ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಸಚಿವ ಸಂಪುಟದಲ್ಲಿ ಮಹಿಳೆಯರಿಗೇಕಿಲ್ಲ ಸ್ಥಾನ? ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

ಸಚಿವ ಸಂಪುಟದಲ್ಲಿ ಮಹಿಳೆಯರಿಗೇಕಿಲ್ಲ ಸ್ಥಾನ? ಸಿಎಂ ಹೇಳಿದ್ದೇನು?

ಬುಧವಾರದಿಂದಲೇ ನೂತನ ಸಚಿವರುಗಳು ತಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಅಲ್ಲಿನ ಸ್ಥಳಗಳಿಗೆ ಹೋಗಿ, ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.

ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ; ಯೆಲ್ಲೋ ಅಲರ್ಟ್‌ ಘೋಷಣೆ

ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ

Karnataka Weather: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿಯೇ ಇದೆ. ಬೆಂಗಳೂರು ಸೇರಿ ಒಂದಷ್ಟು ಜಿಲ್ಲೆಗಳಲ್ಲಿ ಮಳೆಯೇ ಮಾಯವಾದಂತೆ ಆಗಿದೆ. ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರಿ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Chikkaballapur News: ಒಂದೇ ಕಂತಿನಲ್ಲಿ ಭೂ ಪರಿಹಾರ ಬಿಡುಗಡೆ ಬಳಿಕ 135 ದಿನಗಳ ಧರಣಿ ಹಿಂಪಡೆದ ರೈತಸಂಘ

ಕೆಐಎಡಿಬಿ ಭೂಸ್ವಾಧೀನ ಹೋರಾಟಕ್ಕೆ ತಾತ್ಕಾಲಿಕ ತೆರೆ

ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ಸುಮಾರು 2850 ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಪ್ರಾಥಮಿಕ ಅಧಿಸೂಚನೆ ಹೊರಬಿದ್ದ ದಿನದಿಂದಲೇ ಪರ-ವಿರೋಧ ಚಳವಳಿಗಳು ತೀವ್ರ ಗೊಂಡಿದ್ದವು. ಒಂದೆಡೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕರ್ನಾಟಕ ರಾಜ್ಯ ರೈತಸಂಘ ಫಲವತ್ತಾದ ಕೃಷಿಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗೆ ನೀಡಬಾರದು ಎಂದು ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಕೈಗಾರಿಕೆ ಬೇಕು

Gubbi News: ಗುಬ್ಬಿ ತಾಲ್ಲೂಕಿನ ಕೆರೆಗಳಿಗೆ ಶೀಘ್ರ ಹೇಮೆ ಹರಿಸಿ : ಗುಬ್ಬಿ ಬಿಜೆಪಿಗರ ಒತ್ತಾಯ

ಗುಬ್ಬಿ ತಾಲ್ಲೂಕಿನ ಕೆರೆಗಳಿಗೆ ಶೀಘ್ರ ಹೇಮೆ ಹರಿಸಿ : ಬಿಜೆಪಿಗರ ಒತ್ತಾಯ

ಗುಬ್ಬಿ ತಾಲೂಕಿನಾದ್ಯಂತ ಎಲ್ಲಾ ಕೆರೆಗಳು ನೀರು ಇಲ್ಲದೆ ಬರಿದಾಗಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರೈತರ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವಜಲವಾಗಿದ್ದ ಹೇಮಾವತಿ ನೀರು ಬರಬೇಕಿತ್ತು. ಈ ಬಾರಿ ಜುಲೈ ತಿಂಗಳು ಕಳೆದರೂ ಹೇಮೆ ನಮ್ಮತ್ತ ಹರಿದಿಲ್ಲ. ಮುಂಗಾರು ಕೈ ಕೊಟ್ಟಿದೆ. ಆದರೆ ಕೆಲ ದಿನದಿಂದ ಮಲೆನಾಡು ಭಾಗದಲ್ಲಿ ಮಳೆ ಬೀಳುತ್ತಿದೆ

