ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL Points Table 2025: ಚೆನ್ನೈ ಮಣಿಸಿ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಸನ್‌ರೈಸರ್ಸ್‌

ಅಗ್ರ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಗುಜರಾತ್‌ ಟೈಟಾನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮೊದಲೆರಡು ಸ್ಥಾನದಲ್ಲಿದ್ದರೆ, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್‌ ಗೆಲುವಿನಿಂದ ರಾಜಸ್ಥಾನ್‌ ತಂಡ ಒಂದು ಸ್ಥಾನ ಕುಸಿತ ಕಂಡಿತು. ಸದ್ಯ 9ನೇ ಸ್ಥಾನದಲ್ಲಿದೆ.

ಚೆನ್ನೈ ಮಣಿಸಿ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಸನ್‌ರೈಸರ್ಸ್‌

Profile Abhilash BC Apr 26, 2025 6:46 AM

ಚೆನ್ನೈ: ಶುಕ್ರವಾರ ನಡೆದಿದ್ದ ಐಪಿಎಲ್‌ನ(IPL 2025) 43ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌(CSK vs SRH) ತಂಡವನ್ನು 5 ವಿಕೆಟ್‌ ಅಂತರದಿಂದ ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ(IPL Points Table 2025) ತನ್ನ ಸ್ಥಾನವನ್ನು ವೃದ್ಧಿಸಿಕೊಂಡಿದೆ. 9ನೇ ಸ್ಥಾನದಿಂದ ಮೇಲೇರಿ ಇದೀಗ 8 ನೇ ಸ್ಥಾನಕ್ಕೆ ಬಂದು ನಿಂತಿದೆ. ಸೋಲು ಕಂಡ ಚೆನ್ನೈ ಹಿಂದಿನಂತೆ ಕೊನೆಯ ಸ್ಥಾನದಲ್ಲಿಯೇ ಮುಂದುವರಿದು ಪ್ಲೇ ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

ಅಗ್ರ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಗುಜರಾತ್‌ ಟೈಟಾನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮೊದಲೆರಡು ಸ್ಥಾನದಲ್ಲಿದ್ದರೆ, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್‌ ಗೆಲುವಿನಿಂದ ರಾಜಸ್ಥಾನ್‌ ತಂಡ ಒಂದು ಸ್ಥಾನ ಕುಸಿತ ಕಂಡಿತು. ಸದ್ಯ 9ನೇ ಸ್ಥಾನದಲ್ಲಿದೆ.

ಇಂದು(ಶನಿವಾರ) ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರಥಡರ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಸೆಣಸಾಟ ನಡೆಸಲಿವೆ. ಕೆಕೆಆರ್‌ 7ನೇ ಸ್ಥಾನದಲ್ಲಿದ್ದರೆ, ಪಂಜಾಬ್‌ ಕಿಂಗ್ಸ್‌ 5ನೇ ಸ್ಥಾನದಲ್ಲಿದೆ.

ಅಂಕಪಟ್ಟಿ ಹೀಗಿದೆ

ಚೆಪಾಕ್‌ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ 155 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಇಶಾನ್‌ ಕಿಶನ್‌ (44) ಹಾಗೂ ಕಮಿಂದು ಮೆಂಡಿಸ್‌ (32*) ಅವರ ಬ್ಯಾಟಿಂಗ್‌ ಬಲದಿಂದ 18.4 ಓವರ್‌ಗಳಿಗೆ ಗೆದ್ದು ಬೀಗಿತು.