ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯ; ಕೇಂದ್ರದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದ ಸಿಎಂ

ತೆರಿಗೆ ಪಾಲಿನಲ್ಲಿ ಅನ್ಯಾಯ; ಹೋರಾಟ ಮುಂದುವರಿಯಲಿದೆ ಎಂದ ಸಿಎಂ

Karnataka budget session 2026: ರಾಜ್ಯಕ್ಕೆ ಅನ್ಯಾಯವಾದಾಗ ಯಾವುದೇ ಸರ್ಕಾರವಿದ್ದರೂ, ವಿರೋಧಿಸಲೇಬೇಕು. ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಈ ಅನ್ಯಾಯವನ್ನು ವಿರೋಧಿಸಬೇಕು. ಕರ್ನಾಟಕದಿಂದ 4.50 ಲಕ್ಷ ಕೋಟಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೂ, ರಾಜ್ಯಕ್ಕೆ ಮರಳಿ ಬರುವುದು 14-15% ರಷ್ಟು ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Karnataka Assembly session 2026: ಬಿಜೆಪಿ ಸರ್ಕಾರದ ಅವಧಿಯಲ್ಲೂ ವಿತ್ತೀಯ ಕೊರತೆ ಇತ್ತು: ಸಿಎಂ ಟೀಕೆ

ಬಿಜೆಪಿ ಸರ್ಕಾರದ ಅವಧಿಯಲ್ಲೂ ವಿತ್ತೀಯ ಕೊರತೆ ಇತ್ತು: ಸಿಎಂ ಟೀಕೆ

ವಿರೋಧ ಪಕ್ಷದ ವಿಜಯೇಂದ್ರ ಮುಂತಾದವರು ರೆವಿನ್ಯೂ ಸರಿಯಾಗಿ ಸಂಗ್ರಹವಾಗದ ಕಾರಣ ಪ್ರತಿ ವರ್ಷ ಬಜೆಟ್ಟನ್ನು ಪರಿಷ್ಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಇದು ಕೇಂದ್ರ ಸರ್ಕಾರದ ಅಪಕ್ವ ಆರ್ಥಿಕ ನೀತಿಗಳಿಂದ ಉಂಟಾಗುತ್ತಿರುವ ಸಮಸ್ಯೆಯಾಗಿದೆ. ನಮ್ಮ ಅಕ್ಕ ಪಕ್ಕದ ರಾಜ್ಯಗಳಿಗೆ ಹೋಲಿಸಿದರೂ ಸಹ ನಮ್ಮ ಸ್ವಂತ ರಾಜಸ್ವ ಸಂಗ್ರಹ ಉತ್ತಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah: ನಮ್ಮ ಬಜೆಟ್ ಖಾಲಿ ಚೊಂಬಲ್ಲ, ತುಂಬಿದ ಕೊಡ: ಸಿಎಂ ಸಿದ್ದರಾಮಯ್ಯ

ನಮ್ಮ ಬಜೆಟ್ ಖಾಲಿ ಚೊಂಬಲ್ಲ, ತುಂಬಿದ ಕೊಡ: ಸಿಎಂ ಸಿದ್ದರಾಮಯ್ಯ

ವಿರೋಧ ಪಕ್ಷದವರು ಸೋಷಿಯಲ್ ಮೀಡಿಯಾಕ್ಕೆ ಹೂರಣ ನೀಡಲು ಬಹಳ ಕಸರತ್ತು ಮಾಡಿ ಪದಪುಂಜಗಳನ್ನು ಬಳಸಿದ್ದಾರೆ. ವಿರೋಧ ಪಕ್ಷದ ನಾಯಕರು ಆಯವ್ಯಯದ ಬಗ್ಗೆ ಸ್ಥೂಲವಾಗಿ ಅಧ್ಯಯನ ಮಾಡದೇ, ಪ್ರತಿಕ್ರಿಯೆ ನೀಡಿದ್ದಾರೆಯೇ ಹೊರತು, ಆಳವಾದ ಅಧ್ಯಯನ ನಡೆಸಿಲ್ಲ. ನಮ್ಮ ಬಜೆಟ್ ತುಂಬಿದ ಕೊಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನುಡಿದರು.