Gubbi News: ಮಕ್ಕಳಲ್ಲಿನ ಬಹುಮುಖ ಪ್ರತಿಭೆ ಗುರುತಿಸುವುದೇ ನಿಜ ಶಿಕ್ಷಣ: ಬಿಇಓ ನಟರಾಜು

ಮಕ್ಕಳಲ್ಲಿನ ಬಹುಮುಖ ಪ್ರತಿಭೆ ಗುರುತಿಸುವುದೇ ನಿಜ ಶಿಕ್ಷಣ

ಕ್ರೀಡಾ ಶಿಕ್ಷಣ ಮಕ್ಕಳಲ್ಲಿ ಮನರಂಜನೆ, ದೈಹಿಕ ಕಸರತ್ತು, ಸಹಕಾರ, ಸ್ಪರ್ಧಾ ಮನೋಭಾವ, ಸಾಮಾಜಿಕ ಜೀವನ ಎಲ್ಲವನ್ನೂ ಕಲಿಸುತ್ತದೆ. ಕ್ರೀಡೆಯಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದ ಮಕ್ಕಳು ನಮ್ಮ ಕಣ್ಮುಂದೆ ನಿದರ್ಶನವಾಗಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಕ್ರೀಡೆಗೆ ಸೂಕ್ತ ತರಬೇತಿ ನೀಡಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿ ಕ್ರೀಡಾಕೂಟದಿಂದ ಮನೆಗೆ ಮಕ್ಕಳನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂಬುದು ನೆನಪಿರಲಿ

ಅವಳಿ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದ ನಿರಾಸೆ; ಅಭಿವೃದ್ಧಿ ಕನಸಿಗೂ ಹಿನ್ನಡೆಯ ಆತಂಕ

'ಕೈʼ ನ ಏಳು ಶಾಸಕರಿದ್ದರೂ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ: ಪ್ರತಿಭಟನೆ

ಇನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ, ಪಕ್ಷದ ಹಿರಿಯ ನಾಯಕರ ವಿರುದ್ಧವೇ ಆರೋಪ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್‌ನ ಆಂತರಿಕ ಅಸಮಾಧಾನವೂ ಬಹಿರಂಗ ಗೊಂಡಿದೆ.

Pro-tem Speaker: ವಿಧಾನಸಭೆ ಹಂಗಾಮಿ ಸಭಾಧ್ಯಕ್ಷರಾಗಿ ಟಿ.ಬಿ. ಜಯಚಂದ್ರ ನೇಮಕ

ವಿಧಾನಸಭೆ ಹಂಗಾಮಿ ಸಭಾಧ್ಯಕ್ಷರಾಗಿ ಟಿ.ಬಿ. ಜಯಚಂದ್ರ ನೇಮಕ

ಕರ್ನಾಟಕ ವಿಧಾನಸಭೆ ನೂತನ ಸಭಾಧ್ಯಕ್ಷರನ್ನು ಸಂವಿಧಾನಬದ್ಧವಾಗಿ ಚುನಾಯಿಸುವವರೆಗೂ ಟಿ.ಬಿ. ಜಯಚಂದ್ರ ಅವರು ಸ್ಪೀಕರ್ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ಟಿ.ಬಿ. ಜಯಚಂದ್ರ ಅವರನ್ನು ನೇಮಿಸಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯದ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Chikkaballapur News: 50 ದಿನ ಪೂರೈಸಿದ ಸಿಂಗಾಡಿ ಕದಿರೇನಹಳ್ಳಿ ಭೂ ಹೋರಾಟ: ಅರಣ್ಯ ಇಲಾಖೆಗೆ ಮುಂಭಾಗ ಸಂತ್ರಸ್ಥರ ಆಕ್ರೋಶ

50 ದಿನ ಪೂರೈಸಿದ ಸಿಂಗಾಡಿ ಕದಿರೇನಹಳ್ಳಿ ಭೂ ಹೋರಾಟ

ನಗರ ಹೊರವಲಯ ಸೂಲಾಲಪ್ಪನ ದಿನ್ನೆಯ ಬಳಿಯಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳ ಕಚೇರಿ ಎದುರು ಕಳೆದ 50 ದಿನಗಳಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಹೋರಾಟವು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಗೆ ತೆರಳದಂತೆ ಬಾಗಿಲಿಗೆ ಅಡ್ಡಕುಳಿತು ತೀವ್ರ ಆಕ್ರೋಶ ಹೊರಹಾಕಿದರು.

