ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಶ್ರೀ ರಾಘವೇಂದ್ರ ಸ್ವಾಮಿ ಮಂತ್ರಾಲಯ ಶಾಖಾ ಮಠ ನಿರ್ಮಾಣಕ್ಕೆ ಉಚಿತ ಜಾಗ ನೀಡಿದ ದಂಪತಿ

ತುಮಕೂರಿನಲ್ಲಿ ಮಂತ್ರಾಲಯ ಶಾಖಾ ಮಠ ನಿರ್ಮಾಣಕ್ಕೆ ಜಾಗ ನೀಡಿದ ದಾನಿಗಳು

Tumkur News: ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಗಳವರ ನೂತನ ಶಾಖಾ ಮಠವು ತುಮಕೂರು ನಗರದ ಗೆದ್ದಲಹಳ್ಳಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈ ಪವಿತ್ರ ಕಾರ್ಯಕ್ಕೆ ರಾಮಸ್ವಾಮಿ ಹಾಗೂ ಶೀಲಾ ದಂಪತಿ ಸ್ವಂತ ಜಾಗವನ್ನು ಉಚಿತವಾಗಿ ನೀಡಿದ್ದಾರೆ.

Hospet News: 25ಕ್ಕೆ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ: ಉಪಲೋಕಾಯುಕ್ತ ಬಿ.ವೀರಪ್ಪ ಭಾಗಿ

25ಕ್ಕೆ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ: ಉಪಲೋಕಾಯುಕ್ತ ಬಿ.ವೀರಪ್ಪ ಭಾಗಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಜು.25ರಂದು ಮಧ್ಯಾಹ್ನ 12 ಗಂಟೆಗೆ ಬಳ್ಳಾರಿ ರಸ್ತೆಯ ಶ್ರೀ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

MLA Shashikala Jolle: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನಾಡಿಯ 30ಕ್ಕೂ ಹೆಚ್ಚು ಕಾರ್ಯಕರ್ತರು: ಶಾಸಕಿ ಶಶಿಕಲಾ ಜೊಲ್ಲೆ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನಾಡಿಯ 30ಕ್ಕೂ ಹೆಚ್ಚು ಕಾರ್ಯಕರ್ತರು

ಕ್ಷೇತ್ರದ ಬೆನಾಡಿ ಗ್ರಾಮದ ದಲಿತ ಸಮಾಜದ ಪ್ರಮುಖ ಮುಖಂಡರಾದ ಬಾಳಾಸೋ ಮಾಳಗೆ, ಮೋಹನ ಕೋರೆ, ಅಜೀತ ಮಾನೆ ಹಾಗೂ ಮಹಾದೇವ ಬೋರೆ ಅವರ ನೇತೃತ್ವದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್ (NCP) ಹಾಗೂ ಕಾಂಗ್ರೆಸ್ ಪಕ್ಷದ 30ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಇತ್ತೀಚೆಗೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರ್ಪಡೆಯಾದರು.

Sandur News: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಆಜಾದ್: ಕುಮಾರ್ ಎಸ್.ನಾನಾವಟೆ

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಆಜಾದ್

​ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತಮ್ಮ ಹೆಸರು 'ಆಜಾದ್' (ಸ್ವಾತಂತ್ರ್ಯ), ತಂದೆಯ ಹೆಸರು 'ಸ್ವಾತಂತ್ರ್ಯ' ಮತ್ತು ವಿಳಾಸ 'ಜೈಲು' ಎಂದು ಉತ್ತರಿಸಿ ಬ್ರಿಟಿಷ್ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದ್ದರು. ಈ ದಿಟ್ಟತನಕ್ಕಾಗಿ ಅವರಿಗೆ 14 ಚಾಟಿಯೇಟಿನ ಶಿಕ್ಷೆ ವಿಧಿಸಲಾಯಿತು. ಅದೇ ಸಂದರ್ಭದಲ್ಲಿ 'ತಾನು ಎಂದಿಗೂ ಬ್ರಿಟಿಷರಿಗೆ ಜೀವಂತವಾಗಿ ಬಂಧಿಯಾಗುವುದಿಲ್ಲ' ಎಂದು ಪ್ರತಿಜ್ಞೆ ಮಾಡಿದ್ದರು," ಎಂದು ನಾನಾವಟೆ ಸ್ಮರಿಸಿದರು.

Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್

ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ

ಕೇಂದ್ರ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Union Home Minister Amit Shah, Education Minister Dharmendra Pradhan) ಅವರ ರಾಜೀನಾಮೆ ಪಡೆಯದಿದ್ದರೆ ಯುವ ಸಂಗ್ರಾಮ ಮತ್ತಷ್ಟು ಪ್ರಕೋಪಕ್ಕೆ ತಲುಪ ಲಿದೆ. ಹೋರಾಟದ ಕಿಚ್ಚಿಗೆ ಸರ್ವಾಧಿಕಾರಿಗಳೆಲ್ಲಾ ಭಸ್ಮವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Folk singer Kesturu Govinda Raju: ಗುಬ್ಬಿಯಲ್ಲಿ ಜನಪದ ಗಾಯಕ ಕೆಸ್ತೂರು ಗೋವಿಂದರಾಜುಗೆ ಸನ್ಮಾನ

ಗುಬ್ಬಿಯಲ್ಲಿ ಜನಪದ ಗಾಯಕ ಕೆಸ್ತೂರು ಗೋವಿಂದರಾಜುಗೆ ಸನ್ಮಾನ

ತಂದೆಯಿಂದ ಬಳುವಳಿಯಾಗಿ ಬಂದ ಜನಪದ ಸಂಗೀತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬಾಲ್ಯದಿಂದಲೂ ನಿರಂತರವಾಗಿ ಹಾಡುತ್ತಾ ಬಂದಿದ್ದೇನೆ. ದೂರದರ್ಶನದಂತಹ ಪ್ರತಿಷ್ಠಿತ ವೇದಿಕೆ ಯಲ್ಲಿ ರಾಜ್ಯದ ಜನರ ಮುಂದೆ ಪ್ರತಿಭೆ ಪ್ರದರ್ಶಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿ. ಈ ಸಾಧನೆಗೆ ನನ್ನ ಕುಟುಂಬ, ಹಿತೈಷಿ ಗಳು ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹವೇ ಪ್ರಮುಖ ಕಾರಣ

Chikkaballapur News: ಜು.27-29ರವರೆಗೆ ಕಾಲಜ್ಞಾನಿ ಸದ್ಗುರು ಶ್ರೀಯೋಗಿನಾರೇಯಣ ಗುರುಪೂಜಾ ಸಂಗೀತ ಮಹೋತ್ಸವ

ಕೈವಾರದಲ್ಲಿ 72 ಗಂಟೆಗಳ ಅಖಂಡ ನಾದೋಪಾಸನೆ

ಹರಿ-ಹರ ಕ್ಷೇತ್ರವಾಗಿರುವ ಕೈವಾರವು ಭಕ್ತಿಯ ಆರಾಧನಾ ಕೇಂದ್ರವಾಗಿದ್ದು, ಪ್ರತಿ ನಿತ್ಯ ಭಜನೆ, ಹರಿಕಥೆ, ಸಂಗೀತ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕಾಲಜ್ಞಾನಿ ಸದ್ಗುರು ತಾತಯ್ಯನವರ 300ನೇ ಜಯಂತಿ ವರ್ಷಾಚರಣೆ ಅಂಗವಾಗಿ ಗುರುಪೂಜಾ ಮಹೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ

ʼʼಕೆಪಿಎಸ್‌ಸಿ ಕರ್ಮಕಾಂಡದ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿಲ್ಲವೇಕೆ?ʼʼ ಪ್ರಲ್ಹಾದ್‌ ಜೋಶಿ ವಾಗ್ದಾಳಿ

ಕೆಪಿಎಸ್‌ಸಿ ಕರ್ಮಕಾಂಡ ಬಗ್ಗೆ ರಾಹುಲ್ ಗಾಂಧಿ ಮೌನವೇಕೆ: ಜೋಶಿ

Pralhad Joshi: ಕೇಂದ್ರದಲ್ಲಿ ಇಷ್ಟೊಂದು ರಾದ್ಧಾಂತ ಮಾಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ಕೆಪಿಎಸ್‌ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.

