ಗೆಳತಿ ಸೈಕಲ್ ಕೊಡಲಿಲ್ಲ ಎಂದು ಪುಟ್ಟ ಬಾಲಕಿ ಆತ್ಮಹತ್ಯೆ
ಪಕ್ಕದ ಮನೆ ಗೆಳತಿ ಜೊತೆ ಬಾಲಕಿ ಪ್ರತಿನಿತ್ಯ ಸೈಕಲ್ ಆಡುತ್ತಿದ್ದಳು. ಅವಳು ಅಂದು ಆಡುವುದಕ್ಕೆ ಸೈಕಲ್ ಕೊಟ್ಟಿಲ್ಲ ಎಂದು ಮನನೊಂದು ಸ್ಪಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಷ್ಟು ಸಣ್ಣ ಬಾಲಕಿಗೆ ಕರಾರುವಕ್ಕಾಗಿ ನೇಣು ಬಿಗಿದುಕೊಳ್ಳುವುದಕ್ಕೆ ತಿಳಿದದ್ದು ಕೂಡ ಆಶ್ಚರ್ಯಕರವಾಗಿದೆ.