Harassment: ಇನ್‌ಸ್ಪೆಕ್ಟರ್‌ನಿಂದ ಮಹಿಳಾ ರೌಡಿ ಶೀಟರ್‌ಗೆ ಪೋಲಿ ಮೆಸೇಜ್‌, ಕಿರುಕುಳ: ದೂರು

ಇನ್‌ಸ್ಪೆಕ್ಟರ್‌ನಿಂದ ಮಹಿಳಾ ರೌಡಿಗೆ ಪೋಲಿ ಮೆಸೇಜ್‌, ಕಿರುಕುಳ: ದೂರು

ದೂರುದಾರೆಯ ಪ್ರಕಾರ, ಇನ್ಸ್‌ಪೆಕ್ಟರ್ ಪಾಪಣ್ಣ ಕಚೇರಿಯ ಹಾಗೂ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಹಲವು ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೆ, ಅಸಭ್ಯವಾಗಿ ಮಾತನಾಡಿದ್ದಾರೆ. ‘ಚಿನ್ನ, ಮುದ್ದು, ಬಂಗಾರಿ’ ಎಂದೆಲ್ಲ ಸಂಬೋಧಿಸಿದ್ದಲ್ಲದೆ ಅಶ್ಲೀಲ ಸಂದೇಶಗಳನ್ನೂ ಕಳುಹಿಸಿದ್ದ. ಅಲ್ಲದೆ, ನಂತರ ಕೊಲೆ ಬೆದರಿಕೆಯನ್ನೂ ಹಾಕಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.

ಹಿಂದುಳಿದ ಮಹಿಳೆಯರಿಗಾಗಿ "ಸಾಮೂಹಿಕ ಸೀಮಂತ" ಯಶಸ್ವಿ

ಹಿಂದುಳಿದ ಮಹಿಳೆಯರಿಗಾಗಿ "ಸಾಮೂಹಿಕ ಸೀಮಂತ" ಯಶಸ್ವಿ

​ಇನ್ಫಿವರ್ಲ್ಡ್ ಫೌಂಡೇಶನ್ ಬೆಂಗಳೂರಿನ ಎಂಟು ಹಿಂದುಳಿದ ಮಹಿಳೆಯರಿಗಾಗಿ "ಸಾಮುಹಿಕಾ ಸೀಮಂತ"ವನ್ನು ಯಶಸ್ವಿಯಾಗಿ ನಡೆಸಿತು.ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಗರ್ಭಿಣಿಯರಿಗೆ ತಾಯ್ತನ ಆಚರಿಸುವ ಮತ್ತು ಭಾವನಾ ತ್ಮಕ ಮತ್ತು ಸಾಮಾಜಿಕ ಬೆಂಬಲವನ್ನು ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿನ ಅಬಲಾಶ್ರಮದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

Self Harming: ನಾಗಾಲ್ಯಾಂಡ್‌ನ ಯುವತಿ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ

ನಾಗಾಲ್ಯಾಂಡ್‌ನ ಯುವತಿ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ

ಲಿನ್ಸುಲಾಳಿಗೆ ರಾಜೇಶ್ ಹಾಗೂ ತೇಜಸ್ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಲಶಿಲಾ ಇಂಚುಗರ್ ಎಂಬವರು ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಸವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

LPG Crisis: ಆಳಂದದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ, ಗ್ರಾಹಕರ 2 ಕಿಮೀ ಸಾಲು

ಆಳಂದದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ, ಗ್ರಾಹಕರ 2 ಕಿಮೀ ಸಾಲು

ಗ್ರಾಮೀಣ ಭಾಗದ ಜನರೂ ಕೂಡ ಪಟ್ಟಣಕ್ಕೆ ಬಂದು ಸಿಲಿಂಡರ್ ಪಡೆಯಲು ಹರಸಾಹಸ ಪಟ್ಟರು. ನೆಟ್‌ವರ್ಕ್ ಸಮಸ್ಯೆಯಿಂದ ತಕ್ಷಣ ಬುಕ್ಕಿಂಗ್ ಸಾಧ್ಯವಾಗದೇ ಇರುವುದರಿಂದ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಗೃಹಬಳಕೆಯ ಸಿಲಿಂಡರ್‌ಗಳ ಮೇಲಿನ ಅವಲಂಬನೆ ಹೆಚ್ಚಿದ ಹಿನ್ನೆಲೆ ಬೇಡಿಕೆ ಏರಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

CJ Roy death: ಮೃತ ಉದ್ಯಮಿ ಸಿಜೆ ರಾಯ್‌ಗೆ ಆಗಿತ್ತು ಸಿನಿಮಾ ನಟಿಯಿಂದ ಹನಿ ಟ್ರ್ಯಾಪ್‌!

ಮೃತ ಉದ್ಯಮಿ ಸಿಜೆ ರಾಯ್‌ಗೆ ಆಗಿತ್ತು ಸಿನಿಮಾ ನಟಿಯಿಂದ ಹನಿ ಟ್ರ್ಯಾಪ್‌!

ಸಿಜೆ ರಾಯ್ ಸೆಲೆಬ್ರೆಟಿಗಳ ಜೊತೆಗೂ ಉತ್ತಮ ನಂಟು ಹೊಂದಿದ್ದರು. ಸಿನಿಮಾ ನಟಿಯೊಬ್ಬರು ಸೆಜೆ ರಾಯ್‌ ಅವರನ್ನು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಬೀಳಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿತ್ತು. ಸಿಜೆ ರಾಯ್‌ಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ. ಈ ಕುರಿತು ಎಸ್ಐಟಿ ತನಿಖಾ ತಂಡ ತನಿಖೆ ನಡೆಸುತ್ತಿದೆ.

RCB: ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜೊತೆ ಒಪ್ಪಂದ, ಈ ಐಪಿಎಲ್‌ ಸೀಸನ್‌ನಲ್ಲಿ ಆರ್‌ಸಿಬಿಗೆ ಕೆಎಂಎಫ್‌ ಡೈರಿ ಪಾರ್ಟ್‌ನರ್‌

ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ ಆರ್‌ಸಿಬಿ ಜೊತೆ ಒಪ್ಪಂದ, ಡೈರಿ ಪಾಲುದಾರ

ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಕಳೆದ ಐಪಿಎಲ್ ಸೀಸನ್‌ನ ಚಾಂಪಿಯನ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್‌ಸಿಬಿಯ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್‌ನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.

Gubbi News: ದಿಢೀರ್ ಮುಷ್ಕರ ಮಾಡಿದ ಗುಬ್ಬಿಯ ಆಟೋ ಚಾಲಕರು..!!

ದಿಢೀರ್ ಮುಷ್ಕರ ಮಾಡಿದ ಗುಬ್ಬಿಯ ಆಟೋ ಚಾಲಕರು..!!

ಗುಬ್ಬಿ ಪಟ್ಟಣದ ಯಾವುದೇ ಬಡಾವಣೆಗೆ ಹೋದರೂ 40 ರೂ.ಗಳಿಗಿಂತ ಹೆಚ್ಚು ಹಣ ಗ್ರಾಹಕ ರಿಂದ ಪಡೆಯಲು ಸಾಧ್ಯವಾಗದು. ಇಂತಹ ಸನ್ನಿವೇಶದಲ್ಲಿ ನಾವು ಬೆಲೆ ಏರಿಕೆ ಮಾಡಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ತೆಗೆದುಕೊಳ್ಳಬೇಕು. ಆದರೆ ಇಲ್ಲಿರುವ ಗೋ ಗ್ಯಾಸ್ ಕಂಪನಿಯವರು ನಮಗೆ ಹೇಳುವುದು ನಮಗೆ ಯಾವುದೇ ದರ ನಿಗದಿಯ ನಿರ್ದೇಶನಗಳಿಲ್ಲ