Afzalpur News: ಶಾಸಕ ಎಂ.ವೈ.ಪಾಟೀಲರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ: ಇಬ್ಬರ ವಿರುದ್ಧ ಎಫ್‌ಐಆರ್

ಶಾಸಕ ಎಂ.ವೈ.ಪಾಟೀಲರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ

ಶಾಸಕರಿಗೆ ಉದ್ದೇಶಪೂರ್ವಕವಾಗಿ ಅವಮಾನವಾಗುವ ರೀತಿಯಲ್ಲಿ sandipAfz007 ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ganeshjalde07 ಎಂಬ ಇನ್‌ಸ್ಟಾಗ್ರಾಮ್ ಖಾತೆ ಯಿಂದ ಶಾಸಕರನ್ನು ಉದ್ದೇಶಿಸಿ ಕೀಳುಮಟ್ಟದ ಹಾಗೂ ಅಶ್ಲೀಲ ಭಾಷೆಯಲ್ಲಿ ಕಾಮೆಂಟ್ ಮಾಡಲಾಗಿದೆ ಎನ್ನಲಾಗಿದೆ.

Vinay Kulkarni: ವಿನಯ್‌ ಕುಲಕರ್ಣಿಗೆ ಗುಡ್‌ ನ್ಯೂಸ್‌; ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಶಾಸಕ ಸ್ಥಾನ ಮರುಸ್ಥಾಪನೆ

ವಿನಯ್‌ ಕುಲಕರ್ಣಿಗೆ ಗುಡ್‌ನ್ಯೂಸ್‌; ಶಾಸಕ ಸ್ಥಾನ ಮರುಸ್ಥಾಪನೆ

ವಿನಯ್ ಕುಲಕರ್ಣಿ ಅವರು ಧಾರವಾಡ ಕ್ಷೇತ್ರದ ಶಾಸಕರಾಗಿ ತಮ್ಮ ಅಧಿಕೃತ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಹಸಿರು ನಿಶಾನೆ ಸಿಕ್ಕಿದೆ. ಅವರ ಶಾಸಕ ಸ್ಥಾನವನ್ನು ಮರುಸ್ಥಾಪಿಸಿ ವಿಧಾನಸಭೆ ಸಚಿವಾಲಯ ಆದೇಶ ಹೊರಡಿಸಿದೆ. ಈ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೂ ರವಾನಿಸಲಾಗಿದೆ.

ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ಯ ಮತ್ತೊಂದು ಅಸಭ್ಯ ವರ್ತನೆ; ಕುಡಿತದ ಮತ್ತಿನಲ್ಲಿ ಮಹಿಳೆಯ ಮನೆಗೆ ನುಗ್ಗಲು ಯತ್ನ: ಭಯಾನಕ ವಿಡಿಯೊ ವೈರಲ್‌

ಕುಡಿದ ಮತ್ತಿನಲ್ಲಿ ಮಹಿಳೆಯ ಮನೆಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್

Viral Video: ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸುವ ಮಾಡುವ ಮತ್ತೊಂದು ಅಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಮನೆಗೆ ಬಂದ ಉಬರ್ ಪಾರ್ಸಲ್ ಡೆಲಿವರಿ ಬಾಯ್ ಕುಡಿತದ ಮತ್ತಿನಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಶೇರ್ ಮಾಡಿದ ಮಹಿಳೆ ಆತನ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭ್ರಷ್ಟರಿಗೆ ಬಹುಮಾನ, ಪೇಮೆಂಟ್ ಕೊಟ್ಟವರಿಗೆ ಸಚಿವ ಸ್ಥಾನ: ಡಿಕೆಶಿ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಟೀಕೆ

ಕಾಂಗ್ರೆಸ್‌ನಲ್ಲಿ ಪೇಮೆಂಟ್ ಕೊಟ್ಟವರಿಗೆ ಸಚಿವ ಸ್ಥಾನ: ಬಿಜೆಪಿ ಟೀಕೆ

Karnataka cabinet expansion: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಟೀಕಿಸಿದೆ. ಲೂಟಿಕೋರ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟರಿಗೆ ಮಾತ್ರ ಆದ್ಯತೆ, ಮಾನ್ಯತೆ. ಭ್ರಷ್ಟ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಪೇಮೆಂಟ್‌ ಕೊಟ್ರೆ ಸಾಕು ಸಚಿವರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗುತ್ತೆ ಎಂದು ಬಿಜೆಪಿ ಆರೋಪಿಸಿದೆ.

