ಆರ್‌ಸಿಬಿ ಕಪ್ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ ನೀಡುವೆ; ಪಂದ್ಯದ ವೇಳೆ ಮಹಿಳೆಯ ಓಪನ್ ಚಾಲೆಂಜ್!
IPL 2025: ಉತ್ತರ ಭಾರತದ ಆರ್‌ಸಿಬಿ ಅಭಿಮಾನಿಯಾಗಿರುವ ಈಕೆ, ಈ ಹಿಂದೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಮಾಡಿ 'ನಾನು ಭವಿಷ್ಯ ನುಡಿಯುತ್ತಿದ್ದೇನೆ. ಈ ಬಾರಿ ಆರ್‌ಸಿಬಿ ಫೈನಲ್‌ನಲ್ಲಿ ಗೆಲ್ಲದಿದ್ದರೆ, ನಾನು ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ . ಇದು ಯಾವುದೇ ಸ್ಕ್ರಿಪ್ಟೆಡ್ ವಿಡಿಯೊ ಅಲ್ಲ. ಈ ವಿಡಿಯೊವನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ, ನಾನು ನನ್ನ ಪತಿಗೆ 100 ಪ್ರತಿಶತ ವಿಚ್ಛೇದನ ನೀಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಳು.


ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್(IPL 2025) ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ(RCB) ಅಭಿಮಾನಿಯೊಬ್ಬಳು ಈ ಬಾರಿ ಆರ್‌ಸಿಬಿ ಕಪ್ ಗೆದ್ದಿಲ್ಲವೆಂದರೆ ನಾನು ನನ್ನ ಪತಿಗೆ ವಿಚ್ಛೇದನ ನೀಡುವುದಾಗಿ ಓಪನ್ ಚಾಲೆಂಜ್ ಹಾಕಿ ಭಾರೀ ಸುದ್ದಿಯಾಗಿದ್ದಳು. ಇದೀಗ ಆರ್‌ಸಿಬಿ ಕಪ್ ಗೆಲ್ಲುವ ಭವಿಷ್ಯ ಕೂಡ ಈ ಬಾರಿ ನಿಜವಾಗುವಂತೆ ಕಂಡುಬಂದಿದೆ. ಅಂದು ವಿಚ್ಛೇದನ ನೀಡುವ ಚಾಲೆಂಜ್ ಹಾಕಿದ ಮಹಿಳೆ ಕ್ವಾಲಿಫೈಯರ್-1ರ ಪಂದ್ಯದಲ್ಲಿ ಕಾಣಿಸಿಕೊಂಡಿದ್ದು ಪಂದ್ಯದ ವೇಳೆ ಆರ್‌ಸಿಬಿ ಕಪ್ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ(Woman Vows To Divorce Husband) ನೀಡುತ್ತೇನೆ ಎಂದು ಪೋಸ್ಟರ್ ಹಿಡಿದಿದ್ದರು. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಭಾರತದ ಆರ್‌ಸಿಬಿ ಅಭಿಮಾನಿಯಾಗಿರುವ ಈಕೆ, ಈ ಹಿಂದೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಮಾಡಿ 'ನಾನು ಭವಿಷ್ಯ ನುಡಿಯುತ್ತಿದ್ದೇನೆ. ಈ ಬಾರಿ ಆರ್‌ಸಿಬಿ ಫೈನಲ್‌ನಲ್ಲಿ ಗೆಲ್ಲದಿದ್ದರೆ, ನಾನು ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ . ಇದು ಯಾವುದೇ ಸ್ಕ್ರಿಪ್ಟೆಡ್ ವಿಡಿಯೊ ಅಲ್ಲ. ಈ ವಿಡಿಯೊವನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ, ನಾನು ನನ್ನ ಪತಿಗೆ 100 ಪ್ರತಿಶತ ವಿಚ್ಛೇದನ ನೀಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಸತ್ಯವನ್ನು ಹೇಳುತ್ತಿದ್ದೇನೆ' ಎಂದು ಚಾಲೆಂಜ್ ಹಾಕಿದ್ದಳು.
ಈ ಹುಚ್ಚು ಅಭಿಮಾನಿಯ ವಿಡಿಯೊ ಕಂಡ ಅನೇಕ ನೆಟ್ಟಿಗರು ಆರ್‌ಸಿಬಿ ಸೋಲು ಅಥವಾ ಗೆಲುವಿಗೆ ನಿನ್ನ ಪತಿ ಏನು ತಪ್ಪು ಮಾಡಿದ್ದಾನೆ. ಇದೊಂದು ಹುಚ್ಚುತನ. ಹೀಗೆ ಹಲವು ಕಮೆಂಟ್‌ಗಳ ಮೂಲಕ ಈಕೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ಕ್ವಾಲಿಫೈಯರ್ ಪಂದ್ಯದಲ್ಲಿಯೂ ಈಕೆ ಭಾಗಿಯಾಗಿ ಆರ್‌ಸಿಬಿ ಕಪ್ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ ನೀಡುವಾಗಿ ಪೋಸ್ಟರ್ ಹಿಡಿದು ಸುದ್ದಿಯಾಗಿದ್ದಾಳೆ.
ಗುರುವಾರ ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಭರ್ಜರಿಯಾಗಿ ಗೆಲುವು ಸಾಧಿಸಿ 9 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿತ್ತು.