ಕ್ಷಯರೋಗ ನಿಯಂತ್ರಿಸಬಹುದು, ಗುಣವಾಗಬಹುದು: ಡಾ|| ರಾಜೇಶ ಕೋಳೆಕರ

ಕ್ಷಯರೋಗ ನಿಯಂತ್ರಿಸಬಹುದು, ಗುಣವಾಗಬಹುದು

ಕ್ಷಯರೋಗ(Tuberculosis) ನಿಯಂತ್ರಿಸಬಹುದು ಮತ್ತು ಗುಣವಾಗಬಹುದಾದ ಕಾಯಿಲೆ. 6 ರಿಂದ 9 ತಿಂಗಳು ಔಷದ ತೆಗೆದುಕೊಂದರೆ ಸಂಪೂರ್ಣ ಗುಣವಾಗಬಹುದು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ(World Tuberculosis Day) ನಿಮಿತ್ತ ನಡೆದ ಸಭೆಯಲ್ಲಿ ಮಾತನಾಡಿದರು

Artificial intelligence: ಕೃತಕ ಬುದ್ದಿಮತ್ತೆಯ ಈ ಯುಗದಲ್ಲಿ ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ: ಸಿಇಓ ಡಾ.ವೈ.ನವೀನ್ ಭಟ್

ಕೃತಕ ಬುದ್ದಿಮತ್ತೆಯ ಯುಗದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಮುಂದಿನ ಹೆಜ್ಜೆಯನ್ನು ಹೇಗಿಡಬೇಕು, ಯಾವ ಕ್ಷೇತ್ರದ ಉದ್ಯೋಗದಲ್ಲಿ ಮುಂದುವರೆಯಬೇಕು, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಮತ್ತು ಮುಂದುವರೆಯಬೇಕು. ಯಾವ ಕ್ಷೇತ್ರದಲ್ಲಿ ಕೌಶಲ್ಯಗಳನ್ನು ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಮಾರ್ಗದರ್ಶನವನ್ನು ನೀಡುವಲ್ಲಿ ವೃತ್ತಿಪರ ಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಕೆರಿಯರ್ ಮೇಳಗಳು ಸಹಕಾರಿಯಾಗಲಿವೆ

ಜಿಲ್ಲೆಯ ಸರಕಾರಿ ವಿದ್ಯಾರ್ಥಿನಿಲಯಗಳ ಅನ್ನದ ಕಳವು ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ನಾಗಮೋಹನ್‌ದಾಸ್ ವರದಿ ತಿರಸ್ಕರಿಸಿ, ಮೋಸವನ್ನು ಸರಿಪಡಿಸಿ

ನಾಗಮೋಹನ್‌ದಾಸ್ ಅವರ ವರದಿ(Nagamohandas's report)ಹೊಲೆಯ ಸಂಬಂಧಿತ ಛಲವಾದಿ, ಚನ್ನದಾಸ, ದಾಸ, ಆದಿಕರ್ನಾಟಕ, ಆದಿ ದ್ರಾವಿಡ ಇತರೆ ಹೊಲೆಯ ಸಂಬಂಧಿತ ಜಾತಿಗಳನ್ನು ಒಟ್ಟುಗೂಡಿಸಿ ಜನಸಂಖ್ಯೆಯನ್ನು ಸಮೂದಿಸಿ ಮೀಸಲು ಹಂಚುವ ಬದಲು ಪ್ರತ್ಯೇಕವಾಗಿ ವಿಭಾಗಿಸುವ ಮುಖಾಂತರ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಿರುವ ನಮಗೆ ಘೋರ ಅನ್ಯಾಯ ಮಾಡಿದ್ದಾರೆ