Chikkaballapur News: ಹಿರಿಯರು ಸಮಾಜದ ಅನುಭವದ ಸಂಪತ್ತು; ಗೌರವವೇ ಭಾರತೀಯ ಸಂಸ್ಕೃತಿಯ ಜೀವಾಳ: ನ್ಯಾ. ಟಿ.ಪಿ. ರಾಮಲಿಂಗೇಗೌಡ

ಹಿರಿಯರು ಸಮಾಜದ ಅನುಭವದ ಸಂಪತ್ತು

ಭಾರತೀಯ ಸಂಸ್ಕೃತಿಯ ಮೂಲ ಮೌಲ್ಯಗಳನ್ನು ಉಲ್ಲೇಖಿಸಿದ ಅವರು, "ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ" ಎಂಬ ಸಂದೇಶಗಳು ಕೇವಲ ಉಲ್ಲೇಖಗಳಲ್ಲ; ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳಾಗಿವೆ ಎಂದು ಹೇಳಿದರು. ಹಿರಿಯರ ಅನುಭವ, ಜ್ಞಾನ ಮತ್ತು ಮಾರ್ಗದರ್ಶನದಿಂದ ಸಮಾಜ ಸದೃಢವಾಗಿ ಬೆಳೆಯುತ್ತದೆ. ಆದ್ದರಿಂದ ಅವರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ

Annabrahma chaturmasya: ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ವಿದ್ಯಾರ್ಥಿಗಳು ಹಾಗೂ ಯುವ ಜನರು ರಾತ್ರಿ ತಡವಾಗಿ ಜಾಗರಣೆ ಮಾಡುವುದನ್ನು ಮತ್ತು ಮೊಬೈಲ್ ಸೇರಿದಂತೆ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಬೇಕು. ನಿಗದಿತ ಸಮಯದಲ್ಲಿ ಮಲಗಿ, ಬೆಳಗ್ಗೆ ಸಕಾಲದಲ್ಲಿ ಏಳುವ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯಕರ ಜೀವನ ಸಾಧ್ಯವಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಕರ್ನಾಟಕ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಸಮರಕ್ಕೆ ಇಳಿದ ತಮಿಳುನಾಡು  ಸಿಎಂ ವಿಜಯ್

ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಎಂ ವಿಜಯ್

ಕಾವೇರಿ ನದಿ ನೀರಿಗಾಗಿ ಈಗ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನವಿದ್ದು, ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ಕರ್ನಾಟಕ ನೀರು ಬಿಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Karnataka Cabinet Expansion: ಡಿಕೆಶಿ ಸಂಪುಟದ ಸಚಿವರಾಗಿ ಅಜಯ್ ಧರಮ್ ಸಿಂಗ್, ಬಾಲಕೃಷ್ಣ ಸೇರಿ 19 ಮಂದಿ ಪ್ರಮಾಣವಚನ ಸ್ವೀಕಾರ; ಇಲ್ಲಿದೆ ನೂತನ ಸಚಿವರ ಪಟ್ಟಿ

ಸಚಿವರಾಗಿ ಅಜಯ್‌ ಸಿಂಗ್‌, ಬಾಲಕೃಷ್ಣ ಸೇರಿ 19 ಶಾಸಕರ ಪ್ರಮಾಣವಚನ

ಬೆಂಗಳೂರಿನ ರಾಜಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಮತ್ತೊಂದೆಡೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಹಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಆಗಸ್ಟ್‌ 8ರಂದು ವಿಪ್ರ ಉದ್ಯಮಿಗಳ ವಿಬಿಎಫ್‌ ಸಮ್ಮೇಳನ

