ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡ ಮರ್ಸಿಡಿಸ್- ಬೆಂಜ್
ಬೆಂಗಳೂರಿನ ವಿವಾ ಸ್ಟಾರ್ ಕರ್ನಾಟಕದ ಮೊತ್ತ ಮೊದಲ ಎಕ್ಸ್ ಕ್ಲೂಸಿವ್ ‘ಮರ್ಸಿಡಿಸ್- ಮೇಬ್ಯಾಕ್ ಲಾಂಜ್’ ಅನ್ನು ಹೊಂದಿದ್ದು, ಇದು ಉನ್ನತ ದರ್ಜೆಯ ಗ್ರಾಹಕರಿಗೆ ಮತ್ತು ಐಷಾರಾಮಿ ಕಾರು ಪ್ರಿಯರಿಗೆ ವಿಶಿಷ್ಟವಾದ ಮೇಬ್ಯಾಕ್ ಬ್ರ್ಯಾಂಡ್ ಅನುಭವವನ್ನು ಒದಗಿಸು ತ್ತದೆ. ಈ ‘ಮೇಬ್ಯಾಕ್ ಲಾಂಜ್’ ಕರ್ನಾಟಕದಲ್ಲಿ ಮೊದಲ ಬಾರಿಗೆ 'ಮೇಬ್ಯಾಕ್ ಶಾಪ್-ಇನ್- ಶಾಪ್' ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದು, ನವೀನವಾದ 'ಮೇಬ್ಯಾಕ್ ರಿಟೇಲ್ ಕಿಟ್' ಮೂಲಕ ವಿಶಿಷ್ಟವಾದ ರೀಟೇಲ್ ಅಂಶಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