VTU: ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ, ಶ್ರಮವೊಂದೇ ಯಶಸ್ಸಿನ ಕೀಲಿಕೈ, ಅದೃಷ್ಟದ ಹಿಂದೆ ಬೀಳಬೇಡಿ : ವಿಟಿಯು ಕುಲಪತಿ ಡಾ.ವಿದ್ಯಾಶಂಕರ್ ಅಭಿಮತ

ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ, ಶ್ರಮವೊಂದೇ ಯಶಸ್ಸಿನ ಕೀಲಿಕೈ

ವಿಟಿಯು ಸದೃಢವಾಗಿ ಬೆಳೆದಿರುವ ಜಾಗತಿಕ ಮನ್ನಣೆಗೆ ಪಾತ್ರವಾಗಿರುವ ತಾಂತ್ರಿಕ ವಿಶ್ವ ವಿದ್ಯಾಲಯವಾಗಿದೆ. 25 ವರ್ಷಗಳ ಹಿಂದೆ 400 ಕೋಟಿ ವಾರ್ಷಿಕ ವರಮಾನ ಹೊಂದಿದ್ದ ವಿಶ್ವವಿದ್ಯಾಲಯವು ಪ್ರಸ್ತುತ 700 ಕೋಟಿ ವರಮಾನ ಗಳಿಸುವಷ್ಟು ಸದೃಡವಾಗಿದ್ದು ಯಾವುದೇ ಖಾಸಗಿ ವಿಶ್ವವಿದ್ಯಾಲಯಕ್ಕಿಂತ ಕಡಿಮೆಯಿಲ್ಲದಂತೆ ಬೆಳೆದು ನಿಲ್ಲುವ ಮೂಲಕ ವಿದ್ಯಾರ್ಥಿ ಸ್ನೇಹಿ ವಿಶ್ವವಿದ್ಯಾಲಯವಾಗಿದೆ

MLA SN Subbareddy:‌ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಎಲ್ಲರ ಸಹಕಾರ ಅಗತ್ಯ : ಸುಬ್ಬಾರೆಡ್ಡಿ

ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಎಲ್ಲರ ಸಹಕಾರ ಅಗತ್ಯ

ಅನಂತಹ ಮಹನೀಯರನ್ನು ನಾವೆಲ್ಲರೂ ಗೌರವಿಸಬೇಕು, ಅವರ ಜಯಂತಿಯನ್ನು ಅದ್ದೂರಿ ಯಾಗಿ ಆಚರಣೆ ಮಾಡಲು ಎಲ್ಲರೂ ಸಹಕಾರ ನೀಡಬೇಕು. ಈ ಬಾರಿ ಏಪ್ರಿಲ್ 18 ರಂದು ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ರವರ ಜಯಂತಿ ಆಚರಣೆ ಮಾಡಲು ದಲಿತ ಮುಖಂಡರೊಂದಿಗೆ ನಡೆದ ಈ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

Ajit Pawar Death: ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ?; ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲು

ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಕೊಲೆ?; ಬೆಂಗಳೂರಿನಲ್ಲಿ FIR

ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಜಿತ್ ಪವಾರ್ ಅವರ ಸೋದರಳಿಯ ರೋಹಿತ್ ಪವಾರ್ ದೂರು ಸಲ್ಲಿಸಿದ್ದಾರೆ. ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು. ಹೀಗಾಗಿ ಅಜಿತ್ ಪವಾರ್ ಅವರ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ರೋಹಿತ್ ಪವಾರ್ ಕೋರಿದ್ದಾರೆ.