ಬೆಂಗಳೂರಿನಲ್ಲಿ ಆಗಸ್ಟ್‌ 8ಕ್ಕೆ ವಿಪ್ರ ಉದ್ಯಮಿಗಳ ವಿಬಿಎಫ್‌ ಸಮ್ಮೇಳನ

VBF Conference: ವಿಪ್ರ ಬಿಸಿನೆಸ್‌ ಫೋರಮ್‌ ಆಶ್ರಯದಲ್ಲಿ ವಿಪ್ರ ಉದ್ಯಮಿಗಳ ಸಮ್ಮೇಳನವು ಬೆಂಗಳೂರಿನಲ್ಲಿ ಆಗಸ್ಟ್‌ 8ರಂದು ಶನಿವಾರ ನಡೆಯಲಿದೆ. ನಗರದ ಕೆಜಿ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಂಸ್ಥೆಯ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಈ ಸಮ್ಮೇಳನ ಅದ್ಧೂರಿಯಾಗಿ ನಡೆಯಲಿದೆ.

Chikkaballapur News: ಉದ್ಯೋಗ, ಶಿಕ್ಷಣದ ಹೆಸರಿನ ವಂಚನೆಗೆ ಎಚ್ಚರ; ಮಾನವ ಕಳ್ಳಸಾಗಣಿಕೆ ತಡೆಗೆ ಸಮೂಹ ಜಾಗೃತಿ ಅಗತ್ಯ

ವಿದ್ಯಾರ್ಥಿಗಳು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು

ವಿಶ್ವ ಮಾನವ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯ ದಲ್ಲಿ ನಗರದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಚಿವ ಸ್ಥಾನ ಸಿಗದ ಹಿನ್ನೆಲೆ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ಸಲ್ಲಿಕೆ, ನಾಳೆಯೇ ರಾಜೀನಾಮೆ ಕೊಡುವೆ ಎಂದ ಬೇಳೂರು ಗೋಪಾಲಕೃಷ್ಣ!

ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ಸಲ್ಲಿಕೆ

Karnataka Cabinet expansion: ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರು ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡು ತಮ್ಮ ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿನ ಈ ಬೆಳವಣಿಗೆಗಳು ಕೈ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.

Karnataka Cabinet expansion: ಹಾವೇರಿ ಶಾಸಕ ರುದ್ರಪ್ಪ ಲಮಾಣಿಗೆ ಎರಡನೇ ಬಾರಿಗೆ ಒಲಿದು ಬಂದ ಸಚಿವ ಸ್ಥಾನ

ಶಾಸಕ ರುದ್ರಪ್ಪ ಲಮಾಣಿಗೆ ಎರಡನೇ ಬಾರಿಗೆ ಒಲಿದು ಬಂದ ಸಚಿವ ಸ್ಥಾನ

Rudrappa Lamani: ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಎರಡನೇ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅವರು ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ, ನೀರಾವರಿ, ಮೂಲಸೌಕರ್ಯ ಹಾಗೂ ಸಾಮಾಜಿಕ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ.

ಬೆಂಗಳೂರಿಗರೇ ಗಮನಿಸಿ; ಲೋಕಭವನದಲ್ಲಿ ಸಚಿವರ ಪ್ರಮಾಣವಚನ, ಹಲವೆಡೆ ಸಂಚಾರ ನಿರ್ಬಂಧ

ಲೋಕಭವನದಲ್ಲಿ ಸಚಿವರ ಪ್ರಮಾಣವಚನ, ಹಲವೆಡೆ ಸಂಚಾರ ನಿರ್ಬಂಧ

Bengaluru Traffic Police : ಬಾರೀ ಕುತೂಹಲ ಮೂಡಿಸಿದ್ದ ಸಿಎಂ ಡಿಕೆ ಶಿವಕುಮಾರ್‌ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕುತೂಹಲಕ್ಕೆ ತೆರೆ ಬಿದ್ದಿದ್ದು, ನೂತನ ಸಚಿವರ ಪಟ್ಟಿ ಹೊರ ಬಿದ್ದಿದೆ. ಲೋಕಭವನದಲ್ಲಿ ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ.