MLA KH Puttaswamy Gowda: ಬರ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಲಿ: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ

ಬರ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಲಿ

ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದರೂ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾ ಗದ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲ್ಕೈದು ವರ್ಷಗಳಿಗೊಮ್ಮೆ ಬರ ಕಾಣಿಸಿ ಕೊಳ್ಳುವುದು ಸಾಮಾನ್ಯವಾಗಿದ್ದು, ಅದನ್ನು ಸಮರ್ಥ ವಾಗಿ ಎದುರಿಸಲು ತಾಲೂಕು ಆಡಳಿತ ಸಜ್ಜಾಗಿರಬೇಕು

ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌; ನಂದಿನಿ ತುಪ್ಪ, ಬೆಣ್ಣೆ ಬೆಲೆ ಹೆಚ್ಚಳ: ನಾಳೆಯಿಂದಲೇ ಜಾರಿ

ನಾಳೆಯಿಂದ ನಂದಿನಿ ತುಪ್ಪ, ಬೆಣ್ಣೆ ಮತ್ತಷ್ಟು ದುಬಾರಿ

Nandini Ghee Price: ಕರ್ನಾಟಕ ಹಾಲು ಮಹಾಮಂಡಳವು ದಿಢೀರ್ ಆಗಿ ನಂದಿನಿ ತುಪ್ಪ ಮತ್ತು ಬೆಣ್ಣೆ ದರ ಹೆಚ್ಚಿಸಿದೆ. ಒಂದು ಕೆ.ಜಿ. ತುಪ್ಪಕ್ಕೆ 15 ರುಪಾಯಿ ಏರಿಕೆಯಾಗಿದ್ದರೆ, ಕೆ.ಜಿ. ಬೆಣ್ಣೆ ಬರೋಬ್ಬರಿ 50 ರುಪಾಯಿ ದುಬಾರಿಯಾಗಿದೆ. ಹೊಸ ದರ ಶುಕ್ರವಾರವೇ (ಜುಲೈ 24) ಜಾರಿ ಬರಲಿದೆ .

Gauribidanur News: ವಿಧುರಾಶ್ವತ್ಥದಲ್ಲಿ ದೇಶಿ ಸಾಂಸ್ಕೃತಿಕ ಸಂಭ್ರಮ; ಜಾನಪದ ಕಲೆಗಳ ವೈಭವ ಅನಾವರಣ

ದೇಶಿ ಸಂಸ್ಕೃತಿ ಉಳಿದರೆ ಮಾತ್ರ ನಾಡಿನ ಆತ್ಮ ಉಳಿಯುತ್ತದೆ

ನಮ್ಮ ನಾಡಿನ ಮಣ್ಣಿನ ವಾಸನೆ, ಜೀವನ ಮೌಲ್ಯಗಳು ಹಾಗೂ ಸ್ಥಳೀಯ ಸಂಸ್ಕೃತಿಯ ಜೀವಂತ ಪ್ರತೀಕವೇ ಜಾನಪದ ಕಲೆಗಳಾಗಿವೆ. ಹಬ್ಬ-ಹರಿದಿನಗಳು, ಕೃಷಿ ಚಟುವಟಿಕೆಗಳು ಹಾಗೂ ಶುಭ ಸಮಾ ರಂಭಗಳಲ್ಲಿ ಮೊಳಗುತ್ತಿದ್ದ ಜಾನಪದ ಹಾಡುಗಳು, ಲಾವಣಿ, ಸೋಬಾನೆ ಪದಗಳು, ಡೊಳ್ಳು ಕುಣಿತ, ವೀರಗಾಸೆ, ಗಾಡಿಗೊಂಬೆ, ತಮಟೆ ಮತ್ತು ಕಹಳೆಗಳು ನಮ್ಮ ಇತಿಹಾಸ ಹಾಗೂ ಸಾಮಾಜಿಕ ಮೌಲ್ಯ ಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜೀವಂತ ಪರಂಪರೆಯಾಗಿವೆ

Muddenahalli News: ಸತ್ಯಸಾಯಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮೌಲ್ಯಾಧಾರಿತ ಶಿಕ್ಷಣ ಸಮ್ಮೇಳನಕ್ಕೆ ಚಾಲನೆ