ದಾವಣಗೆರೆ ಉಪಚುನಾವಣೆ; ಬಂಡಾಯ ಅಭ್ಯರ್ಥಿಗಳು ನಮ್ಮವರೇ ಎಂದ ಡಿ.ಕೆ. ಶಿವಕುಮಾರ್

ದಾವಣಗೆರೆ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳು ನಮ್ಮವರೇ: ಡಿಕೆಶಿ

DK Shivakumar: ನಿನ್ನೆ ನಾನು ಹಾಗೂ ಸಿದ್ದರಾಮಯ್ಯ ಅವರು ದಾವಣಗೆರೆ ಹಾಗೂ ಬಾಗಲಕೋಟೆ ಪ್ರವಾಸ ಮಾಡಿ ಬಂದಿದ್ದೇವೆ. ದಾವಣಗೆರೆಯಲ್ಲಿ ಬಹಳಷ್ಟು ಜನ ನಾಮಪತ್ರ ಸಲ್ಲಿಸಿದ್ದು, ಅವರು ನಮ್ಮವರೇ. ನಮ್ಮ ನಾಯಕರೆಲ್ಲರೂ ಅವರ ಜತೆ ಮಾತನಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Belagavi Rains: ಬೆಳಗಾವಿಯಲ್ಲಿ ಗುಡುಗು ಸಹಿತ ಮಳೆ ಅಬ್ಬರ; ಮನೆ, ಮಳಿಗೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ!

ಬೆಳಗಾವಿಯಲ್ಲಿ ಗುಡುಗು ಸಹಿತ ಮಳೆ ಅಬ್ಬರ; ಮನೆ, ಮಳಿಗೆಗಳಿಗೆ ನುಗ್ಗಿದ ನೀರು!

Heavy Rain in Belagavi: ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೂ ಮಳೆ ನೀರು ನುಗ್ಗಿ ಪ್ರಮುಖ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳು ಹಾನಿಗೊಳಗಾಗಿವೆ. ಇನ್ನು ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನರು ಸಂಕಷ್ಟ ಅನುಭವಿಸುವಂತಾಗಿದೆ.

Chikkaballapur News: ಮಾ.26ಕ್ಕೆ ಅಂಬೇಡ್ಕರ್ ಕೊಲಾಜ್ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ಅರಿಯಿರಿ: ಕೋಟಿಗಾನಹಳ್ಳಿ ರಾಮಯ್ಯ

ಮಾ.26ಕ್ಕೆ ಅಂಬೇಡ್ಕರ್ ಕೊಲಾಜ್ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ಅರಿಯಿರಿ

ಅಂಬೇಡ್ಕರ್ ಅವರ ಬಾಲ್ಯ ವಿದ್ಯಾಭ್ಯಾಸ, ನಿಮ್ನವರ್ಗಗಳ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ಸಂವಿಧಾನ ರಚನೆ, ಬೌದ್ಧ ಧಮ್ಮ ಸ್ವೀಕಾರದಂತಹ ಘಟನೆಗಳನ್ನು ಒಂದರ ಹಿಂದೊಂದರಂತೆ ಭಿನ್ನ ಭಿನ್ನ ದೃಶ್ಯಗಳ ಮೂಲಕ ಕೋಲಾಜ್ ಶೈಲಿಯಲ್ಲಿ ಈ ನಾಟಕ ಕಟ್ಟಿಕೊಡಲಾಗಿದೆ. ಈ ನಾಟಕ ನೋಡುವ ಮೂಲಕ ನಿಜದ ಅಂಬೇಡ್ಕರ್ ಅವರನ್ನು ಅರಿಯುವ ಕೆಲಸ ಮಾಡಬೇಕು

ʼಬಂದರೋ ಬಂದರೋ ಭಾವ ಬಂದರೋʼ; ರಿಕ್ಕಿ ರೈ ಕಾರು ಡ್ರಿಫ್ಟಿಂಗ್‌ ಮಾಡಿಲ್ಲ ಎಂದ ವಕೀಲರ ಕಾಲೆಳೆದ ಪೊಲೀಸರು!

ಕಾರು ಡ್ರಿಫ್ಟಿಂಗ್‌; ರಿಕ್ಕಿ ರೈ ಪರ ವಕೀಲರ ಕಾಲೆಳೆದ ಪೊಲೀಸರು!

Lamborghini stunt: ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ ಅವರ ಹೇಳಿಕೆಗೆ ಪೋಸ್ಟ್‌ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್‌ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ ಎಂದು ಸಲಹೆ ನೀಡಿದ್ದಾರೆ.