ಅವ್ಯವಸ್ಥೆಯ ಆಗರವಾದ ಕುಷ್ಟಗಿಯ ತಾಯಿ-ಮಕ್ಕಳ ಆಸ್ಪತ್ರೆ: ಹೊಸ ಕಟ್ಟಡದಲ್ಲೂ ಅದೇ ಹಳೇ ಸಮಸ್ಯೆ

ಅವ್ಯವಸ್ಥೆಯ ಆಗರವಾದ ಕುಷ್ಟಗಿಯ ತಾಯಿ-ಮಕ್ಕಳ ಆಸ್ಪತ್ರೆ

ಒಟ್ಟು 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೊಸ ಕಟ್ಟಡದಲ್ಲೇ ಮೂಲ ಸೌಲಭ್ಯ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನಿಷ್ಠ ಸೌಲಭ್ಯಗಳಾದ ಶುದ್ಧ ಕುಡಿವ ನೀರು, ಬಾಣಂತಿರಿಗೆ ಬೇಕಾದ ಬಿಸಿ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ. ಆಸ್ಪತ್ರೆ ಮೇಲ್ಚಾವಣಿ ಮೇಲೆ ಅಳವಡಿಸಿರುವ ಸೋಲಾರ್‌ವಾಟರ್ ಹೀಟರ್‌ನ ಟೂಬ್ ಗಳು ಹಾಳಾಗಿವೆ.

ದಾಖಲೆ ಬರೆದ ಧಾರವಾಡ ʼಹೈʼ ಪೀಠ

ದಾಖಲೆ ಬರೆದ ಧಾರವಾಡ ʼಹೈʼ ಪೀಠ

ಧಾರವಾಡ ಹೈಕೋರ್ಟ್‌ನ ಧಾರವಾಡ ಪೀಠ ಶನಿವಾರ ಒಂದು ವಿಶೇಷ ಘಟನೆಗೆ ಸಾಕ್ಷಿಯಾಯಿತು. ಬೆಳಗ್ಗೆಯಿಂದ ನಡೆದ ಕಲಾಪದಲ್ಲಿ ಎಲ್ಲ ನ್ಯಾಯಮೂರ್ತಿಗಳು ಮಹಿಳೆಯರೇ.! ಒಂದು ಕಡೆ ಮಹಿಳಾ ನ್ಯಾಯಮೂರ್ತಿಗಳೇ ಕಲಾಪ ನಡೆಸುತ್ತಿದ್ದರೆ, ಇನ್ನೊಂದೆಡೆ ಸರಕಾರದ ಪರ ಕೇಸನ್ನು ನಡೆಸಿದ್ದು ಕೂಡ ಮಹಿಳಾ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು.!

Jewargi MLA Dr. Ajay Singh: ಪಕ್ಷ ನಿಷ್ಠೆಗೆ ಫಲವಾಗಿ ಡಾ.ಅಜಯಸಿಂಗ್‌ಗೆ ಸಚಿವ ಸಂಪುಟ ಪ್ರವೇಶ

ಪಕ್ಷ ನಿಷ್ಠೆಗೆ ಫಲವಾಗಿ ಡಾ.ಅಜಯಸಿಂಗ್‌ಗೆ ಸಚಿವ ಸಂಪುಟ ಪ್ರವೇಶ

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ. ಅಜಯಸಿಂಗ್ ಅವರು ಶಾಂತ, ಸಮತೋಲನದ ಹಾಗೂ ಅಭಿವೃದ್ಧಿ ಪರ ರಾಜಕಾರಣದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪಕ್ಷದ ಏಳು-ಬೀಳುಗಳ ನಡುವೆಯೂ ಕಾಂಗ್ರೆಸ್ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದ ಅವರ ನಿಷ್ಠೆಗೆ ಇದೀಗ ಸಚಿವ ಸ್ಥಾನ ರೂಪದಲ್ಲಿ ಮನ್ನಣೆ ದೊರೆತಿದೆ ಎನ್ನಲಾಗುತ್ತಿದೆ.

Loading...