ಮೌಲ್ಯಾಧಾರಿತ ಶಿಕ್ಷಣವೇ ಮಾನವೀಯ ಸಮಾಜದ ಅಡಿಪಾಯ

ಇಂದು ಶಿಕ್ಷಣ ಸಂಸ್ಥೆಗಳು ಮೌಲ್ಯಗಳಿಂದ ದೂರ ಸಾಗುತ್ತಿರುವಾಗ ಜೈಲುಗಳು ಅಪರಾಧಿಗಳಿಂದ ತುಂಬುತ್ತಿವೆ. ಒಡೆದ ಕುಟುಂಬಗಳು, ನೈತಿಕ ಮೌಲ್ಯಗಳ ಕುಸಿತ ಮತ್ತು ಸಾಮಾಜಿಕ ಅಸ್ಥಿರತೆ ಹೆಚ್ಚು ತ್ತಿರುವ ಈ ಸಂದರ್ಭದಲ್ಲಿ ಜೈಲುಗಳನ್ನು ಹೆಚ್ಚಿಸುವುದಕ್ಕಿಂತ ಶಾಲೆಗಳನ್ನು ಬಲಪಡಿಸುವುದು ಸಮಾಜಕ್ಕೆ ಶಾಶ್ವತ ಪರಿಹಾರ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಉತ್ತಮ ಮನುಷ್ಯರನ್ನು ರೂಪಿಸಬೇಕು

Chikkaballapur News: ಮಂಚೇನಹಳ್ಳಿ ಪಿಎಚ್‌ಸಿಯಲ್ಲಿ ಮೂಲಸೌಕರ್ಯ ಕೊರತೆ ನಿವಾರಣೆಗೆ ಕ್ರಮಕ್ಕೆ ಜಯಕುಮಾರ್ ಆಗ್ರಹ

ಆರೋಗ್ಯ ಕೇಂದ್ರಕ್ಕೆ ಜಯ ಫೌಂಡೇಶನ್‌ನಿಂದ ಫ್ರಿಜ್, ಆಸನಗಳ ಕೊಡುಗೆ

ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳಿವೆ. ಪ್ರಸ್ತುತ ಒಬ್ಬ ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿರುವುದರಿಂದ ರೋಗಿಗಳು ಗಂಟೆಗಟ್ಟಲೆ ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಗರ್ಭಿಣಿಯರು ಹಾಗೂ ವೃದ್ಧರಿಗೆ ಸಮರ್ಪಕ ವಾಗಿ ಕುಳಿತುಕೊಳ್ಳುವ ವ್ಯವಸ್ಥೆಯೂ ಇಲ್ಲದ ಕಾರಣ ಆಸನಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

SIR: 2002ರ ವಿವರ ಕಡ್ಡಾಯವಲ್ಲ; ಮಹತ್ವದ ಮಾಹಿತಿ ಹಂಚಿಕೊಂಡ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್

SIRಗೆ 2002ರ ವಿವರ ಕಡ್ಡಾಯವಲ್ಲ

V Anbukumar: ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆ ರಾಜ್ಯದಲ್ಲಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಅದಾಗ್ಯೂ ಈ ಬಗ್ಗೆ ಮೂಡಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಇದೀಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ ನೀಡಿ 2002ರ ಸ್ವಯಂ ಹಾಗೂ ಪೋಷಕರ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

BY Vijayendra: ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ಹುನ್ನಾರ: ಬಿ.ವೈ. ವಿಜಯೇಂದ್ರ ಆರೋಪ

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ಹುನ್ನಾರ: ವಿಜಯೇಂದ್ರ

BY Vijayendra: ನೀಟ್ ವಿಚಾರದಲ್ಲಿ ಯುವಕರನ್ನು ಬೀದಿಗೆ ತರುವುದನ್ನು ಬಿಟ್ಟು ಷಡ್ಯಂತ್ರ ಮಾಡದೇ ಸಂಸತ್ತಿನಲ್ಲಿ ಚರ್ಚೆಗೆ ಬರಬೇಕು ಎಂದು ಒತ್ತಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಕಾಂಗ್ರೆಸ್ ಪಕ್ಷ ಹುನ್ನಾರ ನಡೆಸುತ್ತಿದೆ, ಇದು ಖಂಡಿತ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪೊಲೀಸ್ ಸುಪರ್ದಿಯಲ್ಲಿದ್ದ ನಮ್ಮ ಮೇಲೆ ಹಲ್ಲೆ, ಇದು ಪೂರ್ವಯೋಜಿತ ಗೂಂಡಾಗಿರಿ: ಆರ್. ಅಶೋಕ್

ಇದು ಪೂರ್ವಯೋಜಿತ ಗೂಂಡಾಗಿರಿ: ಆರ್. ಅಶೋಕ್ ಆರೋಪ

R Ashok: ಪೊಲೀಸ್ ಸುಪರ್ದಿಯಲ್ಲಿದ್ದ ನಮ್ಮ ಮೇಲೆ ಹಲ್ಲೆ ಆಗಿದೆ. ಇದು ಪೂರ್ವಯೋಜಿತ ಕೃತ್ಯ ಎಂದು ಆರೋಪಿಸಿರುವ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಹರೀಶ್, ಅಶ್ವತ್ಥನಾರಾಯಣ್, ರಾಮಮೂರ್ತಿ ಮಾತ್ರವಲ್ಲದೇ ಕಾರ್ಯಕರ್ತರ ಮೇಲೆ ಪೂರ್ವನಿಯೋಜಿತ ಗೂಂಡಾಗಿರಿ ಮಾಡಿದ್ದಾರೆ ಎಂದು ದೂರಿದ್ದಾರೆ.