ಅತ್ಯಾಧುನಿಕ ಸೈಬರ್ ನೈಫ್ ಚಿಕಿತ್ಸೆಯಿಂದ ಚೇತರಿಸಿಕೊಂಡ 30 ವರ್ಷದ ಮಹಿಳೆ

ಅತ್ಯಾಧುನಿಕ ಸೈಬರ್ ನೈಫ್ ಚಿಕಿತ್ಸೆಯಿಂದ ಚೇತರಿಸಿಕೊಂಡ 30 ವರ್ಷದ ಮಹಿಳೆ

ಬಾಲ್ಯದಿಂದಲೇ ಈ ಸಮಸ್ಯೆಗೆ ತುತ್ತಾಗಿದ್ದ ಈ ಮಹಿಳೆ, ಕಳೆದ 25 ವರ್ಷಗಳಿಂದ ಪ್ರತಿದಿನ 30 ರಿಂದ 40 ಬಾರಿ ನಿಯಂತ್ರಣವಿಲ್ಲದ ನಗುವಿನ ಫಿಟ್ಸ್ ಅನುಭವಿಸುತ್ತಿದ್ದರು. ಮೆದುಳಿನ ಅಸಹಜ ಚಟುವಟಿಕೆಯಿಂದ ಉಂಟಾಗುವ ಈ ಸ್ಥಿತಿಯಿಂದಾಗಿ ಅವರ ದೈನಂದಿನ ಜೀವನ ದುಸ್ತರವಾಗಿತ್ತು. ಹಲವಾರು ಫಿಟ್ಸ್ ವಿರೋಧಿ ಮಾತ್ರೆಗಳು ಮತ್ತು ನರರೋಗ ತಪಾಸಣೆ ಗಳನ್ನು ಮಾಡಿಸಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ

Laxmi Hebbalkar: ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಜೆಪಿಗರಿಂದ ಅಪಪ್ರಚಾರ: ಸಚಿವೆ ಹೆಬ್ಬಾಳ್ಕರ್‌ ಕಿಡಿ

ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಜೆಪಿಗರಿಂದ ಅಪಪ್ರಚಾರ: ಹೆಬ್ಬಾಳ್ಕರ್‌

Laxmi Hebbalkar: ನಾನು 5 ಸಾವಿರ ಕೋಟಿ ರೂ. ಹಗರಣ ಮಾಡಿದ್ದರೆ ಮೋದಿ ಸರ್ಕಾರದ ಇಡಿ ನಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿತ್ತು. ಮಾತಿನ ಚಪಲಕ್ಕೆ ಯೋಜನೆ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆಕ್ರೋಶ ಹೊರಹಾಕಿದ್ದಾರೆ.

ಧಾರವಾಡದಲ್ಲಿ ಮಾಜಿ ಶಾಸಕನ ಪುತ್ರ ಅನುಮಾನಾಸ್ಪದ ಸಾವು; ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ!

ಧಾರವಾಡದಲ್ಲಿ ಮಾಜಿ ಶಾಸಕನ ಪುತ್ರ ಅನುಮಾನಾಸ್ಪದ ಸಾವು

Dharwad Murder Case: ಧಾರವಾಡ ಜಿಲ್ಲೆಯ ರಾಮಾಪುರ ಗ್ರಾಮದ ಸಮೀಪ ಘಟನೆ ನಡೆದಿದೆ. ದುಷ್ಕರ್ಮಿಗಳು ಮಾಜಿ ಶಾಸಕನ ಪುತ್ರನನ್ನು ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Anganwadi workers protest: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಂಧಾನ ಯಶಸ್ವಿ; ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು

ಸಚಿವೆ ಹೆಬ್ಬಾಳ್ಕರ್‌ ಸಂಧಾನ; ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು

ಅಂಗನವಾಡಿ ಕೇಂದ್ರಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಬಗ್ಗೆ ಸರ್ಕಾರ ಸಾಕಷ್ಟು ಕಾಳಜಿ ವಹಿಸಿದೆ. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂಬ ಭರವಸೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

Loading...