅವರು ಗುರುವಾರ ಟ್ರೂತ್ ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಇದರಲ್ಲಿ ಯಾವ ದೇಶಗಳು ಭಾಗಿಯಾಗಲಿವೆ ಎಂದು ಟ್ರಂಪ್ ಹೇಳಿಲ್ಲ. ಜಾಗತಿಕವಾಗಿ ದಾಖಲೆ ಪ್ರಮಾಣದಲ್ಲಿ ಸುಂಕ ಹೆಚ್ಚಳ ಮಾಡಿರುವ ಅಮೆರಿಕ ಇದೆ ಮೊದಲ ಒಪ್ಪಂದವನ್ನು ನಡೆಸಲಿದೆ. ಅಮೆರಿಕ ಅಧ್ಯಕ್ಷರು ಏಪ್ರಿಲ್ 2 ರಂದು ಹೆಚ್ಚಿನ ದೇಶಗಳ ಮೇಲೆ ಶೇ. 10ರಷ್ಟು ಸುಂಕವನ್ನು ವಿಧಿಸಿದ ಬಳಿಕ ಟ್ರಂಪ್ ಅವರ ಉನ್ನತ ಅಧಿಕಾರಿಗಳು ವ್ಯಾಪಾರ ಪಾಲುದಾರರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಜೊತೆಗೆ ಅನೇಕ ವ್ಯಾಪಾರ ಪಾಲುದಾರರಿಗೆ ಹೆಚ್ಚಿನ ಸುಂಕ ದರಗಳನ್ನು ವಿಧಿಸಲಾಗಿದೆ. ಬಳಿಕ ಹೆಚ್ಚುವರಿ ಸುಂಕ ಜಾರಿಯನ್ನು 90 ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ.
ಆಟೋ, ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಶೇ. 25, ಕೆನಡಾ ಮತ್ತು ಮೆಕ್ಸಿಕೊ ಮೇಲೆ ಶೇ. 25 ಮತ್ತು ಚೀನಾದ ಮೇಲೆ ಶೇ. 145ರಷ್ಟು ಸುಂಕವನ್ನು ಅಮೆರಿಕ ಘೋಷಣೆ ಮಾಡಿದೆ. ಉನ್ನತ ಆಡಳಿತ ಅಧಿಕಾರಿಗಳು ಮುಂದಿನ ಎರಡು ವಾರಗಳಲ್ಲಿ ಸಂಭಾವ್ಯ ವ್ಯಾಪಾರ ಒಪ್ಪಂದಗಳನ್ನು ಪರಿಶೀಲಿಸಲಿದ್ದು ಯಾವುದನ್ನು ಸ್ವೀಕರಿಸಬೇಕೆಂದು ನಿರ್ಧರಿಸಲಿದ್ದಾರೆ. ಕಳೆದ ವಾರ ಭಾರತ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನೊಂದಿಗೆ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಇದನ್ನೂ ಓದಿ: Donald Trump: "ಎರಡೂ ದೇಶಗಳು ಜವಾಬ್ದಾರಿಯುತವಾಗಿ ನಿರ್ಣಯ ಕೈಗೊಳ್ಳಿ" ; ಭಾರತ ಪಾಕ್‌ಗೆ ಅಮೆರಿಕ ಸೂಚನೆ
ಈ ನಡುವೆ ಅವರು ದೊಡ್ಡ ಮತ್ತು ಅತ್ಯಂತ ಗೌರವಾನ್ವಿತ ದೇಶದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದದ ಘೋಷಣೆಯನ್ನು ಟೀಕಿಸಿದ್ದಾರೆ. "ಡೀಲ್‌ಮೇಕರ್-ಇನ್-ಚೀಫ್" ಎಂದು ದೀರ್ಘಕಾಲದಿಂದ ತನ್ನನ್ನು ತಾನು ಸಮರ್ಥಿಸಿಕೊಂಡಿರುವ ಟ್ರಂಪ್, ಬಹು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ಮಾತುಕತೆಯ ಅಂತಿಮ ಹಂತದಲ್ಲಿವೆ. ಮತ್ತಷ್ಟು ದಂಡನಾತ್ಮಕ ಸುಂಕಗಳನ್ನು ತಪ್ಪಿಸಲು ಹೆಚ್ಚಿನ ದೇಶಗಳು ಪ್ರಸ್ತುತ ಯುಎಸ್‌ನೊಂದಿಗೆ ಮಾತುಕತೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಶುಕ್ರವಾರ ಯಾವ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ನಡೆಯಲಿದೆ ಎನ್ನುವುದನ್ನು ಅಮೆರಿಕ ಅಧ್ಯಕ್ಷರು ಹೆಸರಿಸದಿದ್ದರೂ ಅವರ ಆಡಳಿತವು ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾವನ್ನು ಮೊದಲು ವ್ಯಾಪಾರ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ ಎಂದು ಗುರುತಿಸಿದೆ.