Bengaluru News: ಬೆಂಗಳೂರಿನಲ್ಲಿ ಉದ್ಘಾಟನೆಗೂ ಮುನ್ನ ನೆಲ ಕಚ್ಚಲಿದೆ 200 ಕೋಟಿ ರುಪಾಯಿ ವೆಚ್ಚದ 18 ಅಂತಸ್ತಿನ ಕಟ್ಟಡ!

200 ಕೋಟಿ ರು. ವೆಚ್ಚದ 18 ಅಂತಸ್ತಿನ ಕಟ್ಟಡ ಕೆಡವಲು ಮುಂದಾದ GBA

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ ಬಹುಮಹಡಿ ಕಟ್ಟಡವೊಂದನ್ನು ನೆಲಸಮಗೊಳಿಸಲು ಮುಂದಾಗಿದೆ. ಅಪಾಯಕಾರಿಯಾಗಿರುವ, ಸುಮಾರು 200 ಕೋಟಿ ರುಪಾಯಿ ವೆಚ್ಚದ 18 ಮಹಡಿಗಳ ಬೃಹತ್ ಅಪಾರ್ಟ್‌ಮೆಂಟ್ ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಕಟ್ಟಡ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದೇ ಇದಕ್ಕೆ ಕಾರಣ.

ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು: ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ

ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು: ಸಿಎಂ

CM DK Shivakumar: ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಚರ್ಚೆಯಾಗಬೇಕು. ಟೀಕೆ ಮಾಡಿದಾಗ ನಾವು ಹಾಗೂ ನೀವು ಇಬ್ಬರೂ ಒಪ್ಪಿ ತಿದ್ದಿಕೊಳ್ಳಬೇಕು. ನಾವು ಯುವಕರ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ.

ವಿದ್ಯಾರ್ಥಿ-ಯುವ ಸಮೂಹದಲ್ಲಿ ರಾಹುಲ್ ಗಾಂಧಿ ಅಪಪ್ರಚಾರ; ಪ್ರಲ್ಹಾದ್‌ ಜೋಶಿ ಆರೋಪ

ವಿದ್ಯಾರ್ಥಿ-ಯುವ ಸಮೂಹದಲ್ಲಿ ರಾಹುಲ್ ಗಾಂಧಿ ಅಪಪ್ರಚಾರ; ಜೋಶಿ ಆರೋಪ

Pralhad Joshi: ರಾಹುಲ್ ಗಾಂಧಿ ವಿದ್ಯಾರ್ಥಿ-ಯುವ ಸಮುದಾಯದಲ್ಲಿ ಇಂಥ ತಪ್ಪು ಮಾಹಿತಿ ಹರಡುತ್ತಿರುವುದು ದುರದೃಷ್ಟಕರ ಮತ್ತು ತಾವು ರಾಜಕೀಯವಾಗಿ ಪ್ರಚಲಿತದಲ್ಲಿರಲು ವಿದ್ಯಾರ್ಥಿಗಳ ವಿಷಯವನ್ನು ರಾಜಕೀಕರಣಗೊಳಿಸುವುದು ತೀವ್ರ ಬೇಸರದ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿಯಲ್ಲಿ ಭಾರಿ ಅಕ್ರಮದ ವಾಸನೆ; ಪಶು ವೈದ್ಯಾಧಿಕಾರಿ ಹುದ್ದೆ 80 ಲಕ್ಷ ರುಪಾಯಿಗೆ ಸೇಲ್‌?

ಕೆಪಿಎಸ್‌ಸಿಯಲ್ಲಿ ಅಕ್ರಮ: ಪಶು ವೈದ್ಯಾಧಿಕಾರಿ ಹುದ್ದೆಗೆ 80 ಲಕ್ಷ ರು.?

ಅತ್ತ ದೆಹಲಿಯಲ್ಲಿ ನೀಟ್‌ ಅಕ್ರಮದ ವಿರುದ್ಧ ಹೋರಾಟ ಭುಗಿಲೆದ್ದಿದ್ದರೆ ಇತ್ತ ರಾಜ್ಯದಲ್ಲಿ ಕೆಪಿಎಸ್‌ಸಿಯಲ್ಲಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಗೋಲ್ಮಾಲ್‌ ನಡೆದಿದೆ ಎಂದು ಬಹಿರಂಗಪಡಿಸುವ ಆಡಿಯೊ ಹೊರ ಬಂದಿದೆ. ಒಂದು ಹುದ್ದೆಗೆ ಬರೋಬ್ಬರಿ 80 ಲಕ್ಷ ರುಪಾಯಿ ಡೀಲ್ ಆಗಿದೆ ಎಂದು ಮೂಲಗಳು ತಿಳಿಸಿವೆ.

Bengaluru Power Cut: ಜುಲೈ 24ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ; ವರದಿ ಇಲ್ಲಿದೆ

ಜುಲೈ 24ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Bengaluru Power Cut: 66/11 ಕೆವಿ ಯಲಹಂಕ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದ ಹಲವೆಡೆ ಜುಲೈ 24ರಂದು ಬುಧವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಸರ್ಕಾರಿ ಶಾಲೆಗಳನ್ನು ನಗರದ ಖಾಸಗಿ ಶಾಲೆಗಳು ದತ್ತು ಪಡೆಯಬೇಕು, ಇಲ್ಲದಿದ್ದರೆ ಆ ಶಾಲೆಗಳ ಶುಲ್ಕಕ್ಕೆ ಮಿತಿ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ಸರ್ಕಾರಿ ಶಾಲೆಗಳನ್ನು ನಗರದ ಖಾಸಗಿ ಶಾಲೆಗಳು ದತ್ತು ಪಡೆಯಬೇಕು ಸಿಎಂ

CM DK Shivakumar: ನಗರ ಪ್ರದೇಶಗಳಲ್ಲಿ 50 ಸಾವಿರಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿರುವ ಶಾಲೆಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ಒಂದು ವೇಳೆ ಈ ಶಾಲೆಗಳು ದತ್ತು ಪಡೆಯದೇ ಇದ್ದರೆ ಈ ಶಾಲೆಗಳ ಶುಲ್ಕಗಳಿಗೆ ಮಿತಿ ಹಾಕಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Pravasi Prapancha: ಧರ್ಮದೊಂದಿಗೆ ಜ್ಞಾನ-ವಿಜ್ಞಾನದ ಬೆಳಕು

ಧರ್ಮದೊಂದಿಗೆ ಜ್ಞಾನ-ವಿಜ್ಞಾನದ ಬೆಳಕು

ಭೋವಿ ಸಮುದಾಯದ ಬದುಕನ್ನು ರೂಪಿಸುತ್ತಿರುವ ಶಕ್ತಿ, ಚಿತ್ರದುರ್ಗದ ಶಿವಯೋಗಿ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು. ಈ ಮಹಾನ್ ಚೇತನದ 40ನೆಯ ಜನ್ಮವರ್ಧಂತಿಯನ್ನು ಜುಲೈ 18ರಂದು ಸಂಭ್ರಮದಿಂದ ಆಚರಿಸಗಿದ್ದು, ಅವರೊಂದಿಗೆ ಸಂದರ್ಶನ ಇಲ್ಲಿದೆ.

ಶೃಂಗೇರಿ ಅಂಚೆ ಮತ ಮರುಎಣಿಕೆ ಪ್ರಕರಣ: ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಸೂಚನೆ

ಶೃಂಗೇರಿ ಶಾಸಕ ಸ್ಥಾನ: ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಸೂಚನೆ

Supreme Court: ಶೃಂಗೇರಿ ಶಾಸಕರಾಗಿ ಆಯ್ಕೆಯಾದ ಬಿಜೆಪಿಯ ಡಿ.ಎನ್‌. ಜೀವರಾಜ್‌ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಮತ್ತೆ ಬಿಗ್‌ ಶಾಕ್‌ ಎದುರಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಮುಂದುವರಿಸಲು ಸೂಚನೆ ನೀಡಿ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿಕೆ ಮಾಡಿದೆ. ಆ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಟಿ.ಡಿ. ರಾಜೇಗೌಡ ಶಾಸಕರಾಗಿ ಮುಂದುವರಿಯಲಿದ್ದಾರೆ.

Loading...